twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್ ಡೌನ್ ಬಳಿಕ ಚಿತ್ರಮಂದಿರ ಹೇಗಿರಲಿದೆ?: ವಿಡಿಯೋ ಬಿಡುಗಡೆ ಮಾಡಿದ ಪಿವಿಆರ್

    |

    ವಾರಾಂತ್ಯದ ದಿನಗಳಲ್ಲಂತೂ ತುಂಬಿ ತುಳುಕುತ್ತಿದ್ದ ಚಿತ್ರಮಂದಿರಗಳು ಈಗ ಹೇಗಾಗಿರಬಹುದು? ಕಳೆದ ಮೂರು ತಿಂಗಳಿನಿಂದ ಒಂದೂ ಚಿತ್ರ ಬಿಡುಗಡೆಯಾಗಿಲ್ಲ. ಬಿಡುಗಡೆಯಾಗಲು ಅವಕಾಶವೂ ಇರಲಿಲ್ಲ. ಸಿನಿಮಾ ಮಂದಿರಗಳು ಮತ್ತೆ ಬೆಳಕು ಕಂಡಿಲ್ಲ. ಮಾರ್ಚ್‌ನಲ್ಲಿ ಚಿತ್ರಪ್ರದರ್ಶನಗಳು ನಡೆಯುವಾಗಲೇ ಲಾಕ್ ಡೌನ್‌ ಕಾರಣದಿಂದ ಎಲ್ಲವೂ ಬದಲಾಯಿತು.

    Recommended Video

    ಸುಳ್ಳಾಯ್ತು ದರ್ಶನ್ ಅಭಿಮಾನಿಗಳ ಆಸೆ | Darshan starrer Robert Cinema is to be released next year

    ಏಕಪರದೆಯ ಚಿತ್ರಮಂದಿರಗಳಂತೆಯೇ ಪಿವಿಆರ್, ಐನಾಕ್ಸ್‌ದಂತಹ ಮಲ್ಟಿಪ್ಲೆಕ್ಸ್‌ಗಳೂ ಈಗ ಮರುಭೂಮಿಯಂತಾಗಿವೆ. ಒಂದೊಂದೇ ಹಂತದಲ್ಲಿ ನಿಯಮಗಳನ್ನು ಸಡಿಲಗೊಳಿಸುತ್ತಿರುವುದರಿಂದ ಚಿತ್ರಮಂದಿರಗಳೂ ತೆರೆಯಲು ಕಾತರವಾಗಿವೆ. ಹಿಂದಿನಂತೆ ಚಿತ್ರಪ್ರದರ್ಶನ ಮುಂದುವರಿಸುವುದು ಅಸಾಧ್ಯ. ಅದು ಅಪಾಯಕಾರಿ ಕೂಡ. ಅದಕ್ಕೆಂದೇ ಜನರ ಸುರಕ್ಷತೆಯನ್ನು ಗಮನದಲ್ಲಿಸಿರಿಕೊಂಡು ಚಿತ್ರಮಂದಿರಗಳ ಒಳಗೆ ಕೆಲವು ಬದಲಾವಣೆ ತರಲಾಗುತ್ತಿದೆ. ಪಿವಿಆರ್ ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡುತ್ತಿದ್ದು, ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ಸಿನಿಮಾ ಹಾಲ್‌ ತೆರೆಯಲು ಸಜ್ಜಾಗಿದೆ. ಮುಂದೆ ಓದಿ...

    ಸುರಕ್ಷತೆಯ ಮಂತ್ರ

    ಸುರಕ್ಷತೆಯ ಮಂತ್ರ

    ಲಾಕ್ ಡೌನ್ ಕಾಲಾವಧಿ ಬಳಿಕದ ವ್ಯವಹಾರಕ್ಕೆ ಪಿವಿಆರ್ ಸಕಲ ಕಾರ್ಯಗಳನ್ನು ನಡೆಸುತ್ತಿದೆ. ಪಿವಿಆರ್ ಕೇರ್ಸ್! ನಿಮ್ಮ ಸುರಕ್ಷತೆ ನಮ್ಮ ಆದ್ಯತೆ ಎಂಬ ತತ್ವದಡಿ ಸಿನಿಮಾ ಪ್ರದರ್ಶನ ನಡೆಸಲಿದೆ. ಪಿವಿಆರ್‌ನಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ ಎಂಬುದನ್ನು ವಿಡಿಯೋ ಮೂಲಕ ತಿಳಿಸಿದೆ.

    ಅಕ್ಕ ಪಕ್ಕದ ಸೀಟು ಖಾಲಿ

    ಅಕ್ಕ ಪಕ್ಕದ ಸೀಟು ಖಾಲಿ

    ಪಿವಿಆರ್ ಹೊಸ ಆಸನದ ಫಾರ್ಮ್ಯಾಟ್ ತೋರಿಸಿದ್ದು, ಪ್ರತಿ ಟಿಕೆಟ್ ವಿತರಣೆಗೂ ಒಂದು ಸೀಟ್‌ನ ಗ್ಯಾಪ್ ಇರಲಿದೆ. ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಸೇರಿ ಟಿಕೆಟ್ ಪಡೆದುಕೊಂಡಾಗ ನಿಮ್ಮನ್ನು ಒಟ್ಟಿಗ ಕೂರಿಸಲಾಗುತ್ತದೆ. ಆದರೆ ನಿಮ್ಮ ಅಕ್ಕಪಕ್ಕದ ಎರಡೂ ಸೀಟುಗಳು ಖಾಲಿ ಇರಲಿವೆ. ಸಾಮಾಜಿಕ ಅಂತರದ ನಿಯಮಗಳಿಗೆ ಅನುಗುಣವಾಗಿ ಮತ್ತು ಚಿತ್ರಮಂದಿರದೊಳಗೆ ವೈರಸ್ ಹರಡದಂತೆ ತಡೆಯಲು ಈ ರೀತಿ ಮಾಡಲಾಗುತ್ತದೆ.

    ವಿರೋಧಿಗಳ ನಡುವೆ ಕೂತು ಕನ್ನಡ ಸಿನಿಮಾಗಳ ಪರ ದನಿ ಎತ್ತಿದ ಪುನೀತ್ ರಾಜ್‌ಕುಮಾರ್‌ವಿರೋಧಿಗಳ ನಡುವೆ ಕೂತು ಕನ್ನಡ ಸಿನಿಮಾಗಳ ಪರ ದನಿ ಎತ್ತಿದ ಪುನೀತ್ ರಾಜ್‌ಕುಮಾರ್‌

    ಸಂಪೂರ್ಣ ಸ್ಯಾನಿಟೈಸೇಷನ್

    ಸಂಪೂರ್ಣ ಸ್ಯಾನಿಟೈಸೇಷನ್

    ಪ್ರತಿ ಸಿನಿಮಾ ಪ್ರದರ್ಶನಗಳ ನಡುವೆ ಇಡೀ ಹಾಲ್‌ಅನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ. ಇದರಿಂದ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಸುರಕ್ಷಿತ ಅನುಭವ ನೀಡುವುದು ತಮ್ಮ ಧ್ಯೇಯ ಎಂದು ಪಿವಿಆರ್ ಹೇಳಿಕೊಂಡಿದೆ. ಸ್ಯಾನಿಟೈಸೇಷನ್ ನಿಯಮಗಳನ್ನು ಪಾಲಿಸುವಂತೆ ಸಿಬ್ಬಂದಿಗೆ ಸೂಚಿಸಲಾಗುತ್ತದೆ.

    ಆಪ್ ಮೂಲಕವೇ ಬುಕ್

    ಆಪ್ ಮೂಲಕವೇ ಬುಕ್

    ಅಂದಹಾಗೆ, ಪಿವಿಆರ್‌ನಲ್ಲಿ ಸದ್ಯಕ್ಕೆ ಟಿಕೆಟ್ ಕೌಂಟರ್‌ಗಳಿರುವುದಿಲ್ಲ. ಅಂದರೆ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಲು ಸಾಧ್ಯವಿಲ್ಲ. ಚಿತ್ರಮಂದಿರಕ್ಕೆ ಪಿವಿಆರ್ ಆಪ್ ಮೂಲಕವೇ ಟಿಕೆಟ್ ಕಾಯ್ದಿರಿಸುವಂತೆ ಪಿವಿಆರ್ ಸಲಹೆ ನೀಡಿದೆ.

    ಲಾಕ್ ಡೌನ್ ಮುಗಿದ ನಂತರ ಚಿತ್ರಮಂದಿರಗಳ ಪರಿಸ್ಥಿತಿ ಏನು? ಕೋಟಿ ನಷ್ಟದ ಬಗ್ಗೆ ಪ್ರದರ್ಶಕರು ಹೇಳುವುದೇನು?ಲಾಕ್ ಡೌನ್ ಮುಗಿದ ನಂತರ ಚಿತ್ರಮಂದಿರಗಳ ಪರಿಸ್ಥಿತಿ ಏನು? ಕೋಟಿ ನಷ್ಟದ ಬಗ್ಗೆ ಪ್ರದರ್ಶಕರು ಹೇಳುವುದೇನು?

    ಲಕ್ಷಣವಿದ್ದರೆ ಪ್ರವೇಶವಿಲ್ಲ

    ಲಕ್ಷಣವಿದ್ದರೆ ಪ್ರವೇಶವಿಲ್ಲ

    ಚಿತ್ರಮಂದಿರದಲ್ಲಿ ಪಿಪಿಇ ಕಿಟ್ ಮಾರಾಟ ಮತ್ತು ಏಕ ಬಳಕೆಯ ಥ್ರೀಡಿ ಗ್ಲಾಸ್‌ಗಳು ಲಭ್ಯ. ಚಿತ್ರಮಂದಿರದ ಎಲ್ಲೆಡೆ ಕೈ ಸ್ಯಾನಿಟೈಸರ್ ಕೇಂದ್ರಗಳನ್ನು ಅಳವಡಿಸಲಾಗುತ್ತದೆ. ಪ್ರವೇಶದ್ವಾರದಲ್ಲಿ ದೇಹದ ಉಷ್ಣಾಂಶ ತಪಾಸಣೆ ನಡೆಸಲಾಗುತ್ತದೆ. ಯಾವುದೇ ಲಕ್ಷಣಗಳಿರುವ ವ್ಯಕ್ತಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಅವರ ಹಣವನ್ನು ಮರಳಿ ನೀಡಲಾಗುತ್ತದೆ.

    ಒಟಿಟಿಯಲ್ಲಿ ಸಿನಿಮಾಗಳ ಬಿಡುಗಡೆ ವಿರೋಧಿಸಿ ಪ್ರಧಾನಿ ಮೋದಿಗೆ ಪ್ರದರ್ಶಕರ ಪತ್ರಒಟಿಟಿಯಲ್ಲಿ ಸಿನಿಮಾಗಳ ಬಿಡುಗಡೆ ವಿರೋಧಿಸಿ ಪ್ರಧಾನಿ ಮೋದಿಗೆ ಪ್ರದರ್ಶಕರ ಪತ್ರ

    ಕ್ಯಾಶ್ ವಹಿವಾಟು ಇಲ್ಲ

    ಕ್ಯಾಶ್ ವಹಿವಾಟು ಇಲ್ಲ

    ನಾಶಪಡಿಸಬಹುದಾದ ಆಹಾರ ಪೊಟ್ಟಣಗಳಿಗೆ ಯುವಿ ತಂತ್ರಜ್ಞಾನ ಬಳಸಿ ಸೋಂಕು ನಿವಾರಕಗೊಳಿಸಲಾಗುತ್ತದೆ. ಆಹಾರ ಕೌಂಟರ್‌ಗಳಲ್ಲಿ ಕ್ಯಾಶ್ ವಹಿವಾಟು ಇರುವುದಿಲ್ಲ. ಭಾರತದಲ್ಲಿ ಚಿತ್ರಮಂದಿರಗಳು ಯಾವಾಗ ತೆರೆಯಲಿವೆ ಎನ್ನುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಅವು ತೆರೆದ ಬಳಿಕ ಕೊರೊನಾ ವೈರಸ್ ಹರಡುವ ಮತ್ತೊಂದು ಕೇಂದ್ರವಾಗಿ ಪರಿಣಮಿಸದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

    English summary
    PVR cinema has released a video which shows the arrangement to reopen after lockdown.
    Wednesday, June 24, 2020, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X