ಉಪ್ಪಿ ಚಿತ್ರದ ಕಥೆ ಕೇಳಿ ಕಾಜಲ್ ಏನಂದ್ರು? ಆರ್ ಚಂದ್ರು ಹೇಳಿದ್ದೇನು?

ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಸೌತ್ ಸುಂದರಿ ಕಾಜಲ್ ಅಗರ್ ವಾಲ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಎರಡ್ಮೂರು ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಆರ್ ಚಂದ್ರು ನಿರ್ದೇಶನ ಮಾಡುತ್ತಿರುವ 'ಕಬ್ಜ' ಚಿತ್ರಕ್ಕಾಗಿ ಕಾಜಲ್ ಅಗರ್ ವಾಲ್ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕರಲಿಲ್ಲ.

ಇದೀಗ, ಆರ್ ಚಂದ್ರು ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ಕಾಜಲ್ ಅಗರ್ ವಾಲ್ ಅವರನ್ನ ಸಂಪರ್ಕಿಸಿರುವುದು ನಿಜ. ಕಬ್ಜ ಚಿತ್ರದ ಕಥೆ ಹೇಳಲಾಗಿದೆ. ಕಥೆ ಕೇಳಿದ ಕಾಜಲ್ ಸ್ಕ್ರಿಪ್ಟ್ ಕುರಿತು ಖುಷಿ ವ್ಯಕ್ತಪಡಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ನಟಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಇನ್ನು ಓಕೆ ಮಾಡಿಲ್ಲ. ಒಮ್ಮೆ ಅವರು ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ನಾನೇ ಹೇಳುತ್ತೇನೆ'' ಎಂದಿದ್ದಾರೆ.

R Chandru Clarified About Kajal Aggarwal

ಕಬ್ಜ ಚಿತ್ರಕ್ಕೆ ಆಫರ್ ಹೋಗಿರುವುದು ನಿಜ. ಕಾಜಲ್ ಕಥೆ ಕೇಳಿರುವುದು ನಿಜ. ಆದರೆ, ಇನ್ನು ಒಪ್ಪುಗೆ ಸೂಚಿಸಿಲ್ಲ. ಹಾಗಾಗಿ, ಸದ್ಯಕ್ಕೆ ಕಾಜಲ್ ಬರುವಿಕೆ ಬಗೆಗಿನ ನಿರೀಕ್ಷೆ ಹಾಗಯೇ ಇರಲಿ.

ಕಬ್ಜ ಸಿನಿಮಾದಲ್ಲಿ ಬಹುದೊಡ್ಡ ತಾರಬಳಗ ಇರಲಿದೆ. ಅಂಡರ್ ವರ್ಲ್ಡ್ ಆಧಾರಿತ ಕಥೆಯಾಗಿರುವುದರಿಂದ ಎಲ್ಲಾ ಭಾಷೆಯ ಕಲಾವಿದರನ್ನ ಕರೆದುಕೊಂಡು ಬರುವ ಪ್ಲಾನ್ ಮಾಡಿದ್ದಾರೆ ಆರ್ ಚಂದ್ರು. ತೆಲುಗು ನಟ ಜಗಪತಿ ಬಾಬು ಈ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ.

ಈಗಾಗಲೇ ಕಬ್ಜ ಚಿತ್ರದಲ್ಲಿ ಉಪೇಂದ್ರ ಅವರ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ.

More from Filmibeat

English summary
According to Source South actress Kajal Agarwal playing female lead role in Kabza movie, starring real star upendra in lead role. now, R Chandru clarified about this news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X