For Quick Alerts
  ALLOW NOTIFICATIONS  
  For Daily Alerts

  ಹಿಂದಿ ದಿವಸ್ ದಿನವೇ ಕನ್ನಡ ಚಿತ್ರಕ್ಕೆ ಹಿಂದಿ ಟೈಟಲ್

  |

  ಕೇಂದ್ರ ಸರ್ಕಾರ ಆಚರಣೆಗೆ ತರುತ್ತಿರುವ ಹಿಂದಿ ದಿವಸ್ ಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ #StopHindiImposition ಹ್ಯಾಶ್ ಟ್ಯಾಗ್ ಮೂಲಕ ಕನ್ನಡಿಗರು ಹಿಂದಿ ಹೇರಿಕೆಯನ್ನು ವಿರೋಧ ಮಾಡುತ್ತಿದ್ದಾರೆ.

  ಹಿಂದಿ ದಿವಸ್ ಅನ್ನು ನಿನ್ನೆ (ಸಪ್ಟೆಂಬರ್ 14) ರಂದು ಆಚರಣೆ ಮಾಡಲಾಯಿತು. ಆದರೆ, ಹಿಂದಿ ದಿವಸ್ ಆಚರಣೆಯ ದಿನವೇ ಕನ್ನಡದ ಸಿನಿಮಾವೊಂದಕ್ಕೆ ಹಿಂದಿ ಟೈಟಲ್ ಇಡಲಾಗಿದೆ. 'ಕಬ್ಜ' ಎಂಬ ಶೀರ್ಷಿಕೆಯ ಆ ಸಿನಿಮಾದ ಶೀರ್ಷಿಕೆ ಹಿಂದಿ ದಿವಸ್ ದಿನವೇ ಲಾಂಚ್ ಆಗಿದೆ.

  'ಪ್ರಜಾಕೀಯ' ಉಪೇಂದ್ರ: ಎಲ್ಲಾ ಓಕೆ, ಬರೀ ಚಪ್ಪಾಳೆಯಷ್ಟೆ ಯಾಕೆ?'ಪ್ರಜಾಕೀಯ' ಉಪೇಂದ್ರ: ಎಲ್ಲಾ ಓಕೆ, ಬರೀ ಚಪ್ಪಾಳೆಯಷ್ಟೆ ಯಾಕೆ?

  ಇದು ನಟ ಉಪೇಂದ್ರ ಅವರ ಹೊಸ ಸಿನಿಮಾವಾಗಿದೆ. 'ಐ ಲವ್ ಯೂ' ಸಿನಿಮಾದ ನಂತರ ಮತ್ತೆ ನಿರ್ದೇಶಕ ಆರ್ ಚಂದ್ರು ಹಾಗೂ ಉಪೇಂದ್ರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದೆ.

  ಉಪೇಂದ್ರ ಹೊಸ ಚಿತ್ರದ ಹೆಸರು 'ಕಬ್ಜ'

  ಉಪೇಂದ್ರ ಹೊಸ ಚಿತ್ರದ ಹೆಸರು 'ಕಬ್ಜ'

  ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್ ಹೊಸ ಸಿನಿಮಾಗೆ 'ಕಬ್ಜ' ಎಂದು ನಾಮಕರಣ ಮಾಡಲಾಗಿದೆ. ಹಿಂದಿ ದಿವಸ್ ದಿನವೇ ಈ ಚಿತ್ರದ ಟೈಟಲ್ ಲಾಂಚ್ ಆಗಿದೆ. 'ಕಬ್ಜ' ಎಂಬ ಹಿಂದಿ ಪದದ ಅರ್ಥ ಸೆರೆ ಹಿಡಿಯುವುದು ಅಥವಾ ವಶಪಡಿಸಿಕೊಳ್ಳುವುದು ಎಂದಾಗಿದೆ. ನಿನ್ನೆ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

  7 ಭಾಷೆಗಳಲ್ಲಿ ನಿರ್ಮಾಣದಿಂದ ಹಿಂದಿ ಟೈಟಲ್?

  7 ಭಾಷೆಗಳಲ್ಲಿ ನಿರ್ಮಾಣದಿಂದ ಹಿಂದಿ ಟೈಟಲ್?

  'ಕಬ್ಜ' 7 ಭಾಷೆಗಳಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ. ಹೀಗಾಗಿ ಎಲ್ಲ ಭಾಷೆಯ ಜನರಿಗೂ ಅರ್ಥ ಆಗಬೇಕು, ಟೈಟಲ್ ಎಲ್ಲರಿಗೂ ತಲುಪಬೇಕು ಎನ್ನುವ ಕಾರಣಕ್ಕೆ ಹಿಂದಿ ಶೀರ್ಷಿಕೆ ಇಟ್ಟಿರಬಹುದು. ಕನ್ನಡ ಚಿತ್ರಗಳಿಗೆ ಹಿಂದಿ ಟೈಟಲ್ ಇಡುವುದು ಹೊಸತೇನಲ್ಲ. ಆದರೆ, ಆ ಟೈಟಲ್ ಹಿಂದಿ ದಿವಸ್ ದಿನ ಲಾಂಚ್ ಮಾಡಿರುವುದು ವಿರೋಧಕ್ಕೆ ಕಾರಣವಾಗಿದೆ.

  ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ 5 ಲಕ್ಷ ಚೆಕ್ ಹಸ್ತಾಂತರಿಸಿದ ಉಪೇಂದ್ರನೆರೆ ಸಂತ್ರಸ್ಥರ ಪರಿಹಾರ ನಿಧಿಗೆ 5 ಲಕ್ಷ ಚೆಕ್ ಹಸ್ತಾಂತರಿಸಿದ ಉಪೇಂದ್ರ

  ಲಾಂಗ್ ಹಿಡಿದ ರಿಯಲ್ ಸ್ಟಾರ್

  ಲಾಂಗ್ ಹಿಡಿದ ರಿಯಲ್ ಸ್ಟಾರ್

  ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಭೂಗತ ಲೋಕದ ದರ್ಶನ ಮಾಡಿಸಿದ್ದು ಉಪೇಂದ್ರ. ಮೊದಲು ಲಾಂಗ್ ಪರಿಚಯ ಮಾಡಿದ್ದು ಕೂಡ ಅವರೇ. ಈಗ ಉಪೇಂದ್ರ ತಾವೇ ಲಾಂಗ್ ಹಿಡಿದಿದ್ದಾರೆ. ಆರ್ ಚಂದ್ರು ಈ ಬಾರಿ ಭೂಗತ ಲೋಕದ ಕಥೆ ಹೇಳಲಿದ್ದಾರೆ. ಚಿತ್ರ A New Vision Of Underworld ಎನ್ನುವ ಸಬ್ ಟೈಟಲ್ ಹೊಂದಿದೆ.

  ಉಪೇಂದ್ರ - ಚಂದ್ರು ಹ್ಯಾಟ್ರಿಕ್ ಸಿನಿಮಾ

  ಉಪೇಂದ್ರ - ಚಂದ್ರು ಹ್ಯಾಟ್ರಿಕ್ ಸಿನಿಮಾ

  'ಕಬ್ಜ' ಉಪೇಂದ್ರ ಮತ್ತು ಚಂದ್ರು ಕಾಂಬಿನೇಶನ್ ನಲ್ಲಿ ಬರುತ್ತಿರುವ ಹ್ಯಾಟ್ರಿಕ್ ಸಿನಿಮಾವಾಗಿದೆ. 'ಬ್ರಹ್ಮ', 'ಐ ಲವ್ ಯೂ' ಚಿತ್ರಗಳ ನಂತರ ಮತ್ತೆ ಉಪ್ಪಿ ಚಂದ್ರುಗೆ ಕಾಲ್ ಶೀಟ್ ನೀಡಿದ್ದಾರೆ. ಚಿತ್ರದ ಪೋಸ್ಟರ್ ಸಖತ್ ಸ್ಟೈಲಿಶ್ ಆಗಿದೆ. ಅಂದಹಾಗೆ, 'ಕಬ್ಜ' ಹೆಸರಿನಲ್ಲಿ 1988ರಲ್ಲಿ ಹಿಂದಿಯಲ್ಲಿ ಒಂದು ಸಿನಿಮಾ ಬಂದಿತ್ತು.

  ''ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ'' ಎಂದ ಉಪೇಂದ್ರ''ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ'' ಎಂದ ಉಪೇಂದ್ರ

  English summary
  Director R Chandru and Upendra new movie titled as 'Kabzaa'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X