»   » ನಿಮ್ಮನ್ನು ರಂಜಿಸಲು

ನಿಮ್ಮನ್ನು ರಂಜಿಸಲು

Posted By: Staff
Subscribe to Filmibeat Kannada

ಹತ್ತಿರ ಹತ್ತಿರ ಒಂದು ಡಜನ್‌ ಚಿತ್ರಗಳು 2001ರ ವರ್ಷಾರಂಭದಲ್ಲೇ ತೆರೆಕಾಣಲು ಸಿದ್ಧವಾಗಿವೆ. ಶಿವರಾಜ್‌ಕುಮಾರ್‌ - ಲಯಾ ಅಭಿನಯದ ಮದುವೆ ಆಗೋಣ ಬಾ ಸಂಕ್ರಾಂತಿಯ ನಂತರ ತೆರೆಕಾಣಲಿದ್ದರೆ, ಕುರಿಗಳು ಸಾರ್‌ ಕುರಿಗಳು ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಪರಂತು ಸ್ಯಾಂಡಲ್‌ವುಡ್‌ನಲ್ಲಿ ಈಪಾಟಿ ಚಟುವಟಿಕೆ ಎಲ್ಲಿಂದ ಬಂತು? ಅಣ್ಣಾವ್ರು 108 ದಿನ ಕಾಡಿನಲ್ಲಿದ್ದಾಗ ನೆಲಕಚ್ಚಿ ನೆಲ್ಲಿಕಾಯಿ ಆಗಿದ್ದ ನಮ್ಮ ಚಿತ್ರಕರ್ಮಿಗಳು ಇಡೀ ವರ್ಷದ ವ್ಯಾಪಾರವನ್ನು ಸರಿ ತಕ್ಕಡಿಯಲ್ಲಿ ತೂಗಿಸಲು ಹೊರಟಿದ್ದಾರೆ. ಅವರಿಗೆಲ್ಲ ಈ ವರ್ಷ ವ್ಯಾಪಾರ ವೃದ್ಧಿಯಾಗಲಿ.

ನಿರ್ಮಾಣದಲ್ಲಿ ತೊಡಗಿಕೊಂಡ ಚಿತ್ರಗಳು, ಅದರ ನಾಯಕರು, ನಾಯಕಿಯರ ವಿವರಗಳು ಇಂತಿವೆ :

ಬಿ.ಸಿ. ಪಾಟೀಲರ ಲಂಕೇಶ, ಶಾಪ, ಜಗ್ಗೇಶ್‌ - ಶ್ರೀ ಲಕ್ಷ್ಮೀ ಅಭಿನಯದ ಶುಕ್ರದೆಶೆ, ಶಿವರಾಜ್‌ ಕುಮಾರ್‌ - ಧಾಮಿನಿ ಅಭಿನಯದ ಅಸುರ, ಚರಣ್‌ರಾಜ್‌, ವಿನೋದ್‌ ಆಳ್ವ ಅಭಿನಯದ ಮಾಫಿಯಾ, ಶಿವರಾಂ, ಅಖಿಲಾ, ಅಭಿಜಿತ್‌ ಅಭಿನಯದ ಯಾರಿಗೆ ಬೇಡ ದುಡ್ಡು, ರಮೇಶ್‌ - ಇಷಾ ಕೊಪ್ಪೀಕರ್‌ ಅಭಿನಯದ ಹ್ಞೂಂ ಅಂತಿಯಾ ಊಹ್ಞೂಂ ಅಂತೀಯಾ, ವಿಷ್ಣುವರ್ಧನ್‌- ಅಂಬರೀಶ್‌, ಸಾಂಘವಿ, ಲಕ್ಷ್ಮೀ ಅಭಿನಯದ ದಿಗ್ಗಜರು, ಅಂಬರೀಶ್‌ - ವಿಜಯಶಾಂತಿ ಅಭಿನಯದ ವಂದೇ ಮಾತರಂ, ರವಿಚಂದ್ರನ್‌ - ರಚನಾ, ಪ್ರಕಾಶ್‌ ರೈ ಅಭಿನಯದ ಉಸಿರೇ, ವಿನೋದ್‌ ರಾಜ್‌, ಮಂಜುಳಾ ಶರ್ಮಾ ಅಭಿನಯದ ರಾಷ್ಟ್ರಗೀತೆ, ಸ್ಪರ್ಶಾ ಖ್ಯಾತಿಯ ಸುದೀಪ್‌ ಅಭಿನಯದ ಹುಚ್ಚ, ಶ್ರುತಿ - ಮಹೇಂದ್ರ ಜೋಡಿಯ ಗಟ್ಟಿ ಮೇಳ, ಶ್ರುತಿ ಅಭಿನಯದ - ಮಹಾಲಕ್ಷ್ಮೀ, ಸೌಂದರ್ಯ, ಸಾಂಘವಿ, ವಿನೋದ್‌ ರಾಜ್‌, ಕುಮಾರ್‌ ಗೋವಿಂದ್‌ ಅಭಿನಯದ ಶ್ರೀ ಮಂಜುನಾಥ, ಶಿವರಾಜ್‌ಕುಮಾರ್‌ - ರಂಭಾ ಅಭಿನಯದ ಭಾಮೈದ, ಶಿವರಾಜ್‌ ಕುಮಾರ್‌ - ಜಯಶೀಲ ಅಭಿನಯದ ಬಹಳ ಚೆನ್ನಾಗಿದೆ, ನವನಟ ಪ್ರಸಾದ್‌ - ತೆಲುಗು ನಟಿ ರೇಖಾ ಅಭಿನಯದ ಚಿತ್ರ, ಪ್ರೇಮಿ ನಂ 1, ರಾಮ್‌ಕುಮಾರ್‌- ಶ್ರುತಿ ಅಭಿನಯದ ಎಲ್ಲರ ಮನೆ ದೋಸೇನೂ, ದೇವರಾಜ್‌ ಅಭಿನಯದ ಸತ್ಯಮೇವ ಜಯತೆ ಮೊದಲಾದ ಚಿತ್ರಗಳ ಪೈಕಿ ಕೆಲವು ಚಿತ್ರೀಕರಣ ಮುಗಿಸಿದ್ದರೆ, ಇನ್ನು ಕೆಲವು ಚಿತ್ರಗಳ ರೀರಿಕಾರ್ಡಿಂಗ್‌ ಮುಗಿದಿದೆ. ಒಟ್ಟಿನಲ್ಲಿ ಇನ್ನು 3 ತಿಂಗಳುಗಳಿಗೆ ಸಾಕಾಗುವಷ್ಟು ಕನ್ನಡ ಚಿತ್ರಗಳು ಸಿದ್ಧವಾಗಿದ್ದು, ಚಿತ್ರಮಂದಿರಗಳದೇ ದೊಡ್ಡ ಸಮಸ್ಯೆಯಾಗಿದೆ.

2001ರಲ್ಲಿ ಸುಮಾರು 90ಕ್ಕೂ ಹೆಚ್ಚು ಚಿತ್ರಗಳು ತಯಾರಾಗುವ ಸೂಚನೆ ದೊರಕಿದ್ದು ಈ ಮೇಲ್ಕಂಡ ಚಿತ್ರಗಳ ಪೈಕಿ ಎಷ್ಟು ಗೆಲ್ಲುತ್ತವೆ ಎಂಬುದನ್ನು ಕಾದು ನೋಡಬೇಕಷ್ಟೇ. ಅದಕ್ಕೆ ಮುನ್ನ ನಿಮಗೆ ನೆನಪಿಸುವುದಾದರೆ ಇಸವಿ 2000ರಲ್ಲಿ ಬಿಡುಗಡೆ ಆದ ಚಿತ್ರಗಳ ಸಂಖ್ಯೆ 56 ಗೆದ್ದದ್ದು 6 , ಸೋತದ್ದು ? ನಿಮಗೆ ಲೆಕ್ಕ ಬರುತ್ತದೆ!

English summary
kannada movie world brimming with activity

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada