»   » ಟ್ವಿಟರ್ ಗೂ ಈಗ ಪ್ಯಾರ್ಗೆ ಆಗ್ಬುಟೈತೆ

ಟ್ವಿಟರ್ ಗೂ ಈಗ ಪ್ಯಾರ್ಗೆ ಆಗ್ಬುಟೈತೆ

Posted By:
Subscribe to Filmibeat Kannada

ಗೋವಿಂದಾಯ ನಮಃ ಚಿತ್ರದ ಬಹು ಜನಪ್ರಿಯ ಹಾಡು 'ಪ್ಯಾರ್ಗೆ ಆಗ್ಬುಟೈತೆ' ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕೋಮಲ್ ಕುಮಾರ್ ಅವರ ಪಾಲಿಗೆ 'ಪ್ಯಾರ್ಗೆ ಆಗ್ಬುಟೈತೆ' ಪದ ಮತ್ತೆ ಲಕ್ ತಂದಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಭಾರತದ ಟ್ರೆಂಡಿಂಗ್ ಪದಗಳಲ್ಲಿ 'ಪ್ಯಾರ್ಗೆ ಆಗ್ಬುಟೈತೆ' ಕೂಡಾ ಸೇರಿದೆ.

#Pyaarge Agbitaithe ಎಂಬ ಪದ ಟ್ರೆಂಡ್ ಆಗುತ್ತಿರುವುದು ಕಂಡು ಕನ್ನಡ ಚಿತ್ರರಂಗ ಹುಬ್ಬೇರಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರಕ್ಕೆ ಇಳಿದರೆ ಹೀಗೂ ಬೆಳೆಯಬಹುದು ಎಂಬುದನ್ನು ಕೋಮಲ್ ಚಿತ್ರ ಮತ್ತೊಮ್ಮೆ ನಿರೂಪಿಸುತ್ತಿದೆ. ಪವನ್ ಒಡೆಯರ್ ನಿರ್ದೇಶನದ ಗೋವಿಂದಾಯ ನಮಃ ಚಿತ್ರ ಕೂಡಾ ಸಾಮಾಜಿಕ ಜಾಲ ತಾಣಗಳ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದಿತ್ತು.

ಚಿತ್ರ ಬಿಡುಗಡೆಗೂ ಮುನ್ನ 'ಪ್ಯಾರ್ಗೆ ಆಗ್ಬುಟೈತೆ..ನಮ್ದುಕೆ' ಹಾಡು ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದಿತ್ತು. ಈಗ ಬೆಂಗಳೂರು ಹಾಗೂ ಇಂಡಿಯಾ ಟ್ವಿಟ್ಟರ್ ಟ್ರೆಂಡಿಂಗ್ ಪುಟದಲ್ಲಿ #Pyaarge Agbitaithe ಸದ್ದು ಮಾಡುತ್ತಿದೆ.ಟ್ವಿಟರ್ ನಲ್ಲಿ ಬಂದಿರುವ ಆಯ್ದ ಪ್ರತಿಕ್ರಿಯೆಗಳು ಹಾಗೂ ಚಿತ್ರದ ಪ್ರೊಮೊ ಇಲ್ಲಿದೆ ನೋಡಿ

ಚಿತ್ರದ ಪ್ರಚಾರ

ಚಿತ್ರದ ಪ್ರಚಾರಕ್ಕೆ ನಿಂತ ಅಭಿಮಾನಿ ಬಳಗ

ಚಿತ್ರದ ಮೊದಲ ಲುಕ್

ಕುತೂಹಲವೆಂದರೆ ಪ್ಯಾರ್ಗೆ ಆಗ್ಬುಟೈತೆ ಚಿತ್ರದ ಫಸ್ಟ್ ಲುಕ್ ಕಳೆದ ವಾರವೇ ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡರೂ ಅಷ್ಟು ಸದ್ದು ಮಾಡಿಲ್ಲ

ಕೋಮಲ್ ಕಮಾಲ್

ಕೋಮಲ್ ಅವರ ಚಿತ್ರ ಬಿಡುಗಡೆಗೆ ಮುನ್ನವೆ ಭಾರಿ ನಿರೀಕ್ಷೆ ಹುಟ್ಟು ಹಾಕುತ್ತಿದೆ.

ಚಿತ್ರ ಯಾವಾಗ ಬಿಡುಗಡೆ

ಪ್ಯಾರ್ಗೆ ಆಗ್ಬುಟೈತೆ ಚಿತ್ರ ಬಿಡುಗಡೆ ಬಗ್ಗೆ ಟ್ವೀಟ್

ಟ್ರೆಂಡ್ ಹುಟ್ಟಲು ಕಾರಣ

ಟ್ವಿಟ್ಟರ್ ಅಧಿಕೃತ ಖಾತೆ ಹೊಂದಿದ ಪ್ಯಾರ್ಗೆ ಆಗ್ಬುಟೈತೆ ಚಿತ್ರ ತಂಡ, ತಕ್ಷಣವೇ ಸ್ಪರ್ಧೆ ಏರ್ಪಡಿಸಿ, flipkart ವೋಚರ್ ಗಳನ್ನು ಉಡುಗೊರೆಯಾಗಿ ನೀಡಿದೆ.

ನಂಗ್ಯಾಕೋ ಡೌಟು

ನಂಗ್ಯಾಕೋ ಡೌಟು ಪ್ಯಾರ್ಗೆ ಆಗ್ಬುಟೈತೆ ನಿಜಕ್ಕೂ ಟ್ರೆಂಡ್ ಆಗುತ್ತಿದ್ಯಾ ಎಂದು ಪ್ರಶ್ನಿಸಿದವರು ಇದ್ದಾರೆ.

ಧ್ವನಿ ಸುರಳಿ ಬಿಡುಗಡೆ

ಪ್ಯಾರ್ಗೆ ಆಗ್ಬುಟೈತೆ ಚಿತ್ರದ ಆಡಿಯೋ ಬಿಡುಗದೆ ಕಳೆದ ವಾರ ಅದ್ದೂರಿಯಾಗಿ ನೆರವೇರಿತ್ತು. ಅಂಬರೀಷ್, ಕೆಎಫ್ ಸಿಸಿ ಅಧ್ಯಕ್ಷ ಡಿ ವಿಜಯ್ ಕುಮಾರ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದ್ದರು.

ಪಾತ್ರಧಾರಿಗಳು

ಕೋಮಲ್ ಕುಮಾರ್ ಜತೆಗೆ ಮೊದಲ ಬಾರಿಗೆ ಪ್ರಾರ್ಥನಾ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕೆವಿನ್ ಬಾಲ ನಿರ್ದೇಶನದ ಚಿತ್ರಕ್ಕೆ ಶೋಭಾ ಪ್ರಕಾಶ್ ಅವರು ಹಣ ಹಾಕಿದ್ದಾರೆ.

ಕೋಮಲ್ ಕಹಾನಿ

ಪೋಷಕ ನಟ ಪಾತ್ರಕ್ಕೆ ಕೋಮಲ್ ಸದ್ಯಕ್ಕೆ ಗುಡ್ ಬೈ ಹೇಳಿದ್ದಾರಂತೆ. ಹೀರೋ ಆಗಿ ಕಾಣಿಸಿಕೊಂಡು ಯಶಸ್ವಿಯಾದ ಮೇಲೆ ಮತ್ತೆ ಹಿಂತಿರುಗಿ ನೋಡುವುದೇ ಏಕೆ ಎಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಆದರೆ, ಇನ್ನೂ ಹೀರೋ ಆಗಿ ಗಟ್ಟಿಯಾಗಿ ನೆಲೆ ನಿಂತಿಲ್ಲ ಎಂಬ ಅರಿವು ಕೋಮಲ್ ಗೆ ಇದೆ. ಹಾಗಾಗಿ ಮುಂಬರುವ ಚಿತ್ರಗಳ ಮೇಲೆ 'ಹೀರೋ' ಕೋಮಲ್ ಭವಿಷ್ಯ ಅಡಗಿದೆ.

English summary
The words, 'Pyaarge Agbitaithe' seems to be bringing luck to Komal Kumar again. After the Govindaya Namaha movie Now, same word is getting attention on social media sites, as the same words are trending as the same words are trending on Twitter.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada