For Quick Alerts
  ALLOW NOTIFICATIONS  
  For Daily Alerts

  ಹ್ಯಾಟ್ರಿಕ್ ವಿಕೆಟ್ ಪಡೆದ ಕರ್ನಾಟಕ ಆಟಗಾರನಿಗೆ ಶುಭಕೋರಿದ ತಮಿಳು ನಟಿ

  |

  2019ನೇ ಸಾಲಿನಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿದೆ. ತಮಿಳುನಾಡು ತಂಡವನ್ನ ಮಣಿಸಿದ ಕರ್ನಾಟಕ ನಾಲ್ಕನೇ ಬಾರಿ ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಕ್ಕಿದೆ.

  ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಬೌಲರ್ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಎತ್ತಿ ಹಿಡಿಯುವಲ್ಲಿ ತಂಡಕ್ಕೆ ಸಹಕಾರಿಯಾದ ಕರ್ನಾಟಕ ತಂಡದ ಬೌಲರ್ ಅಭಿಮನ್ಯು ಮಿಥುನ್ ಅವರಿಗೆ ತಮಿಳಿನ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

  ತಮಿಳುನಾಡು ಮಣಿಸಿ 4ನೇ ಬಾರಿಗೆ ವಿಜಯ್ ಹಜಾರೆ ಕಪ್‌ ಗೆದ್ದ ಕರ್ನಾಟಕ!

  ಟ್ವಿಟ್ಟರ್ ನಲ್ಲಿ ಶುಭ ಕೋರಿರುವ ರಾಧಿಕಾ ಶರತ್ ಕುಮಾರ್, ''ಅದ್ಭುತ...ಇಂದಿನ ಪಂದ್ಯದಲ್ಲಿ ನಿಮ್ಮ ಆಟ ನೋಡಿದೆ. ಹೆಮ್ಮೆಯಾಗುತ್ತಿದೆ'' ಎಂದಿದ್ದಾರೆ. ಜೊತೆಗೆ ಅಭಿಮನ್ಯು ಅವರ ಫೋಟೋ ಶೇರ್ ಮಾಡಿದ್ದಾರೆ.

  ಹುಟ್ಟು ಹಬ್ಬದ ದಿನವೇ ಹ್ಯಾಟ್ರಿಕ್ ವಿಕೆಟ್ ಪಡೆದ ಕನ್ನಡಿಗ ಅಭಿಮನ್ಯು ಮಿಥುನ್!

  ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅಭಿಮನ್ಯು ಮಿಥುನ್ ಪಾತ್ರರಾಗಿದ್ದಾರೆ. ವಿಜಯ್ ಹಜಾರೆ ಮತ್ತು ರಣಜಿ ಟೂರ್ನಿ ಎರಡರಲ್ಲೂ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.

  ರಾಧಿಕಾ ಶರತ್ ಪುತ್ರಿ ಜೊತೆ ಕ್ರಿಕೆಟರ್ ಅಭಿಮನ್ಯು ಮಿಥುನ್ ಮದುವೆ

  ಅಂದ್ಹಾಗೆ, ರಾಧಿಕಾ ಶರತ್ ಕುಮಾರ್ ಅವರ ಪೂರ್ವ ಪತಿ ಬ್ರಿಟಿಷ್ ಮೂಲದ ರಿಚರ್ಡ್ ಹಾರ್ಡಿ ಅವರ ಪುತ್ರಿಯಾದ ರಯಾನೆ ಅವರನ್ನು ಕ್ರಿಕೆಟಿಗ ಅಭಿಮನ್ಯು ಮಿಥುನ್ ವಿವಾಹವಾಗಿದ್ದಾರೆ. ಹಾಗಾಗಿ, ಅಭಿಮನ್ಯು ರಾಧಿಕಾ ಅವರ ಅಳಿಯ. ಅಳಿಯನ ಈ ಸಾಧನೆ ಬಗ್ಗೆ ಅತ್ತೆಯಾಗಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

  9.5 ಓವರ್‌ ಬೌಲಿಂಗ್ ಮಾಡಿದ ಅಭಿಮನ್ಯು ಮಿಥುನ್ 34 ರನ್‌ ನೀಡಿ, 5 ವಿಕೆಟ್‌ ಪಡೆದು ಮಿಂಚಿದರು.

  English summary
  Tamil actress Radhika Sarathkumar has congratulations to karnataka cricket player Abhimanyu Mithun for his hat trick wicket in vijay hazare final match.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X