»   » 'ಮಿಸ್ ಇಂಡಿಯಾ ಸೂಪರ್ ಮಾಡೆಲ್' ಪಟ್ಟಕ್ಕೇರಿದ ಪುಟ್ಟಗೌರಿ ರಂಜನಿ

'ಮಿಸ್ ಇಂಡಿಯಾ ಸೂಪರ್ ಮಾಡೆಲ್' ಪಟ್ಟಕ್ಕೇರಿದ ಪುಟ್ಟಗೌರಿ ರಂಜನಿ

Posted By:
Subscribe to Filmibeat Kannada
ಪುಟ್ಟ ಗೌರಿ ಮದುವೆಯ ಗೌರಿ ಅಲಿಯಾಸ್ ರಂಜನಿ ರಾಘವನ್ ಈಗ ಮಿಸ್ ಇಂಡಿಯಾ | Filmibeat Kannada

ಕೆಲ ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಪೇಜ್ ಗಳ ಹಾಟ್ ಫೆವರೇಟ್ ಆಗಿದ್ದ 'ಪುಟ್ಟಗೌರಿ' ಈಗ 'ಮಿಸ್ ಇಂಡಿಯಾ ಸೂಪರ್ ಮಾಡೆಲ್' ಆಗಿ ಹೊರಹೊಮ್ಮಿದ್ದಾರೆ.

'ಪುಟ್ಟಗೌರಿ' ಧಾರಾವಾಹಿಯಲ್ಲಿ ಮೈತುಂಬ ಸೀರೆಯುಟ್ಟು, ಹಣೆಯಲ್ಲಿ ಕುಂಕುಮ ಇಟ್ಟು, ಜಡೆಯಲ್ಲಿ ಹೂವು ತೊಟ್ಟು ಸಂಪ್ರದಾಯಸ್ಥ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ರಂಜನಿ ರಾಘವನ್ ಅಲಿಯಾಸ್ ಪುಟ್ಟಗೌರಿ ಈಗ ಫ್ಯಾಶನ್ ಲೋಕವನ್ನ ತನ್ನತ್ತ ತಿರುಗಿಸಿಕೊಂಡಿದ್ದಾರೆ.

ಟ್ರೋಲ್ ಮಾಡುವವರಿಗೆ ತನ್ನ ಮಾತಿನಲ್ಲೇ ಪೆಟ್ಟು ಕೊಟ್ಟ ಪುಟ್ಟಗೌರಿ!

ಯಾವಾಗಲೂ ಅಳುಮುಂಜಿಯ ಪಾತ್ರದಲ್ಲಿ ಕಾಣಿಸುವ ಗೌರಿಯನ್ನ ಕಂಡ್ರೆ ಎಲ್ಲರಿಗೂ ಅಚ್ಚುಮೆಚ್ಚು. ಟಿವಿ ಪ್ರೇಕ್ಷಕರಂತೂ ಗೌರಿ ಕಷ್ಟ ನೋಡಿ ಕಣ್ಣೀರು ಹಾಕುವಷ್ಟು ಮೋಡಿ ಮಾಡಿದೆ ಈ ಧಾರಾವಾಹಿ ಮತ್ತು ನಟಿ ರಂಜನಿ. ಹೀಗೆಲ್ಲಾ ಇದ್ದ ರಂಜನಿ ಈಗ ಮಿಸ್ ಇಂಡಿಯಾ ಸೂಪರ್ ಮಾಡೆಲ್ ಆಗಿದ್ದು ಹೇಗೆ ಎಂದು ಆಶ್ಚರ್ಯವಾಗಿದೆಯಾ? ಇದು ನಿಜ ಕಣ್ರೀ. ಮುಂದೆ ಓದಿ....

ಮಿಸ್ ಇಂಡಿಯಾ ಸೂಪರ್ ಮಾಡೆಲ್

ಸ್ಟಾರ್ ಫಿಲ್ಮ್ ಮೇಕರ್ಸ್ ಸ್ಕೂಲ್ ಆಫ್ ಫ್ಯಾಷನ್ ವತಿಯಿಂದ ಆಯೋಜಿತವಾಗಿದ್ದ 'ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017'ರಲ್ಲಿ ಭಾಗವಹಿಸಿದ್ದ ರಂಜನಿ ರಾಘವನ್ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಈ ವರ್ಷದ ಮಿಸ್ ಇಂಡಿಯಾ ಸೂಪರ್ ಮಾಡೆಲ್ ತಮ್ಮದಾಗಿಸಿಕೊಂಡಿದ್ದಾರೆ.

ಎರಡನೇ ಸ್ಥಾನ, ಮೂರನೇ ಸ್ಥಾನ

ರಂಜನಿ ರಾಘವನ್ ಮೊದಲ ಸ್ಥಾನ ಪಡೆದುಕೊಂಡ್ರೆ, ಐಶ್ವರ್ಯ ಮೊದಲನೇ ರನ್ನರ್ ಅಪ್ ಹಾಗೂ ‌ಅನಿತಾ ಎರಡನೇ ರನ್ನರ್ ಅಪ್ ಸ್ಥಾನಗಳನ್ನು ಪಡೆದುಕೊಂಡರು. ಒಟ್ಟು 44 ರೂಪದರ್ಶಿಗಳು ಈ ಶೋನಲ್ಲಿ ಭಾಗವಹಿಸಿದ್ದರು.

ಧಾರಾವಾಹಿ ಜೊತೆ ಸಿನಿಮಾ

'ಪುಟ್ಟಗೌರಿ ಮದುವೆ' ಧಾರಾವಾಹಿಯ ಜೊತೆ ಜೊತೆಯಲ್ಲಿ 'ರಾಜಹಂಸ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಅಷ್ಟಾಗಿ ಸದ್ದು ಮಾಡದೇ ಹೋದರು, ರಂಜನಿ ಅಭಿನಯ ಮೋಡಿ ಮಾಡಿತ್ತು.

'ಸೂಫಿ' ಚಿತ್ರಕ್ಕೆ ನಾಯಕಿ

ರಾಜಹಂಸ ಚಿತ್ರದ ನಂತರ ಸೂಫಿ ಎಂಬ ಹೊಸ ಚಿತ್ರಕ್ಕೆ ರಂಜನಿ ರಾಘವನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಶೀವು ಜಮಖಂಡಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. 'ಜಸ್ಟ್ ಆಕಸ್ಮಿಕ' ಖ್ಯಾತಿಯ ನಟ ವಿನೋದ್ ಪಾಟೀಲ್ ಈ ಸಿನಿಮಾದ ನಾಯಕನಾಗಿದ್ದು, ರಮೇಶ್ ಅರವಿಂದ್ ಮತ್ತು ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರಂತೆ.

ಕಿರುತೆರೆಯ 'ಪುಟ್ಟಗೌರಿ'ಯ ಹೊಸ ಸಿನಿಮಾ ಶುರು

English summary
Kannada actress Ranjani raghavan (Puttagowri maduve serial) won the 'Miss india super model' from Silver Star Film Makers School of Fashion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X