ಬರ್ತಿದೆ PVR, INOX ಮಾಸಿಕ ಪಾಸ್: ದರ ಎಷ್ಟು? ತಿಂಗಳಿಗೆ ಎಷ್ಟು ಸಿನಿಮಾ ನೋಡಬಹುದು?

ಸಿನಿಪ್ರೇಮಿಗಳಿಗೆ ಪ್ರಮುಖ ಮಲ್ಟಿಪ್ಲೆಕ್ಸ್‌ ಚೈನ್‌ಗಳಾದ ಪಿವಿಆರ್‌ ಹಾಗೂ ಐನಾಕ್ಸ್‌ ಗುಡ್ ನ್ಯೂಸ್ ಕೊಟ್ಟಿದೆ. ಮಾಸಿಕ ಚಂದಾದಾರಿಕೆಯ ಪಾಸ್‌ಗಳನ್ನು ನೀಡಲು ಮುಂದಾಗಿದೆ. ಎರಡು ತಿಂಗಳ ಹಿಂದೆ ಉತ್ತರ ಭಾರತದಲ್ಲಿ ಇದನ್ನು ಜಾರಿಗೆ ತರಲಾಗಿತ್ತು. ಶೀಘ್ರದಲ್ಲೇ ದಕ್ಷಿಣ ಭಾರತಕ್ಕೂ ಇದನ್ನು ಪರಿಚಯಿಸುವ ಬಗ್ಗೆ ಚರ್ಚೆ ಶುರುವಾಗಿದೆ.

ಈ ಸಿನಿಮಾ ಚಂದಾದಾರಿಕೆ ಪಾಸ್ ಚಿತ್ರೋದ್ಯಮಕ್ಕೆ ಆದಾಯ ತರುವುದರ ಜೊತೆಗೆ ಪ್ರೇಕ್ಷಕರು ಪದೇ ಪದೆ ಚಿತ್ರಮಂದಿರಗಳಿಗೆ ಭೇಟಿ ನೀಡಲು ಪ್ರೇರೇಪಿಸುತ್ತದೆ ಎನ್ನುವ ಅಂದಾಜಿದೆ. ಸಾಮಾನ್ಯವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಜಾಸ್ತಿ ಇರುತ್ತದೆ. ಪಾರ್ಕಿಂಗ್, ತಿಂಡಿ ತಿನಿಸು, ತಂಪು ಪಾನೀಯ ಬೆಲೆ ಕೂಡ ಹೆಚ್ಚು. ಅದೇ ಕಾರಣಕ್ಕೆ ಮಧ್ಯಮ ವರ್ಗದ ಜನ ಮಲ್ಟಿಪ್ಲೆಕ್ಸ್‌ಗಳಿಗೆ ಹೋಗಲು ಮೀನಾಮೇಷ ಎಣಿಸುವಂತಾಗಿದೆ. ಅಂತಹವರನ್ನು ಸೆಳೆಯಲು ಪಿವಿಆರ್‌, ಐನಾಕ್ಸ್ ಮಾಸಿಕ ಪಾಸ್ ಉಪಾಯ ಮಾಡಿದೆ.

PVR INOX to Launch Movie Subscription monthy pass in south india soon

PVR INOX ಪಾಸ್‌ಪೋರ್ಟ್ ಹೆಸರಿನಲ್ಲಿ ಈ ಪಾಸ್‌ಗಳನ್ನು ನೀಡಲಾಗುತ್ತದೆ. ಅಕ್ಟೋಬರ್ 16 ರಿಂದ ಈ ಮಾಸಿಕ ಚಂದಾದಾರಿಕೆ ಪಾಸ್ ಉತ್ತರ ಭಾರತದಲ್ಲಿ ಸಿಗುತ್ತಿದೆ. ಪ್ರೇಕ್ಷಕರು 699 ರೂ. ನೀಡಿ ತಿಂಗಳ ಪಿವಿಆರ್‌, ಐನಾಕ್ಸ್ ಪಾಸ್ ಖರೀದಿಸಿದವರು ತಿಂಗಳಲ್ಲಿ 10 ಸಿನಿಮಾಗಳನ್ನು ನೋಡಲು ಅವಕಾಶವಿದೆ. ಈ ಆಫರ್ ಸೋಮವಾರದಿಂದ ಗುರುವಾರದವರೆಗೆ ಮಾತ್ರ ಅನ್ವಯವಾಗುತ್ತದೆ. ಇನ್ನು ಐಮಾಕ್ಸ್, ಗೋಲ್ಡ್, ಲಕ್ಸ್‌ ಸ್ಕ್ರೀನ್‌ಗಳಿಗೆ ಇದು ಅನ್ವಯವಾಗುವುದಿಲ್ಲ. ಸಾಮಾನ್ಯ ಪಿವಿಆರ್‌, ಐನಾಕ್ಸ್ ಸ್ಕ್ರೀನ್‌ಗಳಲ್ಲಿ ಮಾತ್ರ ಸಿನಿಮಾ ವೀಕ್ಷಿಸಬಹುದು.

ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಲು ನೂರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸುವ ಬದಲು, ಅದಕ್ಕೆ ಇನ್ನೂ ನೂರು ಸೇರಿಸಿ ಓಟಿಟಿ ಚಂದಾದಾರಿಕೆಯನ್ನು ತೆಗೆದುಕೊಂಡು ಮನೆಯಲ್ಲಿಯೇ ಆರಾಮವಾಗಿ ಸಿನಿಮಾ ನೋಡಬಹುದು ಎಂದು ಪ್ರೇಕ್ಷಕರು ಭಾವಿಸುತ್ತಾರೆ. ಇದರಿಂದ ಚಿತ್ರಮಂದಿರಗಳ ಜನಪ್ರಿಯತೆ ಕಡಿಮೆಯಾಗಿದೆ. ಇದನ್ನು ಗಮನಿಸಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಇದೇ ಕಾರಣಕ್ಕೆ ಮಲ್ಟಿಪ್ಲೆಕ್ಸ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದೆ.

ದೊಡ್ಡ ಸಿನಿಮಾಗಳಿಗೆ ಮಾತ್ರ ಜನ ಥಿಯೇಟರ್‌ಗಳಿಗೆ ಬರುತ್ತಾರೆ. ಆದರೆ ಯಾವಾಗಲೂ ದೊಡ್ಡ ಸಿನಿಮಾಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ದೊಡ್ಡ ಸಿನಿಮಾಗಳು ಮೊದಲ ದಿನವೇ ನೆಗೆಟಿವ್ ಟಾಕ್ ಪಡೆದುಕೊಂಡು ಸೋಲುತ್ತವೆ. ಓಟಿಟಿಯಲ್ಲಿ ನೋಡಿದರೆ ಆಯಿತು ಎಂದು ಜನ ತೀರ್ಮಾನಿಸಿಬಿಡುತ್ತಾರೆ. ಹಾಗಾಗಿಯೇ ಮಲ್ಟಿಪ್ಲೆಕ್ಸ್‌ಗಳನ್ನು ಉಳಿಸಿಕೊಳ್ಳಲು ಇಂತಹ ಪ್ರಯತ್ನಗಳು ನಡೀತಿದೆ. ಪಾಸ್ ಖರೀದಿಸಿದವರು ತಿಂಗಳಿಗೆ 10 ಸಲ ಬರುವಂತಾಗುತ್ತದೆ. ಒಂದು ಟಿಕೆಟ್ ದರ 200 ರೂ. ಅಂದರೂ 10 ಬಾರಿ ಸಿನಿಮಾ(ಅಥವಾ 10 ಸಿನಿಮಾ) ನೋಡಲು 1200 ರೂ. ವ್ಯಯಿಸಬೇಕು. ಆದರೆ 699 ರೂ.ಗೆ 10 ಸಿನಿಮಾ ಎಂದರೆ ಸಹಜವಾಗಿಯೇ ಜನ ಮಾಸಿಕ ಪಾಸ್‌ ಖರೀಸುವ ಸಾಧ್ಯತೆಯಿದೆ.

PVR INOX to Launch Movie Subscription monthy pass in south india soon

ಚಂದಾದಾರರು ಹೆಚ್ಚಾದಂತೆ ಐನಾಕ್ಸ್, ಪಿವಿಆರ್‌ ತಮ್ಮ ನಷ್ಟವನ್ನು ಸರಿದೂಗಿಸಿಕೊಳ್ಳಬಹುದು. ಐನಾಕ್ಸ್, ಪಿವಿಆರ್‌ ಆಪ್‌ನಲ್ಲೇ 3 ತಿಂಗಳಿಗೆ ಚಂದಾದಾರಿಕೆ ಪಡೆಯಬಹುದು. ಒಂದಕ್ಕಿಂತ ಹೆಚ್ಚು ಟಿಕೆಟ್ ಖರೀದಿಸುವಂತಿದ್ದರೆ ಒಂದಕ್ಕೆ ಪಾಸ್‌ಪೋರ್ಟ್ ಕೂಪನ್ ಬಳಸಬಹುದು. ಈ ಪಾಸ್ ಅನ್ನು ಮತ್ತೊಬ್ಬರಿಗೆ ಕೊಡಲು ಸಾಧ್ಯವಿಲ್ಲ. ಇಬ್ಬರೇ ಬಳಸಬೇಕು. ಇನ್ನು ಥಿಯೇಟರ್‌ನಲ್ಲಿ ಪಾಸ್ ಜೊತೆಗೆ ಸರ್ಕಾರದ ಯಾವುದಾದರೂ ಗುರುತಿನ ಚೀಟಿ ತೋರಿಸಬೇಕು. ಉತ್ತರ ಭಾರತದಲ್ಲಿ ಆರಂಭವಾಗಿರುವ ಈ ಪಿವಿಆರ್‌, ಐನಾಕ್ಸ್ ಪಾಸ್‌ಪೋರ್ಟ್ ಕೂಪನ್ ಶೀಘ್ರದಲ್ಲೇ ದಕ್ಷಿಣಕ್ಕೆ ಬರಲಿದ್ದು ಯಾವ ರೀತಿ ಪ್ರತಿಕ್ರಿಯೆ ಸಿಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
PVR INOX planning to Launch Passport in south india also;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X