ಪತ್ನಿ ಬಗ್ಗೆ 'ಕೆಟ್ಟ ಸುದ್ದಿ' ಹಬ್ಬಿಸಿದವರ ವಿರುದ್ಧ ಆರ್ ಜೆ ಪ್ರದೀಪ್ ಆಕ್ರೋಶ
Recommended Video
ಸೆಲೆಬ್ರಿಟಿಗಳ ಬಗ್ಗೆ ಕೆಟ್ಟ ಸುದ್ದಿ ಬಿತ್ತರಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ಜಾಸ್ತಿ ಆಗುತ್ತಿದೆ. ಕೆಲವು ವೆಬ್ ಸೈಟ್ ಗಳು ಮತ್ತು ಯೂಟ್ಯೂಬ್ ಚಾನೆಲ್ ಗಳು ಲೈಕ್ಸ್, ಕಮೆಂಟ್ಸ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಬಾಯಿಗೆ ಬಂದಹಾಗೆ ಬರೆದು ಸುದ್ದಿಗಳನ್ನು ಬಿತ್ತರಿಸುತ್ತಿವೆ.
ಆದ್ರೆ ಇಂತಹ ಕೆಟ್ಟ ಸುದ್ದಿಗಳಲ್ಲಿ ಸಿಲುಕಿಕೊಂಡವರು ಪರದಾಡುವಂತ್ತಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೆಬ್ ಸೈಟ್ ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಲ್ಲಿ ಏನು ಬೇಕಾದರು ಬರೆದು ಹಾಕಬಹುದು, ಯಾರು ಕೇಳುವವರು ಇರುವುದಿಲ್ಲ ಎನ್ನುವ ಬಂಡ ಧೈರ್ಯ ಅನೇಕರದ್ದು.
ಹಾಗಾಗಿಯೇ ಕೆಲವು ವೆಬ್ ಸೈಟ್ ಗಳು ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟ ಕೆಟ್ಟ ಸುದ್ದಿಗಳನ್ನು ಹಬ್ಬಿಸುತ್ತಿವೆ. ಇಂತಹ ಕೆಟ್ಟ ಸುಳ್ಳು ಸುದ್ದಿಗಳೀಗ ಅನೇಕ ಸೆಲೆಬ್ರಿಟಿಗಳನ್ನು ತೊಂದರೆಗೆ ಸಿಲುಕಿಸುತ್ತಿವೆ. ಈಗ ಇಂತಹದೇ ಒಂದು ಕೆಟ್ಟ ಸುದ್ದಿಯ ವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ ಆರ್ ಜೆ ಪ್ರದೀಪ್ ಪತ್ನಿ ಶ್ವೇತಾ ಪ್ರಸಾದ್.ಮುಂದೆ ಓದಿ..

ಶ್ವೇತಾ ಬಗ್ಗೆ ಕಾರು ಅಫಘಾತದ ಕೆಟ್ಟ ಸುದ್ದಿ
ಆರ್ ಜೆ ಪ್ರದೀಪ್ ಪತ್ನಿ, ಕಿರುತೆರೆಯ ಖ್ಯಾತ ನಟಿ ಶ್ವೇತಾ ಪ್ರಸಾದ್ ಬಗ್ಗೆ ಕೆಟ್ಟ ಸುದ್ದಿಯೊಂದು ಹರಿದಾಡುತ್ತಿದೆ. ನಟಿ ಶ್ವೇತಾ ಪ್ರಸಾದ್ ಕಾರು ಅಫಘಾತದಲ್ಲಿ ನಿಧನರಾಗಿದ್ದಾರೆ ಎನ್ನುವ ಕೆಟ್ಟ ಸುದ್ದಿಯನ್ನು ಒಂದು ವೆಬ್ ಸೈಟ್ ವರದಿ ಮಾಡಿದೆ. ಏಪ್ರಿಲ್ 23ರ ರಾತ್ರಿ ಈ ಅವಘಡ ಸಂಭವಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ಸುದ್ದಿ ನೋಡಿ ಪ್ರದೀಪ್ ದಂಪತಿ ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ.

ಆಕ್ರೋಶಗೊಂಡ ಆರ್ ಜೆ ಪ್ರದೀಪ್
ಶ್ವೇತಾ ದಂಪತಿ ಈ ಸುದ್ದಿ ನೋಡಿ ಶಾಕ್ ಆಗುವುದರ ಜೊತೆಗೆ ಕೆಟ್ಟ ಸುದ್ದಿ ಹಬ್ಬಿಸಿದವರ ವಿರುದ್ಧ ಪ್ರದೀಪ್ ಆಕ್ರೋಶ ಗೊಂಡಿದ್ದಾರೆ. "ಒಂದಿಷ್ಟು ಲೈಕ್ಸ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಮಾಡಿರುವ ಚೀಪ್ ಗಿಮಿಕ್ ಇದು. ಕೆಲವು ವೆಬ್ ಸೈಟ್ ಗಳು ಗೂಗಲ್ ಜಾಹಿರಾತುಗಳಿಂದ ಹಣ ಮಾಡುವ ಉದ್ದೇಶದಿಂದ ಈ ರೀತಿಯ ಕೆಟ್ಟ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅನೇಕರು ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ
ಕಾರು ಅಫಘಾತದ ಸುಳ್ಳು ಸುದ್ದಿ ಬಿತ್ತರವಾಗುತ್ತಿದಂತೆ "ಅನೇಕರು ಗಾಬರಿಯಿಂದ ಕರೆ ಮಾಡಿ ಆರಾಮಾಗಿದ್ದೀರ ಎಂದು ವಿಚಾರಿ ಕೊಳ್ಳುತ್ತಿದ್ದಾರೆ. ಪತ್ನಿ ಶ್ವೇತಾ ಮತ ಚಲಾಯಿಸಲು ಶಿವಮೊಗ್ಗಕ್ಕೆ ತೆರಳಿದ್ದಾರೆ. ನಾನು ಬೆಂಗಳೂರಿನಲ್ಲೇ ಇದ್ದೀನಿ ಚುನಾವಣಾ ಆಯೋಗದ ಕೆಲಸದಲ್ಲಿ ನಿರತನಾಗಿದ್ದೀನಿ. ಇಬ್ಬರು ಜೀವಂತವಾಗಿ ಸಂತೋಷವಾಗಿದ್ದೀವೆ" ಎಂದು ಹೇಳಿದ್ದಾರೆ

ಸೈಬರ್ ಕ್ರೈಮ್ ಗೆ ದೂರು ನೀಡಿದ ಪ್ರದೀಪ್
ಪತ್ನಿ ಶ್ವೇತಾ ಬಗ್ಗೆ ಸುಳ್ಳು ವರದಿ ಮಾಡಿದ ವೆಬ್ ಸೈಟ್ ವಿರುದ್ಧ ಆರ್ ಜೆ ಪ್ರದೀಪ್ ಕ್ರಮ ತೆಗೆದುಕೊಂಡಿದ್ದಾರೆ. ಕೆಟ್ಟ ಸುದ್ದಿ ಬಿತ್ತರಿಸಿದವರ ವಿರುದ್ಧ ಪ್ರದೀಪ್ ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ. ಇಂತವರ ವಿರುದ್ಧ ವರದಿ ಮಾಡಿ ಇಂತಹ ಕಳೆಯನ್ನು ಕಿತ್ತು ಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ರಾಧಾ ರಮಣ' ಧಾರಾವಾಹಿಯ ನಾಯಕಿ
ಶ್ವೇತಾ ಪ್ರಸಾದ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾ ರಮಣ' ದಾರಾವಾಹಿಯ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಧಾ ಮಿಸ್ ಅಂತಾನೆ ಖ್ಯಾತಿ ಗಳಿಸಿರುವ ಶ್ವೇತಾ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದಾರೆ. ಇತ್ತೀಚಿಗಷ್ಟೆ 'ರಾಧಾ ರಮಣ' ದಾರಾವಾಹಿಯಿಂದ ಹೊರಬರುತ್ತಿರುವುದಾಗಿ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು ಶ್ವೇತಾ.


Click it and Unblock the Notifications











