ಪಿವಿಆರ್ ಪಾಲಾದ ಸತ್ಯಂ, ಅಭಿಮಾನಿಗಳಿಗೆ ಪಾಪ್ ಕಾರ್ನ್ ಚಿಂತೆ!
ಸುಮಾರು 60 ನಗರಗಳಲ್ಲಿ 152 ಕಟ್ಟಡಗಳನ್ನು ಹೊಂದಿದ್ದು, 706 ಸ್ಕ್ರೀನ್ ಗಳನ್ನು ಹೊಂದಿರುವ ಪಿವಿಆರ್ ಸಂಸ್ಥೆ, 2013ರಲ್ಲಿ ಸಿನಿಮ್ಯಾಕ್ಸ್, 2016ರಲ್ಲಿ ಡಿಟಿ ಸಿನಿಮಾಸ್ ಗಳನ್ನು ಪಿವಿಆರ್ ಖರೀದಿಸಿತ್ತು. ಈಗ ದಕ್ಷಿಣ ಭಾರತದ ಅತಿದೊಡ್ಡ ಚಿತ್ರಮಂದಿರಗಳ ಜಾಲ ಹೊಂದಿರುವ ಸತ್ಯಂ ಸಿನಿಮಾಸ್ (ಎಸ್ ಪಿಐ) ಖರೀದಿಸಿದೆ.
ತಮಿಳುನಾಡು, ತೆಲಂಗಾಣ, ಕರ್ನಾಟಕ, ಕೇರಳ, ಮುಂಬೈ ಹಾಗೂ ಆಂಧ್ರಪ್ರದೇಶಗಳ 10 ನಗರಗಳಲ್ಲಿ 17 ಕಟ್ಟಡಗಳಲ್ಲಿ 76ಸ್ಕ್ರೀನ್ ಗಳನ್ನು ಸತ್ಯಂ ಸಿನಿಮಾಸ್ ಹೊಂದಿದೆ. ಪಲಾಜೋ, ದಿ ದಿನಿಮಾ, ಎಸ್ 2 ಹಾಗೂ ಎಸ್ಕೇಪ್ ಮುಂತಾದ ಬ್ರಾಂಡ್ ಗಳನ್ನು ಎಸ್ ಪಿಐ ಹೊಂದಿದೆ.
ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಚೆನ್ನೈನ ಸತ್ಯಂ ಸಿನಿಮಾಸ್
ಭಾರತದ ಬಾಕ್ಸಾಫೀಸ್ ಗೆ ತಮಿಳು, ತೆಲುಗು ಹಾಗೂ ಕನ್ನಡ ಶೇ 37ರಷ್ಟು ಕೊಡುಗೆ ನೀಡುತ್ತಿದೆ. ಈ ಬೃಹತ್ ಒಪ್ಪಂದದ ನಂತರ ಪಿವಿಆರ್ ಗೆ ಪ್ರಾದೇಶಿಕ ಸಿನಿಮಾಗಳಿಂದ ಬರುತ್ತಿದ್ದ ಶೇ 19ರಷ್ಟು ಆದಾಯವು ಶೇ 22ಕ್ಕೇರಲಿದೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ನಲ್ಲೂ ಸತ್ಯಂ ಸಿನಿಮಾಸ್ ಇದೆ. ಅಲ್ಲಿ ಕೂಡಾ ಸತ್ಯಂ ಸಿನಿಮಾಸ್ ನ ಜನಪ್ರಿಯ ಪಾಪ್ ಕಾರ್ನ್ ಸಿಗುತ್ತದೆ. ಆದರೆ, ಈಗ ಪಿವಿಆರ್ ಪಾಲಾದ ಮೇಲೆ ಅದೇ ಗುಣಮಟ್ಟದ ಪಾಪ್ ಕಾರ್ನ್ ಸಿಗುತ್ತಾ? ಇಲ್ಲವಾ? ಎಂಬ ಚಿಂತೆ ಸಿನಿಪ್ರಿಯರಿಗೆ ಕಾಡುತ್ತಿದೆ.
ಅಭಿಮಾನಿಗಳಿಗೆ ಪಾಪ್ ಕಾರ್ನ್ ಚಿಂತೆ!
ನಟ ಸಿದ್ದಾರ್ಥ್ ಅವರು ಈ ಬಗ್ಗೆ ಟ್ವೀಟ್ ಮಾಡಿ, ಯಾವುದೇ ಹೆಸರಿನಿಂದ ಕರೆಯಿರಿ, ನಮಗೆ ಮಾತ್ರ ಇದು ಸತ್ಯಂ ಸಿನಿಮಾಸ್ ಎಂದಿದ್ದಾರೆ.
ಸತ್ಯಂ ಸಿನಿಮಾಸ್ ಪಾಪ್ ಕಾರ್ನ್ ಹೇಗಿರುತ್ತೆ
ಸತ್ಯಂ ಸಿನಿಮಾಸ್ ಪಾಪ್ ಕಾರ್ನ್ ಹೇಗಿರುತ್ತೆ, ಹೇಗೆ ಪ್ಯಾಕ್ ಮಾಡುತ್ತಾರೆ ಇಲ್ಲಿದೆ ನೋಡಿ ವಿಡಿಯೋ
ಪಾಪ್ ಕಾರ್ನ್ ಉಳಿಸಿ ಎಂದ ಅಭಿಮಾನಿಗಳು
ಸತ್ಯಂ ಸಿನಿಮಾಸ್ ನ ಅಡಿಯೋ ಗುಣಮಟ್ಟ, ಬಟರ್ ಪಾಪ್ ಕಾರ್ನ್ ಚೆನ್ನಾಗಿದ್ದರೆ ಸಾಕು.
ತಮಿಳರ ಭಾವನಾತ್ಮಕ ಬಂಧ
ಸತ್ಯಂ ಸಿನಿಮಾಸ್ ಎಂಬುದು ಭಾವನಾತ್ಮಕವಾಗಿ ನಮ್ಮ ಜತೆ ಬೆರೆತಿದೆ. ಗುಣಮಟ್ಟ ಕಾಪಾಡಿ, ಚೆನ್ನೈನ ಹೆಗ್ಗುರತನ್ನು ಉಳಿಸಿ ಎಂದ ಅಭಿಮಾನಿಗಳು.


Click it and Unblock the Notifications











