»   » 'ಪುಟ್ಟಣ್ಣ' ಸಿನಿಮಾ ನೋಡಿ ಪುಟ್ಟಣ್ಣ ಕಣಗಾಲ್ ಕುಟುಂಬ ಹೇಳಿದ್ದೇನು?

'ಪುಟ್ಟಣ್ಣ' ಸಿನಿಮಾ ನೋಡಿ ಪುಟ್ಟಣ್ಣ ಕಣಗಾಲ್ ಕುಟುಂಬ ಹೇಳಿದ್ದೇನು?

Posted By:
Subscribe to Filmibeat Kannada

ಒಂದ್ಕಡೆ ಟೈಟಲ್ ವಿವಾದ, ಇನ್ನೊಂದ್ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ...ಒಂದಲ್ಲಾ ಒಂದು ವಿವಾದದಿಂದ 'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಸಿನಿಮಾ ಈಗ ಗಾಂಧಿನಗರದ ಹಾಟ್ ಟಾಪಿಕ್ ಆಗ್ಬಿಟ್ಟಿದೆ.

'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಸಿನಿಮಾದ ಶೀರ್ಷಿಕೆ ಬಗ್ಗೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಕುಟುಂಬ ಆಕ್ಷೇಪ ವ್ಯಕ್ತಪಡಿಸಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ.[ಕಥೆ-ಚಿತ್ರಕಥೆ-ನಿರ್ದೇಶನ 'ಪುಟ್ಟಣ್ಣ' ಸುತ್ತ ಹೊಸ ವಿವಾದ!]

puttanna-kanagal

ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರ ನೋಡ್ಬೇಕು ಅಂತ ಪಟ್ಟು ಹಿಡಿದಿದ್ದ ಪುಟ್ಟಣ್ಣ ಕಣಗಾಲ್ ಕುಟುಂಬ 'ಕಥೆ-ಚಿತ್ರಕಥೆ-ನಿರ್ದೇಶನ-ಪುಟ್ಟಣ್ಣ' ಸಿನಿಮಾ ವೀಕ್ಷಿಸಿದೆ.

''ಇತ್ತೀಚೆಗಷ್ಟೆ ಪುಟ್ಟಣ್ಣ ಕಣಗಾಲ್ ಕುಟುಂಬಕ್ಕೆ ಸ್ಪೆಷಲ್ ಸ್ಕ್ರೀನಿಂಗ್ ಮಾಡಿದ್ವಿ. ಸಿನಿಮಾ ನೋಡಿ ಅವರು ಖುಷಿ ಪಟ್ಟಿದ್ದಾರೆ. ಹೀಗಾಗಿ ಅವರಿಂದ ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿ ಇಲ್ಲ. ಸಿನಿಮಾದಲ್ಲಿ ಪುಟ್ಟಣ್ಣ ಕುರಿತಾಗಿ ಏನೂ ಇಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಕೋಮಲ್ ಕುಮಾರ್ ತಿಳಿಸಿದರು. [ಕೋಮಲ್ ಅಭಿನಯದ 'ಪುಟ್ಟಣ್ಣ' ಸಿನಿಮಾದಲ್ಲಿ ಅಂತದ್ದೇನಿದೆ?]

Kathe-Chitrakathe-Nirdheshana-Puttanna

ಅಲ್ಲಿಗೆ, ಚಿತ್ರ ಬಿಡುಗಡೆಗೆ ಒಂದು ಲೈನ್ ಕ್ಲಿಯರ್ ಆಗಿದೆ. ಇದೀಗ ಸುದೀಪ್, ಉಪೇಂದ್ರ, ರಾಮ್ ಗೋಪಾಲ್ ವರ್ಮಾ ಹೆಸರಲ್ಲಿ ಶುರುವಾಗಿರುವ ಹೊಸ ವಿವಾದಕ್ಕೆ ಮುಕ್ತಿ ಎಂದೋ ಕಾದು ನೋಡಬೇಕಷ್ಟೆ. [ಸುದೀಪ್, ಉಪೇಂದ್ರ, ವರ್ಮಾ ಕಾಲೆಳೆದ್ರಾ ಕೋಮಲ್?]

English summary
Kannada Director Late Puttanna Kanagal family watches Komal Kumar starrer Kannada Movie 'Kathe Chitrakathe Nirdheshana Puttanna' movie and appreciated. Komal Kumar, Priyamani, Pooja Gandhi starrer 'Kathe Chitrakathe Nirdheshana Puttanna' will hit the screens shortly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada