ಆರ್ ಚಂದ್ರು ಜೀವನದಲ್ಲಿ ದೊಡ್ಡ ಬಿಸಿನೆಸ್ ಮಾಡಿದ್ದು 'ಬ್ರಹ್ಮ' ಚಿತ್ರ!
ತಾಜ್ ಮಹಲ್, ಚಾರ್ ಮಿನರ್, ಚಿತ್ರಗಳ ಯಶಸ್ಸಿನ ನಂತರ ಆರ್ ಚಂದ್ರು ಮಾಡಿದ ಚಿತ್ರ ಬ್ರಹ್ಮ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಮೊದಲ ಸಲ ಸಿನಿಮಾ ಮಾಡಿದ ಚಂದ್ರು ಈಗ ಮೂರನೇ ಸಿನಿಮಾ ಮಾಡ್ತಿದ್ದಾರೆ. ಅದಕ್ಕೆ ಕಾರಣ ಅದೇ ಬ್ರಹ್ಮ ಸಿನಿಮಾ ಎಂದು ಚಂದ್ರು ಹೇಳಿಕೊಂಡಿದ್ದಾರೆ.
Recommended Video
11 ಸಿನಿಮಾಗಳನ್ನು ಮಾಡಿರುವ ಚಂದ್ರು ಜರ್ನಿಯಲ್ಲಿ ಬ್ರಹ್ಮ ಸಿನಿಮಾ ಅತಿ ದೊಡ್ಡ ಕಮರ್ಷಿಯಲ್ ಹಿಟ್ ಚಿತ್ರವಂತೆ. ಅತಿ ಹೆಚ್ಚು ಬಿಸಿನೆಸ್ ಮಾಡಿದ್ದ ಆ ಸಿನಿಮಾ ಎಂದು ಚಂದ್ರು ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ, ಬ್ರಹ್ಮ ಸಿನಿಮಾ ತಯಾರಾಗಿದ್ದು ಹೇಗೆ? ಚಂದ್ರುಗೆ ಉಪೇಂದ್ರ ಕಾಲ್‌ಶೀಟ್ ಕೊಟ್ಟಿದ್ದು ಹೇಗೆ? ಮುಂದೆ ಓದಿ.....

ಮದುವೆಯಲ್ಲಿ ಉಪ್ಪಿ-ಚಂದ್ರು ಭೇಟಿ
''ಕನಕಪುರ ಶ್ರೀನಿವಾಸ್ ಮಗನ ಮದುವೆಯಲ್ಲಿ ಉಪೇಂದ್ರ ಅವರನ್ನು ಮೊದಲ ಸಲ ಭೇಟಿ ಮಾಡಿದೆ. ಉಪ್ಪಿ ಸರ್ ಕರೆದು, ''ಏನ್ರಿ ಡೈರೆಕ್ಟರ್ರೆ ನಮಗೆ ಸಿನಿಮಾ ಮಾಡಲ್ವಾ'' ಅಂದ್ರು. ಅದನ್ನು ಕೇಳಿ ರೋಮಾಂಚನ ಆದ ನಾನು 'ಸರ್ ನಿಮ್ಮ ಜೊತೆ ಸಿನಿಮಾ ಮಾಡೋದು ನಮ್ಮ ಆಸೆ, ಆದ್ರೆ ಭೇಟಿ ಮಾಡೋಕೆ ಆಗಿರಲಿಲ್ಲ ಅಂದೆ. 'ಸರಿ ನಂಬರ್ ತಗೊಳ್ಳಿ, ಮನೆಗೆ ಬನ್ನಿ' ಅಂತ ಹೇಳಿ ನಂಬರ್ ಕೊಟ್ಟರು'' ಎಂದು ಚಂದ್ರು ವಿವರಿಸಿದರು.

ಸಂಜೆ ವೇಳೆಗೆ ಫೋನ್ ಬಂತು
''ಸಂಜೆ ವೇಳೆ ಉಪೇಂದ್ರ ಸರ್ ಫೋನ್ ಮಾಡಿ, ನಾಳೆ ಮನೆಗೆ ಬನ್ನಿ ಚಂದ್ರು ಅಂದ್ರು. ನಾನು ಖುಷಿಯಾಗಿ ನನ್ನ ಪತ್ನಿಗೂ ಹೇಳಿದೆ. ಬೆಳಗ್ಗೆ ಉಪೇಂದ್ರ ಅವರ ಮನೆಗೆ ಹೋದೆ. ''ಒಂದು ಸಿನಿಮಾ ಮಾಡೋಣ, ಮಾಡಿ' ಅಂತಾರೆ. ಆಗಲೇ ಒಂದು ಲೈನ್ ಕಥೆ ಹೇಳಿದೆ. ಉಪ್ಪಿ ಸರ್ ಖುಷಿಯಾದರು. ಮಾಡಿ, ನಿಮ್ಮ ಮೇಲೆ ನಂಬಿಕೆ ಇದೆ ಅಂದ್ರು. ಆ ಚಿತ್ರವೇ ಬ್ರಹ್ಮ. ದೊಡ್ಡ ಕಮರ್ಷಿಯಲ್ ಹಿಟ್ ಚಿತ್ರ'' ಎಂದು ಚಂದ್ರು ಹೇಳಿದರು.

ಉಪೇಂದ್ರ ಅವರಿಗೆ ಬಾಕಿ ಹಣ ಕೊಡಬೇಕಿತ್ತು
''ಬ್ರಹ್ಮ ಸಿನಿಮಾ ಮುಗಿತು, ಉಪೇಂದ್ರ ಅವರಿಗೆ ಬಾಕಿ ಹಣ ನೀಡಬೇಕಿತ್ತು. ಹತ್ತು ಲಕ್ಷ ಹಣ ತಗೊಂಡು ನಿರ್ಮಾಪಕರ ಜೊತೆ (ಚಂದ್ರು ಅವರ ಸಂಬಂಧಿ) ಅವರ ಮನೆಗೆ ಹೋದ್ವಿ. ತಗೊಳ್ಳಿ ಸರ್ ಬಾಕಿ ಸಂಭಾವನೆ ಹಣ ಅಂತ ಹತ್ತು ಲಕ್ಷ ಕೊಟ್ಟರು. ಆ ದುಡ್ಡು ತಗೊಂಡು ಉಪೇಂದ್ರ ಅವರು, ದೇವರ ಮನೆಯಲ್ಲಿಟ್ಟು ಒಂದು ಲಕ್ಷ ತಗೊಂಡು ಒಂಬತ್ತು ಲಕ್ಷ ಮತ್ತೆ ವಾಪಸ್ ತಂದು, ನನಗೆ (ಚಂದ್ರುಗೆ) ಕೊಟ್ಟರು. ಹಾರ್ಡ್‌ವರ್ಕ್ ಮಾಡ್ತೀರಾ, ಒಳ್ಳೆ ಕೆಲಸಗಾರ. ನಿಮ್ಮ ಜೊತೆ ಮತ್ತೆ ಮತ್ತೆ ಸಿನಿಮಾ ಮಾಡ್ಬೇಕು. ಒಳ್ಳೆದಾಗಲಿ ಅಂತ ಒಂಭತ್ತು ಲಕ್ಷ ಕೊಟ್ಟರು'' ಎಂದು ಘಟನೆಯನ್ನು ಸ್ಮರಿಸಿಕೊಂಡರು.

ನಿರ್ಮಾಪಕರಿಗೆ ಕೊಟ್ಟೆ, ಅವರು ಕಾರ್ ಕೊಟ್ಟರು
''ಉಪೇಂದ್ರ ಅವರ ನೀಡಿದ ಹಣವನ್ನು ನಾನು ನಿರ್ಮಾಪಕರಿಗೆ ಕೊಟ್ಟೆ. ಒಳ್ಳೆದಾಗಲಿ, ಸಿನಿಮಾ ಗೆದ್ದ ಮೇಲೆ ಬೇಕಾದರು ಕೊಡಿ ಎಂದೆ. ಸಿನಿಮಾ ಹಿಟ್ ಆಯ್ತು. ನಿರ್ಮಾಪಕರು ನನಗೆ ಇನೋವಾ ಕಾರ್ ಗಿಫ್ಟ್ ಕೊಟ್ಟರು'' ಎಂದು ಬ್ರಹ್ಮ ಸಿನಿಮಾದ ಸಕ್ಸಸ್ ಹಂಚಿಕೊಂಡರು.


Click it and Unblock the Notifications











