Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಣ್ಣಾವ್ರಿಗೆ ಹಾಲಿನ ಅಭಿಷೇಕ ಅಭಿಮಾನಿಗಳಿಗೆ ಬಿರಿಯಾನಿ

ಸಿನಿಮಾಗಳು ಬಿಡುಗಡೆ ಆಗುತ್ತಿದೆ ಅಂದರೆ ಸಾಕು ಚಿತ್ರವನ್ನ ಯಾವ ರೀತಿಯಲ್ಲಿ ಪ್ರಚಾರ ಮಾಡಬೇಕು ಅನ್ನುವುದರ ಬಗ್ಗೆ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರುಗಳು ತಲೆ ಕೆಡಿಸಿಕೊಂಡಿರುತ್ತಾರೆ.
ಸಿನಿಮಾದ ಕಂಟೆಂಟ್ ನಂತೆಯೇ ಪ್ರಚಾರವನ್ನ ವಿಭಿನ್ನವಾಗಿ ಮಾಡಿದರೆ ಮಾತ್ರ ಸಿನಿಮಾ ಅಭಿಮಾನಿಗಳು ನಮ್ಮ ಚಿತ್ರದ ಕಡೆ ತಿರುಗಿ ನೋಡುವುದು ಅನ್ನೋದನ್ನ ಖಚಿತವಾಗಿ ತಿಳಿದುಕೊಂಡಿರುವ ನಿರ್ದೇಶಕ ಆರ್ ಚಂದ್ರು, ತಾವೇ ನಿರ್ದೇಶನ ಮಾಡಿರುವ ಕನಕ ಚಿತ್ರದ ಬಿಡುಗಡೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ವರ್ಷದ ಆರಂಭದಲ್ಲೇ ಸ್ಟಾರ್ ಚಿತ್ರಗಳ ಸಂಭ್ರಮ
ಥಿಯೇಟರ್ ಮುಂದೆ ಅಭಿಮಾನಿಗಳ ಜೊತೆ ಸೇರಿ ಅಭಿಮಾನಿ ಆಗಿ ಹಾಲು ಹಾಗೂ ಬಿರಿಯಾನಿ ಕಾಂಬಿನೇಶನ್ ನಲ್ಲಿ ಸಿನಿಮಾವನ್ನ ಪ್ರೇಕ್ಷಕರಿಗೆ ತೋರಿಸಲು ನಿರ್ಧಾರ ಮಾಡಿದ್ದಾರೆ. ಇದೇನಿದು ಹೊಸ ರೀತಿಯ ಪ್ರಮೋಷನ್ ಅಂತ ಕನ್ಫೂಸ್ ಆಗಬೇಡಿ, ಮುಂದೆ ಓದಿ

ಅದ್ಧೂರಿ ಕಟೌಟ್ ನಿಲ್ಲಿಸಲು ನಿರ್ಧಾರ
ಮುಂದಿನ ಶುಕ್ರವಾರ ಅಂದರೆ ಶುಕ್ರವಾರ (ಜ.26) ರಂದು ಕನಕ ಸಿನಿಮಾವನ್ನ ರಿಲೀಸ್ ಮಾಡಲು ನಿರ್ದೇಶಕ ಆರ್ ಚಂದ್ರ ನಿರ್ಧಾರ ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಗಾಗಿ ಡಾ ರಾಜ್ ಕುಮಾರ್ ಅವರ ಅತೀ ಎತ್ತರವಾದ ಕಟೌಟ್ ಅನ್ನು ಸಿನಿಮಾ ಮಂದಿರ ಮುಂದೆ ನಿಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ.

ಅಣ್ಣಾವ್ರ ಕಟೌಟ್ ಗೆ ಹಾಲಿನ ಅಭಿಷೇಕ
ಕನಕ ಚಿತ್ರಕ್ಕೆ ಅಣ್ಣಾವ್ರ ಅಭಿಮಾನಿ ಅನ್ನುವ ಟ್ಯಾಗ್ ಲೈನ್ ಇದೆ, ಚಿತ್ರದ ಕಥೆಯಲ್ಲಿ ಡಾ ರಾಜ್ ಕುಮಾರ್ ಅವರ ಆದರ್ಶಗಳನ್ನ ಅಳವಡಿಸಿಕೊಳ್ಳಲಾಗಿದೆ. ಇದೇ ಕಾರಣದಿಂದ ಡಾ ರಾಜ್ ಅವರ ಕಟೌಟ್ ಗೆ ಟ್ಯಾಂಕರ್ ನಲ್ಲಿ ಹಾಲನ್ನು ತಂದು ಅಭಿಷೇಕ ಮಾಡುವ ಪ್ಲಾನ್ ಮಾಡಲಾಗಿದೆ.

ಸಿನಿಮಾ ಜೊತೆಯಲ್ಲಿ ಬಿರಿಯಾನಿ ಊಟ
ಜನವರಿ 26 ರಂದು ಬಿಡುಗಡೆ ಆಗುತ್ತಿರುವ ಕನಕ ಸಿನಿಮಾ ನೋಡುವ ಪ್ರೇಕ್ಷಕರಿಗೆ ಬಿರಿಯಾನಿ ಊಟ ಸಿಗಲಿದೆ. ಕೆ ಜಿ ರಸ್ತೆಯಲ್ಲಿ ರಿಲೀಸ್ ಆಗುವ ಮುಖ್ಯ ಚಿತ್ರಮಂದಿರದ ಬಳಿ ಬಿರಿಯಾನಿ ಹಂಚಲು ಚಿತ್ರತಂಡ ನಿರ್ಧರಿಸಿದೆ.

ಮೂರು ದಿನಕ್ಕೂ ಮುಂಚೆಯೇ ಸಂಭ್ರಮಾಚರಣೆ
ಕನಕ ಚಿತ್ರ ಜನವರಿ 26ರಂದು ಬಿಡುಗಡೆ ಆಗುತ್ತಿದ್ದು ಮೂರು ದಿನಕ್ಕೂ ಮುಂಚೆಯೇ ಸಿನಿಮಾ ಮಂದಿರದ ಮುಂದೆ ಕಟೌಟ್ ನಿಲ್ಲಿಸಲು ಪ್ಲಾನ್ ಮಾಡಲಾಗಿದೆ. ಕಟೌಟ್ ಕಟ್ಟಿದ ದಿನವೇ ಹಾಲಿನ ಅಭಿಷೇಕವನ್ನೂ ಮಾಡಲಾಗುತ್ತಂತೆ.