For Quick Alerts
  ALLOW NOTIFICATIONS  
  For Daily Alerts

  ಹೀಗ್ ಮಾಡಿದ್ರೆ, ಕನ್ನಡ ಚಿತ್ರರಂಗ ಉದ್ಧಾರ ಆಗುವುದು ಎಲ್ಲಿಂದ ಸ್ವಾಮಿ.?

  By ಅನಾಮಿಕ
  |

  ''ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಇಲ್ಲ. ಕನ್ನಡ ಚಿತ್ರಗಳನ್ನ ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ. ಪರಭಾಷೆಯ ಸಿನಿಮಾಗಳಿಗೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಡಿಮ್ಯಾಂಡ್ ಹೈಕ್ ಆಗ್ತಿದೆ'' ಅಂತ ಗೊಣಗುತ್ತಾ 'ಕನ್ನಡ ಪ್ರೇಕ್ಷಕರ' ಮೇಲೆ ಗೂಬೆ ಕೂರಿಸುವವರು ಗಾಂಧಿನಗರದಲ್ಲಿ ಅನೇಕ ಮಂದಿ ಇದ್ದಾರೆ.!

  ಹಾಗೆ ಗೊಣಗುವವರೆಲ್ಲಾ ಈ ಲೇಖನವನ್ನ ಮಿಸ್ ಮಾಡದೆ ಓದಲೇಬೇಕು. ಕನ್ನಡ ಚಿತ್ರಗಳಲ್ಲಿ ಕ್ವಾಲಿಟಿ ಯಾಕೆ ಕಡಿಮೆ ಆಗುತ್ತಿದೆ? ಕನ್ನಡ ಚಿತ್ರರಂಗದ ನಿರ್ದೇಶಕರಲ್ಲಿ ಕ್ರಿಯೇಟಿವಿಟಿ ಕುಂಠಿತವಾಗುತ್ತಿರುವುದಾದರೂ ಯಾಕೆ? ಎಂಬ ಪ್ರಶ್ನೆಗಳಿಗೆ ಒಂದು ಜೀವಂತ ನಿದರ್ಶನವನ್ನ ಹೊತ್ತು ತಂದಿದ್ದೀವಿ....

  'ಕನ್ನಡ ಚಿತ್ರ ನಿರ್ದೇಶಕ' ಆಗಬೇಕು ಎಂಬ ಬೆಟ್ಟದಷ್ಟು ಕನಸು ಹೊತ್ತು ಹಳ್ಳಿಯಿಂದ ಪೇಟೆಗೆ ಬಂದ ಯುವಕ ತಮಗಾದ ಅನುಭವವನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡಿರುವುದನ್ನ ಯಥಾವತ್ ಆಗಿ ಇಲ್ಲಿ ವರದಿ ಮಾಡಿದ್ದೇವೆ ಓದಿ - ಸಂಪಾದಕ.

  ಗಾಂಧಿನಗರಕ್ಕೆ ಕಾಲಿಟ್ಟ ಯುವಕನ ಕಥೆ....

  ಗಾಂಧಿನಗರಕ್ಕೆ ಕಾಲಿಟ್ಟ ಯುವಕನ ಕಥೆ....

  ನಟನಾಗಬೇಕು, ನಿರ್ದೇಶಕನಾಗಬೇಕು ಅಂದ್ರೆ ಗಾಂಧಿನಗರದಲ್ಲಿ ಮೊದಮೊದಲು 'ಅವಮಾನ' ಎದುರಿಸಲೇಬೇಕು. 'ಸಿನಿಮಾ' ಕೆಲಸ ಕಲಿಯುವ ಮುನ್ನ ತಟ್ಟೆ-ಗ್ಲಾಸ್ ಎತ್ತಿ, ಟೇಬಲ್ ಕ್ಲೀನ್ ಮಾಡಿ 'ಬಕೆಟ್' ಹಿಡಿಯುವ ಕಲೆಯನ್ನೂ ಕರಗತ ಮಾಡಿಕೊಳ್ಳಬೇಕು.

  'ಮಹಾನುಭಾವ'ರ ಸೀಕ್ರೆಟ್

  'ಮಹಾನುಭಾವ'ರ ಸೀಕ್ರೆಟ್

  ಯುವಕರಲ್ಲಿ ಅಡಗಿರುವ ಪ್ರತಿಭೆಯನ್ನ ಗುರುತಿಸದೆ 'ಚಾಕರಿ' ಮಾಡಿಸಿಕೊಳ್ಳುವ 'ಮಹಾನುಭಾವ'ರ ಸೀಕ್ರೆಟ್ ಇಲ್ಲಿದೆ ನೋಡಿ....

  ಕಥೆ ರೆಡಿ ಮಾಡುವುದು ಹೇಗೆ ಗೊತ್ತಾ?

  ಕಥೆ ರೆಡಿ ಮಾಡುವುದು ಹೇಗೆ ಗೊತ್ತಾ?

  ಹಳ್ಳಿಯಿಂದ ಗಾಂಧಿನಗರಕ್ಕೆ ಬಂದ ಯುವಕ 'ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ/ನಿರ್ಮಾಪಕ'ರನ್ನ ಭೇಟಿ ಮಾಡಿ ''ನಿಮ್ಮ ಬಳಿ ಸಿನಿಮಾ ಮಾಡುವ ಟ್ರೇನಿಂಗ್ ಪಡೆಯಬೇಕು'' ಅಂತ ಕೇಳಿದ್ದಾನೆ. ಅದಕ್ಕೆ 'ಆ' ಪ್ರಖ್ಯಾತ ನಿರ್ದೇಶಕರು ಏನ್ ಮಾಡಿದ್ರು ಗೊತ್ತಾ?

  'ಬಿಸಿ ಬಿಸಿ ಚಿತ್ರಾನ್ನ' ಮಾಡು....

  'ಬಿಸಿ ಬಿಸಿ ಚಿತ್ರಾನ್ನ' ಮಾಡು....

  ಅಲ್ಲೇ ಪಕ್ಕದಲ್ಲಿ ಇದ್ದ ಒಂದು ಪುಸ್ತಕ ಮತ್ತು ಪರಭಾಷೆಯ ಮೂರು ಸಿಡಿಗಳನ್ನ ಆ ಯುವಕನ ಕೈಯಲ್ಲಿಟ್ಟು ''ಈ ಮೂರು ಸಿನಿಮಾಗಳನ್ನೂ ನೋಡಿ, ಅದೇ ಶೈಲಿಯಲ್ಲಿ ಒಂದು ಕಥೆ ರೆಡಿ ಮಾಡಿಕೊಂಡು ಬಾ'' ಅಂತ 'ಆ' ಖ್ಯಾತ ನಿರ್ದೇಶಕ/ನಿರ್ಮಾಪಕ ಹೇಳಿ ಕಳುಹಿಸಿದರಂತೆ.

  ಕ್ರಿಯೇಟಿವಿಟಿಗೆ ಬೆಲೆ ಇಲ್ವಾ?

  ಕ್ರಿಯೇಟಿವಿಟಿಗೆ ಬೆಲೆ ಇಲ್ವಾ?

  'ನಿರ್ದೇಶಕ'ನಾಗಬೇಕು ಎಂಬ ಹುಮ್ಮಸ್ಸಿನಿಂದ ಬಂದಿರುವ ಯುವಕನಿಗೆ 'ಸ್ವಂತ' ಕಥೆ ಬರೆದುಕೊಂಡು ಬಾ ಅಂತ ಹೇಳುವುದನ್ನು ಬಿಟ್ಟು ಮೂರು ಪರಭಾಷೆ ಸಿಡಿ ಕೊಟ್ಟು ಅದೇ ಸ್ಟೈಲ್ ನಲ್ಲಿ ಕಥೆ ಬರೆಯಿರಿ ಅಂದ್ರೆ ಕ್ರಿಯೇಟಿವಿಟಿ ಆದರೂ ಎಲ್ಲಿಂದ ಬರಬೇಕು ಸ್ವಾಮಿ?

  ಕ್ವಾಲಿಟಿ ಕಡಿಮೆ ಆಗುತ್ತಿರುವುದು ಇದೇ ಕಾರಣಕ್ಕೆ.?!

  ಕ್ವಾಲಿಟಿ ಕಡಿಮೆ ಆಗುತ್ತಿರುವುದು ಇದೇ ಕಾರಣಕ್ಕೆ.?!

  ಕನ್ನಡ ಚಿತ್ರಗಳಲ್ಲಿ ಸ್ವಂತಿಕೆ, ಕ್ವಾಲಿಟಿ ಕಡಿಮೆ ಆಗುತ್ತಿರುವುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಾ?

  ಹಳಸಲು ಚಿತ್ರಾನ್ನ ಯಾಕೆ ಬೇಕು?

  ಹಳಸಲು ಚಿತ್ರಾನ್ನ ಯಾಕೆ ಬೇಕು?

  ಪರಭಾಷೆಯ ಚಿತ್ರಗಳಿಗೆ ಒಗ್ಗರಣೆ ಹಾಕಿ, ಹಳಸಲು ಚಿತ್ರಾನ್ನವನ್ನ ಬಿಸಿ ಮಾಡಿ 'ಇದೇ ನೋಡಿ ಬಿಸಿ ಬೇಳೆ ಬಾತ್' ಅಂತ ಕೊಟ್ಟರೆ ಪ್ರೇಕ್ಷಕರಾದರೂ ಅದನ್ನ ಸವಿಯುವ ಮನಸ್ಸು ಯಾಕೆ ಮಾಡಬೇಕು?

  ಹೊಸಬರಿಗೆ ಯಶಸ್ಸು ಸಿಕ್ಕಿಲ್ಲ ಅಂತಲ್ಲ!

  ಹೊಸಬರಿಗೆ ಯಶಸ್ಸು ಸಿಕ್ಕಿಲ್ಲ ಅಂತಲ್ಲ!

  ಹೊಸಬರ ಹೊಸ ಐಡಿಯಾಗಳು 'ರಿಸ್ಕಿ' ಆದರೂ ಅವು ಬಾಕ್ಸ್ ಆಫೀಸ್ ನಲ್ಲಿ ಸೋತ ಉದಾಹರಣೆಗಳು ತೀರಾ ಕಡಿಮೆ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ', 'ರಂಗಿತರಂಗ', '6-5=2'....ಈ ಎಲ್ಲಾ ಸಿನಿಮಾಗಳನ್ನ ಪ್ರೇಕ್ಷಕರು ಮೆಚ್ಚಿದ್ದು, ಅದರಲ್ಲಿರುವ ಸೃಜನಶೀಲತೆಗೆ ಹೊರತು 'ಸಿದ್ಧ ಫಾರ್ಮುಲಾ'ಗಳಿಂದಲ್ಲ.!

  'ಸಿದ್ಧ ಫಾರ್ಮುಲಾ' ಇರುವ ಸೋತ ಸಿನಿಮಾಗಳೆಷ್ಟು?

  'ಸಿದ್ಧ ಫಾರ್ಮುಲಾ' ಇರುವ ಸೋತ ಸಿನಿಮಾಗಳೆಷ್ಟು?

  4 ಹಾಡು, ಒಂದು ಐಟಂ ಸಾಂಗ್, 3 ಮೂರು ಫೈಟ್ ಸೇರಿದಂತೆ ಕಮರ್ಶಿಯಲ್ ಅಂಶಗಳು ತುಂಬಿ ತುಳುಕುವ 'ಸಕ್ಸಸ್ ಫಾರ್ಮುಲಾ' ಹೊಂದಿರುವ ಅದೆಷ್ಟು (ಸ್ಟಾರ್) ಸಿನಿಮಾಗಳೇ ಸೋತು ಸುಣ್ಣವಾಗಿಲ್ಲ? ಒಮ್ಮೆ ನೆನಪಿಸಿಕೊಳ್ಳಿ....

  ಕನ್ನಡ ಚಿತ್ರರಂಗ ಉದ್ಧಾರ ಆಗುವತ್ತ ಗಮನ ಹರಿಸಿ...

  ಕನ್ನಡ ಚಿತ್ರರಂಗ ಉದ್ಧಾರ ಆಗುವತ್ತ ಗಮನ ಹರಿಸಿ...

  ''ಕನ್ನಡ ಚಿತ್ರಗಳನ್ನ ಪ್ರೇಕ್ಷಕರು ನೋಡುತ್ತಿಲ್ಲ'' ಅಂತ ಕನ್ನಡ ಸಿನಿ ಪ್ರೇಕ್ಷಕರ ಮೇಲೆ ಗೂಬೆ ಕೂರಿಸುವ ಬದಲು 'ಕ್ವಾಲಿಟಿ' ಸಿನಿಮಾಗಳನ್ನ ನೀಡುವತ್ತ ಕನ್ನಡ ಚಿತ್ರರಂಗ ಗಮನ ಹರಿಸಲಿ.....

  English summary
  Why the quality of kannada films are deteriorating? Here is an instance explained by a Newbie (Aspiring Director). Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X