twitter
    For Quick Alerts
    ALLOW NOTIFICATIONS  
    For Daily Alerts

    ಜುಲೈ 30ರಿಂದ ಪಿವಿಆರ್‌ ಕಾರ್ಯಾರಂಭ: ಯಾವ ಸಿನಿಮಾಗಳ ಪ್ರದರ್ಶನ?

    |

    ಭಾರತದ ಪ್ರಮುಖ ಮಲ್ಟಿಫ್ಲೆಕ್ಸ್ ಥಿಯೇಟರ್ ಚೈನ್ ಪಿವಿಆರ್ ಜುಲೈ 30 ರಿಂದ ಪುನಃ ಕಾರ್ಯಾರಂಭ ಮಾಡುತ್ತಿರುವುದಾಗಿ ಪ್ರಕಟಿಸಿದೆ.

    ಯಾವ-ಯಾವ ರಾಜ್ಯಗಳಲ್ಲಿ ಚಿತ್ರಮಂದಿರ ತೆರೆಯಲು ಅನುಮತಿ ಇದೆಯೋ ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿವಿಆರ್ ಕಾರ್ಯಾರಂಭ ಮಾಡಲಿದ್ದು, ಸಂಪೂರ್ಣವಾಗಿ ವ್ಯಾಕ್ಸಿನೇಟ್ ಆಗಿರುವ ನೌಕರರ ಮೂಲಕವಷ್ಟೆ ಪಿವಿಆರ್ ಸೇವೆ ನೀಡುವುದಾಗಿ ಹೇಳಿದೆ.

    ಕೇಂದ್ರ ಮಾಹಿತಿ ಮತ್ತು ಪ್ರಸಾರ ನಿಗಮವು ಚಿತ್ರಮಂದಿರಗಳಿಗೆ ಹೇರಿರುವ ಕೋವಿಡ್ ನಿಯಮಗಳನ್ನು ಪಾಲಿಸುವುದಾಗಿ ಹೇಳಿರುವ ಪಿವಿಆರ್. ಜೊತೆಗೆ ಆಯಾ ರಾಜ್ಯದ ನಿಯಮಾವಳಿಗಳಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸುವುದಾಗಿ ಹೇಳಿದೆ.

    ಇದೀಗ ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಪಂಜಾಬ್, ರಾಜಸ್ಥಾನ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಚಿತ್ರಮಂದಿರ ತೆರೆಯಲು ಸ್ಥಳೀಯ ಸರ್ಕಾರಗಳು ಅನುಮತಿ ನೀಡಿವೆ. ಕೆಲವು ರಾಜ್ಯಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಸಿನಿಮಾ ವೀಕ್ಷಿಸಲು ಅನುಮತಿ ನೀಡಲಾಗಿದೆ.

    PVR Cinemas Re-Opening Its Theaters From July 30

    ಜುಲೈ 30ರಿಂದ ಸಿನಿಮಾ ಪ್ರದರ್ಶನ ಆರಂಭಿಸಲಿರುವ ಪಿವಿಆರ್ ಹಾಲಿವುಡ್ ಸಿನಿಮಾಗಳನ್ನು ಹೆಚ್ಚು ಪ್ರದರ್ಶಿಸಲಿದೆ. ಜುಲೈ 30ರಂದು 'ಮೊರ್ಟಲ್ ಕಾಂಬ್ಯಾಟ್' ಪ್ರದರ್ಶಿತಗೊಳ್ಳಲಿದೆ. ಜೊತೆಗೆ ಸಲ್ಮಾನ್ ಖಾನ್ ನಟನೆಯ 'ರಾಧೆ' ಸಿನಿಮಾ ಸಹ ಪ್ರದರ್ಶನಗೊಳ್ಳಲಿದೆ.

    ಪಿವಿಆರ್ ಚೇರ್‌ಮ್ಯಾನ್ ಅನಿಲ್ ಬಿಜ್ಲಿ ಮಾತನಾಡಿ, ''ಕೊರೊನಾ ಎರಡನೇ ಅಲೆಯ ಬಳಿಕ ನಾವು ನಮ್ಮ ಎಲ್ಲ ಸಿಬ್ಬಂದಿಗಳಿಗೆ ವ್ಯಾಕ್ಸಿನೇಷನ್ ಮಾಡುವುದರ ಬಗ್ಗೆ ಗಮನ ವಹಿಸಿದೆವು. ಮತ್ತೆ ಕಾರ್ಯಾರಂಭ ಮಾಡುತ್ತಿರುವುದು ಖುಷಿಯ ವಿಚಾರವಾಗಿದ್ದು, ಕೆಲವು ಒಳ್ಳೆಯ ಆಫರ್‌ಗಳನ್ನು ನೀಡುವ ಮೂಲಕ ಜನರನ್ನು ಮತ್ತೆ ಚಿತ್ರಮಂದಿರಗಳ ಕಡೆಗೆ ಸೆಳೆಯುವ ಕಾರ್ಯ ಮಾಡಲಿದ್ದೇವೆ'' ಎಂದಿದ್ದಾರೆ.

    English summary
    PVR cinemas re opening its theaters in some states and union territories from July 30. PVR chairman says PVR will function with fully vaccinated staff.
    Thursday, July 29, 2021, 22:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X