»   » ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

Posted By: ರವಿಕುಮಾರ
Subscribe to Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸೃಷ್ಟಿಸಿದ್ದು ಅಭಿಮಾನಿಗಳು, ಮಾಧ್ಯಮಗಳಲ್ಲ. ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ದರ್ಶನ್ ಅವರಿಗೆ ಮಾಧ್ಯಮಗಳು ಪ್ರಚಾರ ಕೊಟ್ಟಿರಬಹುದು. ಆದರೆ, ಮಾಧ್ಯಮಗಳಿಗಿಂತ ಹೆಚ್ಚಿಗೆ ಪ್ರಚಾರ ಕೊಟ್ಟಿದ್ದು ಅವರ ಅಭಿಮಾನಿಗಳು. ಅವರ ಯಶಸ್ಸು ನೋಡಿ ಮಾಧ್ಯಮಗಳಿಗೆ ಹೊಟ್ಟೆ ಉರಿಯಾಗುತ್ತಿದೆ....

  ಹೀಗೆಲ್ಲ ಕಿಡಿಕಾರಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿಯೊಬ್ಬರು. 'ನಮ್ಮ ಪ್ರಶ್ನೆ ಉತ್ತರ ಕೊಡ್ತೀರಾ ಚಾಲೆಂಜಿಂಗ್ ಸ್ಟಾರ್?' ಎಂಬ ಲೇಖನಕ್ಕೆ ಬೇರೆ ಯಾವ ಲೇಖನಕ್ಕೂ ಬಂದಿರದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀವು ದರ್ಶನ್ ಅವರೊಬ್ಬರನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಅಭಿಮಾನಿಗಳು ಮಾಧ್ಯಮವನ್ನೇ ಪ್ರಶ್ನಿಸಿದ್ದಾರೆ.[ಕನ್ನಡ ಸಿನಿ ಪ್ರೇಮಿಗಳು ಉತ್ತರಿಸಲೇಬೇಕಾದ ಪ್ರಶ್ನೆಗಳಿವು.!]

  ದರ್ಶನ್ ಅವರ ಕಟ್ಟಾ ಅಭಿಮಾನಿಯವರಲ್ಲಿ ಒಬ್ಬರಾಗಿರುವ ರವಿ ಕುಮಾರ್ ಎಂಬುವವರು 18 ಸ್ಲೈಡುಗಳಲ್ಲಿ ಕೇಳಿರುವ ಒಂದೊಂದು ಪ್ರಶ್ನೆಗೂ ಪ್ರತ್ಯೇಕವಾಗಿ ಉತ್ತರಿಸಿದ್ದಾರೆ. ರವಿ ಕುಮಾರ್ ಅವರಿಗೆ, ಅವರ ಅಭಿಮಾನಕ್ಕೆ, ಅವರ ಕನ್ನಡ ಲೇಖನಕ್ಕೆ, ಕನ್ನಡಾಭಿಮಾನಕ್ಕೆ ಅನಂತಾನಂತ ಧನ್ಯವಾದಗಳನ್ನು ತಿಳಿಸುತ್ತಾ... ಅವರು ಬರೆದ ರೀತಿಯಲ್ಲೇ, ಯಾವುದೇ ಪೂರ್ವಾಗ್ರಹವಿಲ್ಲದೆ ಅದದೇ ಸ್ಲೈಡುಗಳ ಉತ್ತರಗಳಂತೆ ಇಲ್ಲಿ ಪ್ರಕಟಿಸುತ್ತಿದ್ದೇವೆ. ಈ ಎರಡೂ ಲೇಖನಗಳನ್ನು ದರ್ಶನ್ ಅವರು ಸಮಯವಿದ್ದರೆ ಓದಿಕೊಳ್ಳಲಿ. ಮುಂದೆ ವಿನಮ್ರತೆಯಿಂದ ಇನ್ನಷ್ಟು ಉತ್ತಮ ಚಿತ್ರಗಳನ್ನು ನೀಡಲಿ.[ನಮ್ಮ ಪ್ರಶ್ನೆ ಉತ್ತರ ಕೊಡ್ತೀರಾ ಚಾಲೆಂಜಿಂಗ್ ಸ್ಟಾರ್?]

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ತಾವುಗಳು (ಕೆಲವು ಮಾಧ್ಯಮಗಳು) ತಾವೇ ಸುಪ್ರೀಂ ಕೋರ್ಟ್ ಎಂಬ ಭ್ರಮೆಯಲ್ಲಿದ್ದೀರಿ. ಆಂಕರ್ ಗಳು ತಾವೇ ನ್ಯಾಯಾಧೀಶರಂತೆ ದರ್ಶನ್ ರವರ ವೈಯಕ್ತಿಕ ವಿಚಾರವನ್ನು ವಾರಗಟ್ಟಲೆ ಕೆಟ್ಟದಾಗಿ ಬಿಂಬಿಸಿದ್ದು ಮರೆತು ಹೋಯಿತೇ. ಹೌದು ತಪ್ಪಿದ್ದರೆ ಶಿಕ್ಷೆಗೆ ನ್ಯಾಯಾಲಯ ಇದೆ. ಜನತಾ ನ್ಯಾಯಾಲಯವೆಂಬ ಅಭಿಮಾನಿಗಳು ಇದ್ದಾರೆ. ತಾವುಗಳು ಯಾರು? ಕೋರ್ಟಿನಿಂದ ತೀರ್ಪು ಬಂದಿತೆ? ದರ್ಶನ್ ರವರನ್ನ ಅಪರಾಧಿಯಂತೆ ಬಿಂಬಿಸಿದ್ದೇಕೆ?[ಕುಚಿಕು ಗೆಳೆಯನಿಗೆ ಕಾಲ್ ಶೀಟ್ ಕೊಟ್ಟ ಆ ನಟ ಯಾರು?]

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ಇವತ್ತು ದರ್ಶನ್ ಬೆಳೆಯಲು ನೀವು ಮಾತ್ರ ಕಾರಣ ಅಲ್ಲ. ಲಕ್ಷಾಂತರ ಅಭಿಮಾನಿಗಳು ಕಾರಣ. ಅವರವರ ಊರಿನಲ್ಲಿ ಅವರದೇ ಸ್ಟೈಲಿನಲ್ಲಿ ಪ್ರಚಾರ ಕೊಟ್ಟಿದಾರೆ. ನೀವು ಟಿ ಆರ್ ಪಿ ಹೆಚ್ಚಿಸಲು ಕೊಟ್ಟಿರಲೂಬಹುದು... ಅಲ್ಲವೇ? ಆದರೆ ಅಭಿಮಾನಿಗಳು ಆ ರೀತಿ ಮಾಡಿಲ್ಲ ತಾವು ದುಡಿದ ಹಣದಲ್ಲಿ ಎಷ್ಟೇ ಒತ್ತಡವಿದ್ದರೂ ಸಿನಿಮಾ ನೋಡಿ ಮೆಚ್ಚಿ ಆಶೀರ್ವಾದ ಮಾಡಿದ್ದಾರೆ.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ದರ್ಶನ್ ಅವರು ಜೈಲಿಗೆ ಹೋದಾಗ ನೀವು ಪಾಕಿಸ್ತಾನದ ಟೆರರಿಸ್ಟ್ ತರಹ ಅವರನ್ನು ಬಿಂಬಿಸಿದ್ದರೂ, ಜನ ಕೆಲವೇ ದಿನದಲ್ಲಿ ಸಾರಥಿ ಗೆಲ್ಲಿಸಿದ್ದು ಮರೆತು ಹೋಯಿತೇ? ಇದು ನಿಮಗೆ ಹೊಟ್ಟೆಉರಿ ಇರಬಹುದೇನೋ? ಅಭಿಮಾನಿಗಳಿಗೆ ಸಹನೆ ತಾಳ್ಮೆ ಎಲ್ಲ ಇದೆ. ಅದರ ಜೊತೆ ತಪ್ಪನ್ನು ಕ್ಷಮಿಸುವ ದೊಡ್ಡ ಗುಣ ಇದೆ. ಆದರೆ ದರ್ಶನ್ ಬೆಳೆಸಿದ್ದು ನೀವೇ ಎಂದು ಎದೆತಟ್ಟಿ ಕೊಳ್ಳಬೇಡಿ.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ಮಾಧ್ಯಮಗಳ ಸಹಾಯಕ್ಕಿಂತ ಅಭಿಮಾನಿಗಳ ಆಶೀರ್ವಾದ ಹೆಚ್ಚು. ನಿಮ್ಮಿಂದ ದರ್ಶನ್ಗೂ ಪ್ರಚಾರ ಸಿಕ್ಕಿದೆ. ಆದರೆ ಅವರಿಂದ ನಿಮಗೂ ಲಾಭ ಆಗಿದೆ ಅನ್ನೋದನ್ನ ಮರೆತು ಮಾತಾನಾಡದಿರಿ. ಒಂದು ನೆನಪಿರಲಿ... ನಿಮ್ಮನ್ನು ಸೃಷ್ಟಿಸಿರೋದು ಅಭಿಮಾನಿಗಳಲ್ಲ ಅಥವಾ ಜನರಲ್ಲ... ಆದರೆ ದರ್ಶನ್ ಅಭಿಮಾನಿಗಳು ಸೃಷ್ಟಿಸಿರೋ ವ್ಯಕ್ತಿ. ರಾಜಕಾರಣಿಗಳ ಒಡೆತನದ ಮಾಧ್ಯಮಗಳೇ, ನೆನಪಿರಲಿ ಸ್ವಾಮೀ.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ತಾವುಗಳು ಜಾಹೀರಾತು ರಹಿತ ಮನರಂಜನೆ ನ್ಯೂಸ್ ಕೊಡಿ ಆಮೇಲೆ ದರ್ಶನ್ಗೆ ಈ ಪ್ರಶ್ನೆ ಹಾಕಿ... ನೀವೆಷ್ಟು ಪಡೆಯುತ್ತಿದ್ದಿರೀ ಅದನ್ನ ಜನರಿಗೆ ತಿಳಿಸಿ.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ನಿಮ್ಮ ಪಾತ್ರವಿದೆ.. ಆದರೆ...100% ಅಲ್ಲ.. ಅಬ್ಬಬ್ಬಾ ಅಂದ್ರೆ ಕೇವಲ 5% ಮಾತ್ರ 95% ಅಭಿಮಾನಿಗಳದ್ದು... ಈ ಪ್ರಶ್ನೆ ಅಭಿಮಾನಿಗಳು ಕೇಳಬೇಕು ನೀವಲ್ಲ...

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ನೀವು ಅಂದು ಬ್ರೇಕಿಂಗ್ ನ್ಯೂಸ್ ಕೊಟ್ಟರಲ್ಲ ಅದನ್ನು ಮತ್ತೆ ಹಾಕಿ ನೋಡಿ. ಅಸಹ್ಯವಾಗುವ ಹಾಗೆ ದರ್ಶನ್ ಮಾನ ಕಳೆದಿದ್ದು ಮರೆತುಹೋಯಿತೆ? ನಿಮ್ಮನ್ನು ಅಷ್ಟೊಂದು ಕೆಟ್ಟದಾಗಿ ಏನು ದರ್ಶನ್ ಬೈದಿಲ್ಲ. ಸಹಕಾರ ಕೋಡಿ ಅಂತ ಕೇಳಿದ್ದು. ಎಷ್ಟು ಜನ ನಮ್ಮ ಕಾವೇರಿ ಗಲಾಟೇಲಿ ಕರ್ನಾಟಕ ನಿಂದಿಸಿದ್ದಾರೆ? ಅವರಿಗೆಲ್ಲ ಗಂಟೆಗಟ್ಟಲೆ ಸಪೋರ್ಟ್ ಮಾಡೋಹಾಗೆ ಪ್ರಚಾರ ಮಾಡುತ್ತಿರಿ, ಅಲ್ಲವೇ? ಆದರೆ ದರ್ಶನ್ ಕೇಳಿದ್ದು, ಅನ್ಯ ಭಾಷಿಕರಿಗಿಂತ ನಮ್ಮನ್ನು ಕೀಳಾಗಿ ನೋಡಬೇಡಿ ಅಂತ ಅಷ್ಟೆ.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ವಿಮರ್ಶೆನ ಚಾಲೆಂಜ್ ಆಗಿ ತೆಗೆದುಕೊಂಡಿದಕ್ಕೆ ಈ ಮಟ್ಟಕ್ಕೆ ದರ್ಶನ್ ಬೆಳೆದಿರೋದು. ನೀವು ಜೈಲಿಂದ ಬಂದಾಗ ಕೊಟ್ಟ ಅಪಪ್ರಚಾರ ಇದ್ದರೂ ಅಭಿಮಾನಿಗಳು ಕೈ ಹಿಡಿದಿದ್ದು ನೀವಲ್ಲ. ನೆನಪಿರಲಿ... ಸ್ವಾಮೀ...

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ತಾವುಗಳು ಮಾತ್ರ ಪ್ರಚಾರ ಕೊಟ್ಟಿಲ್ಲ ಸ್ವಾಮೀ. ಅಭಿಮಾನಿಗಳು ಲಕ್ಷ ಜನ ಇದ್ದಾರೆ ಬಸ್ ಸ್ಟಾಂಡ್, ಮಾರ್ಕೆಟ್, ಕಾಲೇಜ್, ಹಳ್ಳಿಕಟ್ಟೇಲಿ ತಮ್ಮದೇ ಆದ ರೀತಿ ಪ್ರಚಾರ ಕೊಟ್ಟಿದಾರೆ. ಅಭಿಮಾನಿಗಳು ಪ್ರತಿ ಊರಲ್ಲೂ ಇದ್ದಾರೆ. ಚಾಲೆಂಜ್ ಮಾಡಿದರೆ ಸೈಕಲ್ ಬೈಕ್ ಎತ್ತಿನ ಗಾಡಿಗಳಲ್ಲಿ ಬಂದು ಬೇಕಾದರೆ ಪ್ರಚಾರ ಮಾಡುತ್ತಾರೆ... ನಿಮ್ಮ ಕೋಳಿ ಇಂದಾನೆ ಬೆಳಾಗಾಗಲ್ಲ!

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ಈ ಮಾತು ಹೇಳಿಲ್ಲ. ಆದರೆ ನಿಮಗೆ ಆ ರೀತಿ ಅನುಭವ ಆಗಿದೆ. ನಮ್ಮ ಕನ್ನಡ ಚಾನಲ್ ಗಳು ಅಂತಾನೆ ಇಂಟರ್ ವ್ಯೂವ್ ಕೊಟ್ಟಿದ್ದು.. ಬಾಹುಬಲಿಗೆ 3 ತಿಂಗಳು ಪ್ರಚಾರ ಕೊಟ್ಟಿದ್ದೀರಿ. ಆದರೆ ಸಂಗೊಳ್ಳಿ ರಾಯಣ್ಣಗೆ ನಿಮ್ಮ ಪ್ರಚಾರ ಎಷ್ಟಿತ್ತೂ? ಸ್ವಾಭಿಮಾನಿ ಕನ್ನಡಿಗರಿಗೆ ಇಷ್ಟ ಆಗೋದು ಸಂಗೊಳ್ಳಿ ರಾಯಣ್ಣ ಮಾತ್ರ.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ದಾಸ ಅಭಿಮಾನಿಗಳಿಗೆ ಇಂದಿಗೂ ಪ್ರೀತಿಯ ದಾಸನೇ. ನಿಮ್ಮ ಚಾನಲ್ ಗೆ ಸೀಮಿತವಾಗಿ ನಿಮ್ಮಿಷ್ಟಕ್ಕೆ ಇರುವ ಗುಲಾಮನಲ್ಲ. ಡಿ ಕೇ ಶಿ ಏನು ಮಾಡಿದ್ದೀರಿ.. ಆಯನೂರು ಮಂಜುನಾಥ್ ಏನ್ ಮಾಡಿದ್ದೀರಿ ನೀವು? ಏನು ಮಾಡಕ್ಕೆ ಆಗಲಿಲ್ಲ ಬಡಪಾಯಿ ದರ್ಶನ್ ಮೇಲೆ ಹರಿಹಾಯ್ದಿರಿ.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ಬೆಳೆಯಲು ನಿಮ್ಮ ಸಹಕಾರ ಬೇಕು. ತುಂಬು ಹೃದಯದಿಂದ ಒಪ್ಪಿಕೊಳ್ಳುತ್ತೇವೆ. ಆದರೆ ಇಂತಹ ವರದಿಗಾರರಿಂದ ಅನೇಕ ನಿಷ್ಠಾವಂತ ವರದಿಗಾರರು ಆರೋಪಕ್ಕೆ ಗುರಿ ಆಗುತ್ತಾರೆ.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ಕೊಡಬೇಕು ಏಕೆ? ಅಂದರೆ... ನೀವು ಕನ್ನಡಿಗರು.. ಬೇರೆ ಭಾಷಿಗರಿಗೆ ಕೊಟ್ಟಿಲ್ಲವೆ? ಕನ್ನಡಿಗರನ್ನು ಹೀಯಾಳಿಸಿದ ಅನ್ಯ ಭಾಷಿಗರಿಗೆ ನೀವು ಪ್ರಚಾರ ಕೊಟ್ಟಿಲ್ಲವೆ? ತಪ್ಪಿದ್ದರೆ ತಿದ್ದಿ, ಆದರೆ ಅವರನ್ನೇ ತಿಥಿ ಮಾಡಲು ಪ್ರಯತ್ನಿಸದಿರಿ.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ಇದು ತಪ್ಪು. ದರ್ಶನ್ಗೆ ಕಿರಿಕಿರಿ ಮಾಡಲು ಮಸಿ ಬಳಿಯಲು ಯಾರೋ ಬುದ್ದಿಗೇಡಿಗಳು ಮಾಡಿರಬಹುದು... ದರ್ಶನ್ ಮಾಡಿದ್ದಾರಾ? ಯಾರು ಮಾಡಿದ್ದಾರೆ ಅವರ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸಿ. ಏನಾದರು ಹಾಗೆ ಮಾಡಿ ಜೈಲ್ಗೆ ಹೋಗಿ ಅವರಿಗೆ ದರ್ಶನ್ ಸಪೋರ್ಟ್ ಮಾಡಿದ್ದಾರಾ ಸ್ವಾಮೀ?

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ಮೈ ಪರಚಿ ಕೊಳ್ಳುತಿರುವುದು ನೀವು.. ಅವರಲ್ಲ. ಸಾರ್ವಜನಿಕ ಆಸ್ತಿ ಕಬಳಿಸುತ್ತಿಲ್ಲ ದರ್ಶನ್. ನೀವು ಎಷ್ಟೇ ಅಪಪ್ರಚಾರ ಮಾಡಿದ್ದರೂ (ಮಿ. ಐರಾವತ) ಸಿನೆಮಾ ಓಡುತ್ತಿದೆ. ಅದಕ್ಕೆ ನೀವು ಮೈ ಪರಚಿಕೊಳ್ಳುತ್ತಿರಬಹುದು.

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ನೀವು ಅತಿಥಿಗಳು ತಿಥಿ ಮಾಡಲು ಬರಬೇಡಿ. ಶುಭ ಹಾರೈಸಿ ಇಲ್ಲ ಸುಮ್ಮನಿರಿ. ಅಪಪ್ರಚಾರ ಮಾಡಬೇಡಿ...

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ಇಲ್ಲಿವರೆಗೆ ಯಾವ ಅಭಿಮಾನಿಗಳೂ ಕೇಳಿಲ್ಲ.. ಅವರಿಗೆ ಗೊತ್ತಾಗಲು ನೀವೊಬ್ಬರೇ ಇರೋದು ಎಂದು ಭಾವಿಸಬೇಡಿ....

  ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ

  ಅಭಿಮಾನಿಗಳಿಗೆ ಯಾವತ್ತೂ ಕಡೆಗಣಿಸಿಲ್ಲ. ನಿಮಗೋಸ್ಕರ ಅವರಿಗೆ ಮೋಸ ಮಾಡಲ್ಲ ಅವರು... ಯಾವತ್ತೂ ಪ್ರೀತಿಯ ದಾಸ ಅವರು....

  English summary
  Can only media take credit for promoting Darshan? Is Darshan neglected by media? Challenging Star Darshan's hardcore fan Ravi Kumar has answers to every question thrown at him. The fan explains why Darshan is being targetted alone. Read on. ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more