ಎಕ್ಸ್ ಕ್ಯೂಸ್ ಮೀ ಇದು ರಮ್ಯಾ ಅಭಿಮಾನಿಗಳಿಗೆ ಮಾತ್ರ
ಬಿಗ್ ಸ್ಟಾರ್ ಗಳ ಹುಟ್ಟುಹಬ್ಬವನ್ನ ಅಭಿಮಾನಿಗಳು ಹೇಗೆಲ್ಲಾ ಆಚರಿಸಬಹುದು? ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಸ್ಟಾರ್ ನಟರ ಮನೆಮುಂದೆ ಜಮಾಯಿಸಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಕ್ರೇಜಿ ಅಭಿಮಾನಿಗಳು ಸಂಭ್ರಮಿಸಬಹುದು.
ಇನ್ನೂ ಕೆಲವು ಅಭಿಮಾನಿಗಳು ಸ್ಟಾರ್ ಗಳ ಹೆಸರಲ್ಲಿ ಅನ್ನದಾನ, ರಕ್ತದಾನದಂತಹ ಶಿಬಿರಗಳನ್ನ ಆಯೋಜಿಸಿ, ಅರ್ಥಪೂರ್ಣವಾಗಿಯೂ ಆಚರಿಸುತ್ತಾರೆ. ಇವರೆಲ್ಲರಿಂತ ರಮ್ಯಾ ಮೇಡಂ ಅಭಿಮಾನಿಗಳು ಸ್ವಲ್ಪ ಡಿಫರೆಂಟು. ಇದಕ್ಕೆ, ಇದೇ ತಿಂಗಳ 29 ರಂದಿರುವ ರಮ್ಯಾ ಹುಟ್ಟುಹಬ್ಬವನ್ನ ಆಚರಿಸೋಕೆ ಫ್ಯಾನ್ಸ್ ಸಜ್ಜಾಗುತ್ತಿರುವ ರೀತಿಯೇ ಸಾಕ್ಷಿ. [ಫಾರಿನ್ ನಲ್ಲೇ ಸೆಟ್ಲ್ ಆಗ್ತಾರಾ ರಮ್ಯಾ ಮೇಡಂ?]
ಎಲ್ಲರಿಗೂ ಗೊತ್ತಿರುವಂತೆ ಗೋಲ್ಡನ್ ಕ್ವೀನ್ ರಮ್ಯಾ, ಟ್ವಿಟ್ಟರ್ ನಲ್ಲಿ ಹೆಚ್ಚು ಸಕ್ರಿಯ. ಅದಕ್ಕಾಗಿ ಟ್ವಿಟ್ಟರ್ ನಲ್ಲಿ 'ದಿವ್ಯ ಸ್ಪಂದನ ಫ್ಯಾನ್ಸ್' ಹೆಸರಲ್ಲಿರುವ ರಮ್ಯಾ ಅಭಿಮಾನಿಗಳ ಬಳಗ 'ರಸಪ್ರಶ್ನೆ ಸ್ಪರ್ಧೆ'ಯನ್ನು ಆಯೋಜಿಸಿದೆ. ರಮ್ಯಾ ಹುಟ್ಟುಹಬ್ಬಕ್ಕೆ ಇನ್ನು ಮೂರು ಶನಿವಾರಗಳು ಬಾಕಿ ಇರುವುದರಿಂದ, ಸ್ಪರ್ಧೆ ಇನ್ನೆರಡು ಶನಿವಾರಗಳಂದು ಟ್ವಿಟ್ಟರ್ ನಲ್ಲಿ ನಡೆಯಲಿದೆ.

ರಸಪ್ರಶ್ನೆ ಸ್ಪರ್ಧೆ ಅಂತ ಇಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಾಮಾನ, ಇತಿಹಾಸ, ಭಾರತ ಭೂಗೋಳಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿರೋಲ್ಲ. ಇಲ್ಲೇನಿದ್ರೂ, ಸರ್ವಂ ರಮ್ಯಾ ಮಯಂ! ರಮ್ಯಾ ಹುಟ್ಟುಹಬ್ಬಕ್ಕೆ ಈ ಕ್ವಿಜ್ ನಡೀತಾಯಿರೋದ್ರಿಂದ ಪ್ರಶ್ನೆಗಳು ರಮ್ಯಾ ಸುತ್ತಲೇ ಗಿರಿಕಿ ಹೊಡೆಯುತ್ತಿರುತ್ತವೆ.
ರಮ್ಯಾ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಅಭಿಮಾನಿಗಳಿಗಷ್ಟೆ ಈ ಸ್ಪರ್ಧೆ ಸೀಮಿತ. ರಮ್ಯಾ ರೀಲ್, ರಿಯಲ್ ಮತ್ತು ಪೊಲಿಟಿಕಲ್ ಲೈಫ್ ಬಗ್ಗೆ ಸ್ಪರ್ಧೆಯಲ್ಲಿ ಪ್ರಶ್ನೆಗಳನ್ನ ಕೇಳಲಾಗುತ್ತೆ. ಟ್ವಿಟ್ಟರ್ ನಲ್ಲೇ ಪ್ರಶ್ನೆಗಳು ಬರ್ತಾಯಿದ್ದಂತೆ, ಅಭಿಮಾನಿಗಳು ಟ್ವೀಟ್ ಮೂಲಕ ಉತ್ತರ ನೀಡಬೇಕು.
ಸ್ಪರ್ಧೆಯಲ್ಲಿ ಭಾಗವಹಿಸೋಕೆ ಇಚ್ಛಿಸುವವರು 'ದಿವ್ಯ ಸ್ಪಂದನ ಫ್ಯಾನ್ಸ್' ಅಂತಿರುವ ಟ್ವಿಟ್ಟರ್ ಅಕೌಂಟ್ ನ ಫಾಲೋ ಮಾಡಬೇಕು. ಉತ್ತರ ಹೇಳುವಾಗ ಪ್ರತಿ ಬಾರಿ #HappyBirthdayRamya ಅಂತ ಹ್ಯಾಶ್ಟ್ಯಾಗ್ ಹಾಕಬೇಕು. ಸ್ಪರ್ಧೆಯ ವಿಜೇತರಿಗೆ ರಮ್ಯಾ ಹುಟ್ಟುಹಬ್ಬದಂದು ಬಹುಮಾನ ವಿತರಿಸಲಾಗುವುದು.
ಹುಟ್ಟುಹಬ್ಬಕ್ಕಂತ ರಮ್ಯಾ ಮೇಡಂ ಬೆಂಗಳೂರಿಗೆ ವಾಪಸ್ ಬರುತ್ತಾರೋ, ಇಲ್ವೋ ಗೊತ್ತಿಲ್ಲ. ಆದ್ರೆ ಟ್ವಿಟ್ಟರ್ ಮೂಲಕ ಅಭಿಮಾನಿಗಳು ರಮ್ಯಾಗೆ ಮೇಘ ಸಂದೇಶ ಕಳುಹಿಸೋಕೆ ಈ ಸ್ಪರ್ಧೆ ಒಳ್ಳೆಯ ಚಾನ್ಸ್. ಹಾಗಾದ್ರೆ, ಇನ್ಯಾಕೆ ತಡ, ರಮ್ಯಾ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಿ...ಹ್ಯಾಪಿ ಬರ್ತಡೆ ಅಂತ್ಹೇಳಿ...ಬಂಪರ್ ಬಹುಮಾನ ಗೆಲ್ಲಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











