»   » ಕನ್ನಡ ನೆಲದಲ್ಲಿ ಹುಟ್ಟಿಕೊಂಡ ಕೆಲವು ಖಾಸಗಿ ಟಿ.ವಿ

ಕನ್ನಡ ನೆಲದಲ್ಲಿ ಹುಟ್ಟಿಕೊಂಡ ಕೆಲವು ಖಾಸಗಿ ಟಿ.ವಿ

Posted By: Super
Subscribe to Filmibeat Kannada

ಬೆಂಗಳೂರು: ಕನ್ನಡದಲ್ಲಿ ಈಗ ಟಿ.ವಿ. ಚಾನೆಲ್‌ಗಳಿಗೇನೂ ಬರವಿಲ್ಲ. ಹಿಂದೆ ಊರಿಗೊಬ್ಬಳೇ ಪದ್ಮಾವತಿ ಎನ್ನುವಂತೆ ಇದ್ದದ್ದು ಕೇವಲ ದೂರ ದರ್ಶನ ಮಾತ್ರ. ಅದೂ ಕೆಲವೇ ಗಂಟೆಗಳ ಕನ್ನಡ ಕಾರ್ಯಕ್ರಮ. ಈಗ ಕಾಲ ಬದಲಾಗಿದೆ. ಖಾಸಗಿ ಟಿ.ವಿ. ಚಾನೆಲ್‌ಗಳು ಬಂದಿವೆ. ತಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಟವನ್ನೇ ನಡೆಸುತ್ತಿವೆ.

ಕನ್ನಡದಲ್ಲಿ ಮೊದಲು ಖಾಸಗಿಯಾಗಿ ಆರಂಭವಾದ ಉದಯ ಟಿ.ವಿ. ತನಗೆ ದೊರೆತ ಪ್ರೆೃಮ್‌ ಮೂವರ್‌ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನೆಲೆ ನಿಂತಿತು. ಉದಯ ಟಿ.ವಿಯಾಂದಿಗೆ ಸ್ಪರ್ಧೆಗಿಳಿಯುವುದು ಅನಿವಾರ್ಯವಾದಾಗ ದೂರದರ್ಶನ ಡಿ.ಡಿ. 9 ಚಂದನವಾಗಿ ಮಾರ್ಪಟ್ಟಿತು. ಕಾರ್ಯಕ್ರಮದ ರೂಪರೇಷೆಯೂ ಬದಲಾಯಿತು.

ಈ ಎಲ್ಲದರ ನಡುವೆ ಕಳೆದ ವರ್ಷ ಕಾವೇರಿ, ಸುಪ್ರಭಾತ ಟೀ.ವಿ. ಚಾನೆಲ್‌ಗಳು ಹುಟ್ಟಿಕೊಂಡವು. ತದನಂತರ ಈ ಟಿ.ವಿ. ಕನ್ನಡ ವಾಹಿನಿ. ಉದಯ ಟಿ.ವಿ. ಭದ್ರವಾಗಿ ಕನ್ನಡದಲ್ಲಿ ನೆಲೆಯೂರಾಗಿದೆ. ಜಾಹೀರಾತುಗಳೂ ಹರಿದುಬರುತ್ತಿವೆ. ಉದಯ ಬಳಗಕ್ಕೆ ಸೇರಿದ ಉಷೆ ಹಾಗೂ 24 ಗಂಟೆ ನ್ಯೂಸ್‌ ವಿಭಾಗಗಳು ಹೆಚ್ಚು ಕಡಿಮೆ ಸರಿದಾರಿಯಲ್ಲಿ ಸಾಗುತ್ತಿವೆ. ಈ ಟಿ.ವಿ. ಕನ್ನಡ ನಿಮ್ಮ ಚಾನೆಲ್‌ ತನ್ನ ರಾಷ್ಟ್ರವ್ಯಾಪಿ ಜಾಲದ ಲಾಭ ಪಡೆದು ಇತರ ಚಾನೆಲ್‌ಗಳೊಂದಿಗೆ ಸ್ಪರ್ಧೆಗೆ ನಿಂತಿದೆ. ಸದ್ಯಕ್ಕೆ ಕನ್ನಡದಲ್ಲಿ ಈ ಸ್ಪರ್ಧೆ ಆರೋಗ್ಯಕರವಾಗೇ ಇದೆ ಎನ್ನಬಹುದು.

ಈ ಹೋರಾಟದಲ್ಲಿ ಅವು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಹಾಗೂ ಪ್ರೇಕ್ಷಕರ ಸಂಖ್ಯೆ ವೃದ್ಧಿಸಿಕೊಳ್ಳಲು ಸಿನಿಮಾ ಪ್ರಶಸ್ತಿಗಳ ಪ್ರಾಯೋಜಕತ್ವದ ಹಿಂದೆ ಕೂಡ ಬಿದ್ದಿವೆ. ಕೆಲವು ಯಶಸ್ವಿಯೂ ಆಗಿವೆ. ಮತ್ತೆ ಕೆಲವು ಮತ್ತಷ್ಟು ಹಣಕಾಸಿನ ಮುಗ್ಗಟ್ಟನ್ನು ತಲೆಯ ಮೇಲೆ ಎಳೆದುಕೊಂಡು ನಲುಗುತ್ತಿವೆ. ಜೊತೆಗೆ ಮತ್ತಷ್ಟು ಸಮಸ್ಯೆಗಳೂ ಇವೆ.

  • ಮೊದಲ ಸಮಸ್ಯೆ ಹಣಕಾಸಿನ ಕ್ಷೇತ್ರಕ್ಕೆ ಸಂಬಂಧಿಸಿದ್ದು.
  • ಎರಡನೆಯದು ಜಾಹೀರಾತು ಪಡೆಯುವಲ್ಲಿನ ವಿಫಲತೆ
  • ಚಾನಲ್‌ಗಳ ಒರತೆ, ಪ್ರೇಕ್ಷಕರ ಕೊರತೆ.
  • ಆಂತರಿಕ ಸಂಪನ್ಮೂಲದ ಕೊರತೆ

ರಾಜ್ಯದಲ್ಲಿ ಹಳ್ಳಿಯಿಂದ ಪಟ್ಟಣಗಳವರೆಗೆ ಸಾಕಷ್ಟು ಜನರ ಮನೆಗೆ, ಟಿ.ವಿ.ಗಳು ಬಂದು ವರ್ಷಗಳೇ ಉರುಳಿವೆ. ಕೇವಲ 100-200 ಮನೆಗಳಿರುವ ಪುಟ್ಟ ಊರಿನಲ್ಲೂ ಒಬ್ಬ ಕೇಬಲ್‌ ಡಿಷ್‌ ಆಪರೇಟರ್‌ ಇದ್ದಾರೆ. ಕನ್ನಡ ವಾಹಿನಿಗಳು ಅವರಿಗೆ ಲಭ್ಯ. ಹೀಗಾಗಿ ಹೊಸ ಕನ್ನಡ ವೀಕ್ಷಕರು ಸದ್ಯದ ಸ್ಥಿತಿಯಲ್ಲಿ ಹುಟ್ಟಿಕೊಳ್ಳಲು ಸಾಧ್ಯವೇ ಇಲ್ಲ. ಇರುವ ಪ್ರೇಕ್ಷಕರನ್ನೇ ಎಲ್ಲ ಟಿ.ವಿ. ಚಾನೆಲ್‌ಗಳೂ ಹಂಚಿಕೊಳ್ಳುವ ಸ್ಥಿತಿ.

ಯಾವ ಕಾರ್ಯಕ್ರಮ ಉತ್ತಮವಾಗಿರುತ್ತದೋ ಅದನ್ನು ಜನ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಎಲ್ಲರೂ ಉತ್ತಮ ಗುಣಮಟ್ಟದ ಕಾರ್ಯಕ್ರಮವನ್ನೇ ನೀಡುವುದು ಅನಿವಾರ್ಯ. ಆದರೆ, ಉತ್ತಮ ಕಾರ್ಯಕ್ರಮ ನಿರ್ಮಾಣಕ್ಕೆ ಹಣ ಬೇಕಲ್ಲ? ಈ ಹಣ ಬರುವುದು ಎಲ್ಲಿಂದ. ಪತ್ರಿಕೆಗಳಿಗಾಗಲೀ, ಟಿ.ವಿ. ಚಾನೆಲ್‌ಗಳಿಗೇ ಆಗಲಿ ಆದಾಯ ಬರುವುದು ಜಾಹೀರಾತಿನಿಂದಲೇ.

ಜಾಹೀರಾತು ನೀಡುವವರು ಪತ್ರಿಕೆಯ ಪ್ರಸರಣ (ಸರ್ಕ್ಯುಲೇಷನ್‌) ಎಷ್ಟಿದೆ ಎಂದು ತಿಳಿದೇ ಜಾಹೀರಾತು ನೀಡುತ್ತಾರೆ. ಅಂತೆಯೇ ಟಿ.ವಿ. ಚಾನೆಲ್‌ಗಳಲ್ಲಿ ಕೂಡ ಅವರ ಕಾರ್ಯಕ್ರಮದ ವೀಕ್ಷಕರ ಸಂಖ್ಯೆ ಎಷ್ಟಿದೆ ಎಂಬ ಲೆಕ್ಕಾಚಾರದ ಮೇಲೆ ಜಾಹೀರಾತು ದೊರೆಯುವುದು. ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುವ ಚಾನೆಲ್‌ಗಳು ಜನ್ಮ ತಳೆದು ವರ್ಷವೇ ಉರುಳಿದರೂ, ಉಳಿದುಕೊಳ್ಳಲು ಹೋರಾಟ ನಡೆಸಲೇ ಬೇಕಾದ ಪರಿಸ್ಥಿತಿ ಬಂದಿದೆ.

ಸ್ಟ್ರಗಲ್‌ ಫಾರ್‌ ಎಕ್ಸಿಸ್‌ಟೆನ್ಸ್‌, ಸರ್‌ವೈವಲ್‌ ಆಫ್‌ ಫಿಟಿಸ್ಟ್‌. ಮುಂದೇನಾಗುತ್ತದೋ ಕಾದು ನೋಡಬೇಕು ಅಷ್ಟೆ.

English summary
After one year of birth kannada private tv channels are struggling for their existence

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada