Don't Miss!
- News
Karnataka Budget 2023: ಈ ವರ್ಷದ ಬಜೆಟ್, ಅಭಿವೃದ್ಧಿ, ಹಣಕಾಸಿನ ಕೊರತೆ ಬಗ್ಗೆ ಬೊಮ್ಮಾಯಿ ಉತ್ತರ
- Sports
ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ ಸಂಜು ಸ್ಯಾಮ್ಸನ್: ಕೆಸಿ ಕಾರಿಯಪ್ಪ ಕೂಡ ಸಾಥ್
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಾರಿಮುತ್ತು ಮೊಮ್ಮಗಳ ಮೊದಲ ಚಿತ್ರದ ರಿಲೀಸ್ ಡೇಟ್ ಫಿಕ್ಸ್
ಕನ್ನಡದ ಹಿರಿಯ ಪೋಷಕ ನಟಿ, 'ಉಪೇಂದ್ರ' ಸಿನಿಮಾದ ಖ್ಯಾತಿಯ ಮಾರಿಮುತ್ತು ಎಲ್ಲರಿಗೂ ಚಿರಪರಿಚಿತ. ಚಿತ್ರರಂಗ ತನ್ನ ವಿಭಿನ್ನ ಪಾತ್ರಗಳು ಮೂಲಕ ಹೆಸರು ಮಾಡಿದ್ದ ಸರೋಜಮ್ಮ ಅವರ ರೀತಿಯ ಅವರ ಮೊಮ್ಮಕ್ಕಳು ಜಯಶ್ರೀ ಆರಾಧ್ಯ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ. ಅವರ ಮೊದಲ ಸಿನಿಮಾ 'ಪುಟ್ಟರಾಜು ಲವರ್ ಆಫ್ ಶಶಿಕಲಾ' ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ.
'ಪುಟ್ಟರಾಜು ಲವರ್ ಆಫ್ ಶಶಿಕಲಾ' ಸಿನಿಮಾ ಈಗಾಗಲೇ ಹಾಡುಗಳು ಮೂಲಕ ಗಮನ ಸೆಳೆದಿದೆ. ಚಿತ್ರದ 'ಹನಿ ಹನಿ..' ಹಾಡು ಎಲ್ಲರಿಗೆ ಇಷ್ಟವಾಗಿದೆ. ಸಿನಿಮಾದ ಟ್ರೇಲರ್ ಅನ್ನು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ. ನಟ ಉಪೇಂದ್ರ ಕೂಡ ಟ್ರೇಲರ್ ನೋಡಿ ಮೆಚ್ಚುಗೆ ಸೂಚಿಸಿದ್ದರು.
ದಾರಿ
ಬಿಡ್ರಿ...
ಚಿತ್ರರಂಗಕ್ಕೆ
ಬಂದ್ರು
ಮಾರಿಮುತ್ತು
ಮೊಮ್ಮಗಳು
ಜಯಶ್ರೀ!
ಅಂದಹಾಗೆ, ಈ ಸಿನಿಮಾ ಕೆಲ ನೈಜ ಫಟನೆಗಳನ್ನು ಇಟ್ಟುಕೊಂಡು ಮಾಡಲಾಗಿದೆ. ತುಮಕೂರಿನ ಹೈಸ್ಕೂಲ್ ಒಂದರಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಕಥೆ ಸಿನಿಮಾದಲ್ಲಿದೆ. ಇಲ್ಲಿ ನಾಯಕನಾಗಿ ಅಮಿತ್ ಕಾಣಿಸಿಕೊಂಡಿದ್ದು, ನಾಯಕಿಯಾರಾಗಿ ಜಯಶ್ರೀ ಆರಾಧ್ಯ ಮತ್ತು ಸುಶ್ಮಿತಾ ಕಾಣಿಸಿಕೊಂಡಿದ್ದಾರೆ.

'ಪುಟ್ಟರಾಜು ಲವರ್ ಆಫ್ ಶಶಿಕಲಾ' ಒಂದು ಪ್ರೇಮಕಥೆಯ ಸಿನಿಮಾವಾಗಿದ್ದು, ಯುವ ಮನಸುಗಳಿಗೆ ಇಷ್ಟ ಆಗಲಿದೆಯಂತೆ. ಈಗಾಗಲೇ ಹಾಡು ಟ್ರೇಲರ್ ಮೂಲಕ ಕುತೂಹಲ ಹುಟ್ಟಿಸಿರುವ ಈ ಸಿನಿಮಾ ಆಗಸ್ಟ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಹದೇವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.