ಈ ವರ್ಷ ಕಬ್ಜ ಬಿಡುಗಡೆಯಾಗುತ್ತಾ? ಆರ್ ಚಂದ್ರು ಕೊಟ್ಟ ಉತ್ತರಕ್ಕೆ ಪಕ್ಕದಲ್ಲೇ ಇದ್ದ ಉಪ್ಪಿ ಶಾಕ್!

ಆರ್ ಚಂದ್ರು ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕಬ್ಜ ಚಿತ್ರದ ಶೂಟಿಂಗ್ ಶುರುವಾಗಿ ಹಲವು ತಿಂಗಳುಗಳೇ ಕಳೆದಿದ್ದು, ಚಿತ್ರದ ಅಪ್‌ಡೇಟ್ ನಿಧಾನವಾಗಿ ಹೊರ ಬೀಳ್ತಿದೆ ಹಾಗೂ ಚಿತ್ರದ ಕೆಲಸಗಳು ನಿಧಾನವಾಗಿ ನಡೆಯುತ್ತಿವೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು. ಇನ್ನು ಇದ್ಯಾವುದಕ್ಕೂ ಕಿವಿಗೊಡದ ನಿರ್ದೇಶಕ ಆರ್ ಚಂದ್ರು ತನ್ನ ಪಾಡಿಗೆ ಕೆಲಸ ಮಾಡಿ ಇತ್ತೀಚೆಗಷ್ಟೆ ಉಪ್ಪಿ ಹುಟ್ಟುಹಬ್ಬದ ಅಂಗವಾಗಿ ಕಬ್ಜ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರದ ಕೆಲಸದ ಕುರಿತಾಗಿ ಹರಿದಾಡುತ್ತಿದ್ದ ಎಲ್ಲಾ ಟ್ರೋಲ್‌ಗಳಿಗೂ ತಕ್ಕ ಉತ್ತರವನ್ನು ನೀಡಿದ್ದಾರೆ.

ಉಪೇಂದ್ರ ಹುಟ್ಟುಹಬ್ಬದ ಹಿಂದಿನ ದಿನ ಸಂಜೆ ಬಿಡುಗಡೆಯಾದ ಕಬ್ಜ ಚಿತ್ರದ ಟೀಸರ್ ಕಂಡ ಸಿನಿ ಪ್ರೇಕ್ಷಕರು 'ವಾವ್' ಎಂದಿದ್ದರು. ಆ ಟೀಸರ್ ಕಟ್, ಮೇಕಿಂಗ್ ಲೆವೆಲ್, ಬಿಜಿಎಂ, ಆರ್ ಚಂದ್ರು ಅವರ ನಿರ್ದೇಶನದ ಶೈಲಿ ಅಬ್ಬಬ್ಬ ಎನ್ನುವಂತೆ ಮಾಡಿತ್ತು. ಕೆಲವರು ಇದು ಥೇಟ್ ಕೆಜಿಎಫ್‌ನಂತೆಯೇ ಇದೆ ಎಂದರು ಹಾಗೂ ಇದೇ ಮಂದಿ ಈ ಹಿಂದೆ ಕೆಜಿಎಫ್ ರೀತಿ ಕನ್ನಡದಲ್ಲಿ ಮತ್ತೊಂದು ಸಿನಿಮಾ ಬರುವುದಿಲ್ಲ ಬಿಡಿ ಎಂಬ ಮಾತನ್ನೂ ಸಹ ಹೇಳಿದ್ದರು.

ಹೀಗೆ ತನ್ನ ಮೇಕಿಂಗ್‌ನಿಂದ ಜನರ ಮೆಚ್ಚುಗೆ ಗಳಿಸಿದ ಕಬ್ಜ ಚಿತ್ರ ತನ್ನ ಟೀಸರ್ ಸಕ್ಸಸ್ ಕಾರ್ಯಕ್ರಮವನ್ನೂ ಸಹ ಇತ್ತೀಚೆಗಷ್ಟೆ ಆಚರಿಸಿಕೊಂಡಿತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತೂ ಸಹ ಉತ್ತರ ಉತ್ತರಿಸಿದೆ.

ಬಿಡುಗಡೆ ದಿನಾಂಕ ಘೋಷಿಸಿ ಎಂದಿದ್ದ ಕೆಪಿ ಶ್ರೀಕಾಂತ್

ಬಿಡುಗಡೆ ದಿನಾಂಕ ಘೋಷಿಸಿ ಎಂದಿದ್ದ ಕೆಪಿ ಶ್ರೀಕಾಂತ್

ಇನ್ನು ಉಪೇಂದ್ರ ನಿರ್ದೇಶನದ ಉಐ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರನ್ನು ಕಬ್ಜ ಟೀಸರ್ ಸಕ್ಸಸ್ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಆಹ್ವಾನಿಸಿದ್ದರು. ಹಾಗೂ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿ ಶ್ರೀಕಾಂತ್ ಆರ್ ಚಂದ್ರು ಅವರಿಗೆ ಚಿತ್ರದ ಬಿಡುಗಡೆ ಘೋಷಿಸಿ ಚಿತ್ರದ ಮೇಲೆ ಹೈಪ್ ಮತ್ತಷ್ಟು ಹೆಚ್ಚಾಗುತ್ತೆ ಎಂದಿದ್ದೆ ಎಂದು ಹೇಳಿಕೆ ನೀಡಿದರು.

ಚಿತ್ರ ಇದೇ ವರ್ಷ ತೆರೆಗೆ ಬರುತ್ತಾ?

ಚಿತ್ರ ಇದೇ ವರ್ಷ ತೆರೆಗೆ ಬರುತ್ತಾ?

ಇನ್ನು ಟೀಸರ್ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರ್ ಚಂದ್ರು ಅವರಿಗೆ ಚಿತ್ರ ಯಾವಾಗ ಬಿಡುಗಡೆಯಾಗಲಿದೆ, ಇದೇ ವರ್ಷ ತೆರೆಗೆ ಬರುತ್ತಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಆರ್ ಚಂದ್ರು ಕೆಪಿ ಶ್ರೀಕಾಂತ್ ಕೂಡ ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡೋಣ ಎಂದಿದ್ರು ಅದಕ್ಕೆ ನಾನು ಇನ್ನೊಂದು ಹದಿನೈದು ದಿನ ಸಮಯ ಕೊಡಿ ಅಂತ ಕೇಳಿದ್ದೀನಿ ಎಂದು ಹೇಳಿಕೆ ನೀಡಿದರು. ಆರ್ ಚಂದ್ರು ಈ ರೀತಿಯ ಹೇಳಿಕೆ ನೀಡಿದ ಬೆನ್ನಲ್ಲೇ ಶಾಕಿಂಗ್ ಪ್ರತಿಕ್ರಿಯೆ ನೀಡಿದ ಉಪೇಂದ್ರ ಹಾಗಾದ್ರೆ ಡಿಸೆಂಬರ್‌ಗೂ ಸಹ ಕಬ್ಜ ಇಲ್ವಾ ಎಂದು ಚಂದ್ರು ಅವರ ಕಾಲನ್ನು ಎಳೆದರು.

ಡಿಸೆಂಬರ್‌ನಲ್ಲಿ ಥಿಯೇಟರ್ ಅಂಗಳಕ್ಕೆ ಕಬ್ಜ

ಡಿಸೆಂಬರ್‌ನಲ್ಲಿ ಥಿಯೇಟರ್ ಅಂಗಳಕ್ಕೆ ಕಬ್ಜ

ಇನ್ನು ಟೀಸರ್ ಸಕ್ಸಸ್ ಕಾರ್ಯಕ್ರಮದಲ್ಲಿ ಚಿತ್ರತಂಡದ ಈ ಮಾತುಕತೆಯನ್ನು ಕೇಳಿದರೆ ಚಿತ್ರವನ್ನು ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಯೋಜನೆ ನಡೆದಿರುವುದನ್ನು ಗಮನಿಸಬಹುದು. ಹೀಗಾಗಿ ಕಬ್ಜ ವರ್ಷಾಂತ್ಯಕ್ಕೆ ರಿಲೀಸ್ ಆಗುವ ಸಾಧ್ಯತೆಗಳಿದ್ದು ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಉಪ್ಪಿ ಹಾಗೂ ಕನ್ನಡ ಸಿನಿ ರಸಿಕರಿಗೆ ಸಿಗುವ ಗಿಫ್ಟ್ ಎನ್ನಬಹುದು.

More from Filmibeat

English summary
R Chandru is not ready to announce the release date of Kabza; movie likely to hit the screen in December. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X