»   » ಭಾರತಕ್ಕೆ ಬೆಳ್ಳಿ ತಂದ ಬಂಗಾರದ ಹುಡುಗಿ ಸಿಂಧುಗೆ ಸ್ಟಾರ್ ಗಳ ಸಲಾಂ

ಭಾರತಕ್ಕೆ ಬೆಳ್ಳಿ ತಂದ ಬಂಗಾರದ ಹುಡುಗಿ ಸಿಂಧುಗೆ ಸ್ಟಾರ್ ಗಳ ಸಲಾಂ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ರಿಯೋ ಒಲಿಂಪಿಕ್ಸ್ 2016 ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ವಿರೋಚಿತ ಆಟ ಆಡಿ ಬೆಳ್ಳಿ ಪದಕಕ್ಕೆ ಕೊರಳು ಒಡ್ಡುವುದರೊಂದಿಗೆ ಕೋಟ್ಯಾಂತರ ಭಾರತೀಯರ ಮನ ಗೆದ್ದಿದ್ದಾರೆ.

  ಪಿ.ವಿ.ಸಿಂಧು ಗೆದ್ದಿರುವ ಬೆಳ್ಳಿ ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ. ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿರುವ ಪಿ.ವಿ.ಸಿಂಧು ರವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ['ರಿಯೋ ಒಲಿಂಪಿಕ್'ನಲ್ಲಿ ಕಂಚು ಗೆದ್ದ ಸಾಕ್ಷಿ: ತಾರೆಯರ ಶುಭಾಶಯ]

  ಭಾರತದ ಕೀರ್ತಿ ಪತಾಕೆಯನ್ನ ರಿಯೋ ಒಲಿಂಪಿಕ್ಸ್ ನಲ್ಲಿ ಹಾರಿಸಿದ ದೇಶದ ಹೆಮ್ಮೆಯ ಕುವರಿ ಪಿ.ವಿ.ಸಿಂಧು ರವರಿಗೆ ಭಾರತೀಯ ಚಿತ್ರರಂಗದ ಸ್ಟಾರ್ ಕಲಾವಿದರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮುಂದೆ ಓದಿ....

  ಸ್ಟಾರ್ ಗಳ ಟ್ವೀಟ್ ಶುಭಾಶಯ

  ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ನ ಸ್ಟಾರ್ ಗಳು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ಟ್ವಿಟ್ಟರ್ ಮೂಲಕ ಶುಭ ಹಾರೈಸಿರುವ ಟ್ವೀಟ್ ಗಳ ಸರಮಾಲೆ ಇಲ್ಲಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಸೂಪರ್ ಸ್ಟಾರ್ ರಜನಿಕಾಂತ್

  ''ಹ್ಯಾಟ್ಸ್ ಆಫ್ ಟು ಯು ಪಿ.ವಿ.ಸಿಂಧು. ನಾನು ನಿಮ್ಮ ದೊಡ್ಡ ಅಭಿಮಾನಿ ಆಗಿದ್ದೇನೆ. ಶುಭಾಶಯಗಳು'' ಅಂತ ಸೂಪರ್ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

  ಸಲ್ಮಾನ್ ಖಾನ್

  ''ಫೈನಲ್ ಮ್ಯಾಚ್ ನ ನನ್ನ ತಾಯಿ ಜೊತೆ ಕೂತು ವೀಕ್ಷಿಸುತ್ತಾ ಹೇಳಿದೆ, ಪಿ.ವಿ.ಸಿಂಧು ಜೊತೆ ಕ್ಲಿಕ್ ಮಾಡಿಕೊಂಡಿರುವ ಫೋಟೋ ನನ್ನ ಬಳಿ ಇದೆ ಅಂತ. ಹೆಮ್ಮೆ ಆಗುತ್ತಿದೆ'' - ಸಲ್ಮಾನ್ ಖಾನ್ [ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ 'ಬೆಳ್ಳಿ' ಸಿಂಧೂರ]

  ಹೃತಿಕ್ ರೋಷನ್

  ''ಸೀಟಿನ ತುದಿಯಲ್ಲಿ ಕೂತಿದ್ದೆ. ಎಂತಹ ಮ್ಯಾಚ್.! ಎಂತಹ ಆಟಗಾರ್ತಿ.! ಪಿ.ವಿ.ಸಿಂಧು...ನೀವು ನಮ್ಮ ಮನ ಗೆದ್ದಿದ್ದೀರಿ'' - ಹೃತಿಕ್ ರೋಷನ್

  ಅಮಿತಾಬ್ ಬಚ್ಚನ್

  ''ಇಡೀ ಭಾರತಕ್ಕೆ ಹೆಮ್ಮೆ ನೀವು. ಇಂತಹ ಅದ್ಭುತ ಹೆಮ್ಮೆಯ ಕ್ಷಣ ನೀಡಿದ ನಿಮಗೆ ಧನ್ಯವಾದ'' - ಅಮಿತಾಬ್ ಬಚ್ಚನ್

  ಉಪೇಂದ್ರ

  ''ಸಿಂಧು ರವರಿಗೆ ಶುಭಾಶಯ. ಬೆಳ್ಳಿ ಪದಕ ಗೆದ್ದ ಚಿನ್ನದ ಹುಡುಗಿ ನೀವು'' - ರಿಯಲ್ ಸ್ಟಾರ್ ಉಪೇಂದ್ರ

  ಅಕ್ಕಿನೇನಿ ನಾಗಾರ್ಜುನ

  ''ನಿಮ್ಮನ್ನ ಹೈದರಾಬಾದ್ ನಲ್ಲಿ ನೋಡಲು ನಾವೆಲ್ಲಾ ಕಾತರದಿಂದ ಕಾಯುತ್ತಿದ್ದೇವೆ'' - ಅಕ್ಕಿನೇನಿ ನಾಗಾರ್ಜುನ

  ದೀಪಿಕಾ ಪಡುಕೋಣೆ

  ''ನಾನು ಇದುವರೆಗೂ ನೋಡಿದ ಬೆಸ್ಟ್ ಮ್ಯಾಚ್ ಇದು. ಪಿ.ವಿ.ಸಿಂಧುಗೆ ಧನ್ಯವಾದಗಳು'' - ದೀಪಿಕಾ ಪಡುಕೋಣೆ

  ಮೋಹನ್ ಲಾಲ್

  ''ಬೆಳ್ಳಿ ಪದಕವನ್ನು ಗೆದ್ದು ನಮ್ಮ ದೇಶದ ಹೆಮ್ಮೆಯ ಮಗಳು ಸುವರ್ಣ ಘಳಿಗೆಗೆ ಸಾಕ್ಷಿಯಾಗಿದ್ದಾರೆ. ನಮ್ಮ ದೇಶಕ್ಕೆ ಹೆಮ್ಮೆ ತಂದ ಸಿಂಧುಗೆ ಶುಭಾಶಯ'' - ಮೋಹನ್ ಲಾಲ್

  ಅರ್ಜುನ್ ಕಪೂರ್

  ''ನಮಗೆ ನೀವು ನಿಜವಾದ ಚಾಂಪಿಯನ್. ಇಂದಿನ ಯುವ ಪೀಳಿಗೆಗೆ ನೀವೇ ಸ್ಫೂರ್ತಿ'' - ಅರ್ಜುನ್ ಕಪೂರ್

  ಜಗ್ಗೇಶ್

  ''ಭಾರತಕ್ಕೆ ಬೆಳ್ಳಿ ಪಾರಿತೋಷಕ ತಂದ ಪ್ರಥಮ ಹೆಮ್ಮೆಯ ಮಗಳು. ನೀನು ಬರೆದ ಜಯದ ಮುನ್ನುಡಿ ಬಹು ಸಂಖ್ಯೆ ಕೀಡಾ ದಾಹದ ಮಕ್ಕಳಿಗೆ ದಾರಿದೀಪವಾಗಲಿ. ಜಯಭಾರತ ಜನನಿಯ ತನುಜೆ'' - ಜಗ್ಗೇಶ್

  ಐಂದ್ರಿತಾ ರೇ

  ''ಬೆಳ್ಳಿ ಪದಕ ಗೆದ್ದ ಪ್ರಪ್ರಥಮ ಭಾರತೀಯ ನಾರಿ. ಹೆಮ್ಮೆಯ ಕ್ಷಣ'' - ಐಂದ್ರಿತಾ ರೇ

  English summary
  Indian Badminton Player PV Sindhu created history by winning Silver Medal in Rio Olympics 2016. After her win, Congratulatory messages began flooding across Social Media Platform. Check out the Celebrities tweet here.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more