»   » ಬಹುಭಾಷಾ ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಕನಕಪುರ ಶ್ರೀನಿವಾಸ್

ಬಹುಭಾಷಾ ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಕನಕಪುರ ಶ್ರೀನಿವಾಸ್

Posted By:
Subscribe to Filmibeat Kannada

'ಭಜರಂಗಿ ಭಾಯ್ ಜಾನ್' ಮತ್ತು 'ಬಾಹುಬಲಿ' ಚಿತ್ರಗಳ ವಿತರಣೆ ಹಕ್ಕು ಪಡೆದು ಯಶಸ್ಸು ಕಂಡಿರುವ ಆರ್.ಎಸ್.ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ಫುಲ್ ಝೂಮ್ ನಲ್ಲಿದ್ದಾರೆ.

ಅವರ ನಿರ್ಮಾಣದಲ್ಲಿ ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಆರ್.ಎಸ್.ಪ್ರೊಡಕ್ಷನ್ ಬ್ಯಾನರ್ ನಲ್ಲಿನ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಚಿತ್ರೀಕರಣ ಪೂರ್ಣಗೊಂಡಿದೆ. ['ಬಾಹುಬಲಿ' ವಿತರಣಾ ಹಕ್ಕಿನ ಹಿಂದಿದೆ ಮಾಸ್ಟರ್ ಪ್ಲಾನ್!]

R.S.Productions new multilingual venture titled 'Gadiyara'

ನಿರ್ದೇಶಕ ಚೇತನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ 'ಬಹದ್ದೂರ್' ಚಿತ್ರ ನಿರ್ಮಾಣ ಮಾಡಿದ್ದ ಇದೇ ಸಂಸ್ಥೆ ಇದೀಗ ಅದೇ ಚೇತನ್ ಮತ್ತು ಧ್ರುವ ಸರ್ಜಾಗಾಗಿ 'ಭರ್ಜರಿ' ಚಿತ್ರ ನಿರ್ಮಾಣ ಮಾಡುತ್ತಿದೆ.

ಈ ಮೂರು ಬಿಗ್ ಬಜೆಟ್ ಚಿತ್ರಗಳ ಜೊತೆಗೆ ಆರ್.ಎಸ್.ಪ್ರೊಡಕ್ಷನ್ಸ್ ಹೊಸ ಸಾಹಸಕ್ಕೆ ಕೈಹಾಕಿದೆ. ಅದೇನೆಂದರೆ, ನಾಗಶೇಖರ್ ಕಥೆ-ಚಿತ್ರಕಥೆ ಬರೆದು ಸಂಭಾಷಣೆ-ನಿರ್ದೇಶನ ಮಾಡುವುದಕ್ಕೆ ಹೊರಟಿರುವ ಬರೋಬ್ಬರಿ ನಾಲ್ಕು ಭಾಷೆಗಳಲ್ಲಿ ರೆಡಿಯಾಗುವ 'ಗಡಿಯಾರ' ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಿದೆ. [ಕರ್ನಾಟಕದಲ್ಲೂ ಇತಿಹಾಸ ನಿರ್ಮಿಸಿದ 'ಬಾಹುಬಲಿ']

ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ 'ಗಡಿಯಾರ' ಏಕಕಾಲಕ್ಕೆ ರೆಡಿಯಾಗಲಿದೆ. ದಕ್ಷಿಣ ಭಾರತದ ಖ್ಯಾತ ನಟಿ ತಾಪ್ಸಿ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕ ಪಾತ್ರಕ್ಕೆ ಯಾರೂ ಇನ್ನೂ ಕನ್ಫರ್ಮ್ ಆಗಿಲ್ಲ.

English summary
R.S.Productions new multilingual venture is titled as 'Gadiyara'. Taapsi is playing lead role in the movie which is set to go on floors in December.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada