ಪ್ರೇಮ್- ಧ್ರುವ ಜೋಡಿ 'ಕೆಡಿ: ದಿ ಡೆವಿಲ್' ಚಿತ್ರದ ಬಗ್ಗೆ ಸಿನಿರಸಿಕರ 5 ಪ್ರಶ್ನೆ; ಉತ್ತರಿಸೋದು ಯಾರು?

ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ಎರಡು ವಾರ ಪೂರೈಸಿ 3ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ತೆಲುಗಿನಲ್ಲಿ ಕೂಡ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಕನ್ನಡದಲ್ಲಿ ಒಳ್ಳೆ ಓಪನಿಂಗ್ ಪಡೆದಿದ್ದ ಸಿನಿಮಾ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ.

ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಇನ್ನು ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುವ ಅಂದಾಜಿತ್ತು. ಆದರೆ ಸಿನಿಮಾ ಒಟ್ಟಾರೆ ಕಲೆಕ್ಷನ್ ಸದ್ಯ 25 ಕೋಟಿ ರೂ. ದಾಟಿದೆ ಎನ್ನಲಾಗ್ತಿದೆ. ಸಿನಿಮಾ ಬಜೆಟ್‌ಗೆ ಹೋಲಿಸಿದರೆ ಇದು ಏನೇನು ಅಲ್ಲ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ಧ್ರುವ ಸರ್ಜಾ, ಪ್ರೇಮ್ ಎಲ್ಲರೂ ಭಾರೀ ಸಂಭಾವನೆ ಪಡೆದು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಸೆಟ್, ಪ್ರೀ ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್, ಸಾಂಗ್ ರೆಕಾರ್ಡಿಂಗ್, ಫಾರಿನ್ ಶೂಟಿಂಗ್ ಎಲ್ಲದ್ದಕ್ಕೂ ಭಾರೀ ಹಣ ಸುರಿಯಲಾಗಿದೆ.

Questions Rise Over Dhruva Sarja Starrer KD The Devil film result Fans Await Clarity

ಸದ್ಯ ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಕೂಡ ದೊಡ್ಡಮಟ್ಟದಲ್ಲಿ ಸೇಲ್ ಆಗಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. ಸಿನಿಮಾ ಬಿಡುಗಡೆಯಾದ ಬಳಿಕ ರಾಜ್ಯಾದ್ಯಂತ ವಿಜಯಯಾತ್ರೆ ಮಾಡಿ ಧ್ರುವ ಸರ್ಜಾ ಸೈಲೆಂಟ್ ಆಗಿಬಿಟ್ಟರು. ಈ ವಾರ 'ದೃಶ್ಯಂ- 3' ಸಿನಿಮಾ ಬರ್ತಿದೆ. ಹಾಗಾಗಿ ಸಹಜವಾಗಿಯೇ 'ಕೆಡಿ' ಸಿನಿಮಾ ಶೋಗಳ ಸಂಖ್ಯೆ ಕಮ್ಮಿ ಆಗಲಿದೆ.

'ಕೆಡಿ' ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಕಲೆಕ್ಷನ್ ಲೆಕ್ಕದ ಪೋಸ್ಟರ್‌ಗಳು ವೈರಲ್ ಆಗ್ತಿದೆ. ಆದರೂ ಚಿತ್ರತಂಡ ಸುಮ್ಮನಿದೆ. ಸುದೀಪ್ ನಟಿಸುತ್ತಾರೆ ಎನ್ನುವ ಕಾರಣಕ್ಕೆ ಸೀಕ್ವೆಲ್ ಬಗ್ಗೆ ಕೊಂಚ ನಿರೀಕ್ಷೆ ಮೂಡಿದೆ. ಕಿಚ್ಚನ ಗೆಸ್ಟ್ ಅಪಿಯರೆನ್ಸ್ ಮೊದಲ ಭಾಗಕ್ಕೂ ಬಲ ತುಂಬಿತ್ತು. 'ಕೆಡಿ' ಚಿತ್ರದ ಸಿನಿರಸಿಕರಿಗೆ ಒಂದಷ್ಟು ಪ್ರಶ್ನೆಗಳಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.

Questions Rise Over Dhruva Sarja Starrer KD The Devil film result Fans Await Clarity

1. ಪ್ಯಾನ್ ಇಂಡಿಯಾ ರಿಲೀಸ್ ಯಾವಾಗ?

ಐದು ಭಾಷೆಗಳಲ್ಲಿ 'ಕೆಡಿ' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆದಿತ್ತು. ಆದರೆ ಕೊನೆ ಕೊನೆಗೆ ಅದು ಸಾಧ್ಯವಾಗಲಿಲ್ಲ. ಎರಡು ವಾರಗಳ ಬಳಿಕ ತೆಲುಗಿಗೆ ಮಾತ್ರ ಡಬ್ ಮಾಡಿ ರಿಲೀಸ್ ಮಾಡಿದ್ದಾರೆ. ಹಿಂದಿ, ತಮಿಳು, ಮಲಯಾಳಂ ವರ್ಷನ್ ರಿಲೀಸ್ ಬಗ್ಗೆ ಯಾವುದು ಸುಳಿವು ಸಿಕ್ತಿಲ್ಲ. ಬರೀ ಓಟಿಟಿಯಲ್ಲಿ ರಿಲೀಸ್ ಮಾಡಲು ಬೇರೆ ಭಾಷೆಗಳಿಗೆ ಸಿನಿಮಾ ಡಬ್ ಮಾಡಿದ್ರಾ? ಎಂದು ಕೆಲವರು ಕೇಳುತ್ತಿದ್ದಾರೆ.

2. 'ಸರ್ಸೆ ಸರ್ಸೆ' ಸಾಂಗ್ ಎಲ್ಲಿ?

'ಕೆಡಿ' ಚಿತ್ರದ 'ಸರ್ಸೆ ಸರ್ಸೆ' ಸಾಂಗ್ ವಿವಾದ ಸೃಷ್ಟಿಸಿದ್ದು ಗೊತ್ತೇಯಿದೆ. ಸಾಹಿತ್ಯ ಅಶ್ಲೀಲವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಭಾರೀ ಅಸಮಾಧಾನದ ಬಳಿಕ ಪ್ರೇಮ್ ಕ್ಷಮೆ ಕೇಳಿದ್ದರು. ಶೀಘ್ರದಲ್ಲೇ ಹೊಸ ಸಾಹಿತ್ಯ ಬರೆದು ಸಾಂಗ್ ರಿಲೀಸ್ ಮಾಡ್ತೀನಿ ಎಂದಿದ್ದರು. ಸಿನಿಮಾದಲ್ಲಿ ಸಾಂಗ್ ಇರುತ್ತದೆ ಎಂದು ನಿರೀಕ್ಷಿಸಿದ್ದವರಿಗೆ ಬೇಸರವಾಗಿತ್ತು. ಸಿನಿಮಾ ಬಿಡುಗಡೆ ದಿನ ಕೂಡ ಶೀಘ್ರದಲ್ಲೇ ಸಾಂಗ್ ಸೇರಿಸುತ್ತೇವೆ ಎಂದು ಪ್ರೇಮ್ ಹೇಳಿದ್ದರು. ಎರಡು ವಾರ ಕಳೆದರೂ ಅದು ಸಾಧ್ಯವಾಗಿಲ್ಲ. 3 ಕೋಟಿ ರೂ.ಗೂ ಹೆಚ್ಚು ಹಣ ಸುರಿದು ಚಿತ್ರೀಕರಿಸಿದ್ದ ಸಾಂಗ್ ಕಸದ ಬುಟ್ಟಿಗೆ ಹಾಕಿದ್ರಾ?

3. ಮೇ 28ಕ್ಕೆ ಸಿನಿಮಾ ಓಟಿಟಿ ಬರೋದು ನಿಜಾನಾ?

ತಿಂಗಳಿಗೂ ಮುನ್ನ ದೊಡ್ಡ ಸಿನಿಮಾಗಳು ಓಟಿಟಿಗೆ ಬರ್ತಿವೆ. ಮೇ 28ಕ್ಕೆ 'ಕೆಡಿ' ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋಗೆ ಬರುತ್ತೆ ಎನ್ನುವ ಊಹಾಪೋಹ ಶುರುವಾಗಿದೆ. ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರದೇ ನೇರವಾಗಿ ಓಟಿಟಿಗೆ ಬಂದುಬಿಡುತ್ತಾ?

4. 'ಕೆಡಿ: ದಿ ಡೆವಿಲ್' ಸಿನಿಮಾ ಗೆಲ್ತಾ?

ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡಬೇಕಿತ್ತು. ಒಳ್ಳೆ ಓಪನಿಂಗ್ ಸಿಕ್ಕರೂ ಬಳಿಕ ಸಿನಿಮಾ ಜಾದೂ ಮಾಡಲಿಲ್ಲ. ಹಾಗಾಗಿ ಸಿನಿಮಾ ಒಟ್ಟಾರೆ ಫಲಿತಾಂಶ ಏನು?

5. ಕೆಡಿ: 2 Evil's Kingdom ಸಿನಿಮಾ ಯಾವಾಗ ಬರುತ್ತೆ?

ಸದ್ಯ ಚಿತ್ರರಂಗದಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಒಂದು ಸಿನಿಮಾ ಗೆದ್ದರೆ ಅದೇ ಕಥೆಯನ್ನು ಎಳೆದು ಮತ್ತೊಂದು ಸಿನಿಮಾ ಮಾಡುವುದು. ಕೆಲವೊಮ್ಮೆ ಒಂದೇ ಕಥೆಯನ್ನು 2 ಭಾಗಗಳಾಗಿ ಹೇಳುವುದು. ಆದರೆ ಮೊದಲ ಸಿನಿಮಾ ಗೆದ್ದರೆ ಮಾತ್ರ ಪಾರ್ಟ್-2 ಬರುತ್ತೆ. ಕೆಲ ಸಿನಿಮಾಗಳ ಕ್ಲೈಮ್ಯಾಕ್ಸ್‌ನಲ್ಲಿ ಪಾರ್ಟ್-2 ಬಗ್ಗೆ ಕುತೂಹಲ ಮೂಡಿಸುತ್ತಾರೆ. ಬಳಿಕ ಸಿನಿಮಾ ಮಾಡಲು ಮೀನಾಮೇಷ ಎಣಿಸುತ್ತಾರೆ. 'ಕೆಡಿ' ಪಾರ್ಟ್-2 ಯಾವಾಗ?

Read more about: kd prem dhruva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X