For Quick Alerts
  ALLOW NOTIFICATIONS  
  For Daily Alerts

  ರಾಯ್ ಲಕ್ಷ್ಮಿ ನಿಶ್ಚಿತಾರ್ಥ ಸುದ್ದಿಗೆ ಟ್ವಿಸ್ಟ್: ಸ್ಪಷ್ಟನೆ ನೀಡಿದ ನಟಿ

  |

  ಬಹುಭಾಷಾ ನಟಿ ರಾಯ್ ಲಕ್ಷ್ಮಿ ಪ್ರೀತಿಯಲ್ಲಿದ್ದಾರೆ, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಖುದ್ದು ನಟಿಯೇ ನಿಶ್ಚಿತಾರ್ಥದ ಕುರಿತು ಮಾಹಿತಿ ನೀಡಿದ್ದಾರೆ, ಈ ತಿಂಗಳ ಅಂತ್ಯಕ್ಕೆ ಎಂಗೇಜ್‌ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ವೈರಲ್ ಆಗಿತ್ತು.

  ಆದ್ರೀಗ, ನಟಿ ರಾಯ್ ಲಕ್ಷ್ಮಿ 'ಅದೆಲ್ಲವೂ ವದಂತಿ ಅಷ್ಟೇ. ನಾನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದ ಸಂದೇಶದ ಬಗ್ಗೆ ವಿವರಣೆ ನೀಡಿರುವ ನಟಿ 'ತಾಳ್ಮೆಯಿಂದ ಓದುವ ಹವ್ಯಾಸ ಇಲ್ಲ, ಹಾಗಾಗಿ, ಇಂತಹ ಎಡವಟ್ಟು ಆಗಿದೆ' ಎಂದು ತಿಳಿಸಿದ್ದಾರೆ.

  ಅಷ್ಟಕ್ಕೂ, ರಾಯ್ ಲಕ್ಷ್ಮಿ ಹಾಕಿದ್ದ ಪೋಸ್ಟ್‌ನಲ್ಲಿ ಏನಿತ್ತು? ನಿಶ್ಚಿತಾರ್ಥದ ದಿನಾಂಕ ಹೇಳಿದ್ದೇಕೆ ಎನ್ನುವುದಕ್ಕೆ ಈಗ ಉತ್ತರ ನೀಡಿದ್ದಾರೆ. ಮುಂದೆ ಓದಿ...

  ನಿಶ್ಚಿತಾರ್ಥ ಅಂತ ಹೇಳಿದ್ದರು

  ನಿಶ್ಚಿತಾರ್ಥ ಅಂತ ಹೇಳಿದ್ದರು

  ಏಪ್ರಿಲ್ 6ರಂದು ಹಾಕಿದ್ದ ಪೋಸ್ಟ್‌ನಲ್ಲಿ ''ನಾನು ನನ್ನ ಸಂಬಂಧವನ್ನು ಮುಚ್ಚಿಡುತ್ತಿಲ್ಲ. ಹೌದು, ಕಳೆದ ವಾರ ನಾನು ನನ್ನ ಸ್ನೇಹಿತರಿಗೆ ಆಮಂತ್ರಣ ಕಳುಹಿಸಿದ್ದೇನೆ, ನಾವು ಏಪ್ರಿಲ್ 27 ರಂದು ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದೇವೆ. ನನ್ನ ಕುಟುಂಬ ಸಂತಸವಾಗಿದೆ. ನನ್ನ ಜೊತೆಗಾರನ ಜೊತೆ ಸಮಯ ಕಳೆಯಲು ಕಾಯುತ್ತಿದ್ದೇನೆ'' ಎಂದು ಉಲ್ಲೇಖಿಸಿದ್ದರು. ಆದರೆ, ಕೊನೆಯಲ್ಲಿ ಟ್ವಿಸ್ಟ್ ನೀಡಿದ್ದರು. ಆ ಬಗ್ಗೆ ಹೆಚ್ಚು ಗಮನ ಕೊಡದ ಕಾರಣ ಈ ಸುದ್ದಿ ವೈರಲ್ ಆಗಿದೆ.

  ''ಕನ್ನಡ ಸಿನಿಮಾ ಅಂದ್ರೆ ಯಾರಿಗೂ ಗೊತ್ತಿಲ್ಲ'' : ಡಬ್ಬಿಂಗ್ ಬಗ್ಗೆ ಹೀಗಂತಾರೆ ನಟಿ ಲಕ್ಷ್ಮಿ ರೈ!''ಕನ್ನಡ ಸಿನಿಮಾ ಅಂದ್ರೆ ಯಾರಿಗೂ ಗೊತ್ತಿಲ್ಲ'' : ಡಬ್ಬಿಂಗ್ ಬಗ್ಗೆ ಹೀಗಂತಾರೆ ನಟಿ ಲಕ್ಷ್ಮಿ ರೈ!

  ಅಪಾರ್ಥ ಆಯ್ತು ರಾಯ್ ಲಕ್ಷ್ಮಿ ಪೋಸ್ಟ್

  ಅಪಾರ್ಥ ಆಯ್ತು ರಾಯ್ ಲಕ್ಷ್ಮಿ ಪೋಸ್ಟ್

  ರಾಯ್ ಲಕ್ಷ್ಮಿ ಹಾಕಿದ್ದ ಪೋಸ್ಟ್‌ನ್ನು ಪೂರ್ತಿ ಓದಿದ್ದರೆ ಯಾರೂ ಅಪಾರ್ಥ ಮಾಡಿಕೊಳ್ಳುತ್ತಿರಲಿಲ್ಲ. ಆದರೆ, ನಿಶ್ಚಿತಾರ್ಥ ದಿನಾಂಕ ಓದಿ ವಾಪಸ್ ಹೋದವರಿಗೆ ಇದು ಗೊಂದಲ ಉಂಟು ಮಾಡಿದೆ. ಅಂದ್ಹಾಗೆ, ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ''ಬೇರೊಬ್ಬರಿಂದ ಈ ಪೋಸ್ಟ್ ಕದ್ದು ಹಾಕಿದ್ದೇನೆ. ನಿಮ್ಮ ಕೈಗಳನ್ನು ಆಗಾಗ ತೊಳೆಯಿರಿ. ಸ್ಯಾನಿಟೈಸರ್ ಬಳಸಿ'' ಎಂದು ಹೇಳಿ ಕಾಗೆ ಹಾರಿಸಿದ್ದರು.

  ಮತ್ತೊಮ್ಮೆ ಸ್ಪಷ್ಟನೆ ನೀಡಿದ ನಟಿ

  ಮತ್ತೊಮ್ಮೆ ಸ್ಪಷ್ಟನೆ ನೀಡಿದ ನಟಿ

  ಏಪ್ರಿಲ್ 6 ರಂದು ಹಾಕಿದ ಪೋಸ್ಟ್‌ ನಿಶ್ಚಿತಾರ್ಥದ ಕುರಿತು ಗೊಂದಲ ಮೂಡಿಸಿತು. ಹಾಗಾಗಿ, ಏಪ್ರಿಲ್ 8 ರಂದು ಲಕ್ಷ್ಮಿ ಹೊಸ ಪೋಸ್ಟ್ ಹಾಕಿ ಸ್ಷಷ್ಟನೆ ನೀಡಿದ್ದಾರೆ. ''ಕೊರೊನಾ ಕುರಿತು ಜಾಗೃತಿ ಮೂಡಿಸಲು ನಾನು ಪೋಸ್ಟ್ ಹಾಕಿದ್ದೇ. ತಾಳ್ಮೆಯಿಂದ ಪೂರ್ತಿ ಪೋಸ್ಟ್ ಓದಿದ್ದರೆ ಕೊನೆಯ ಎರಡು ಸಾಲು ಬಹಳ ಮುಖ್ಯವಾಗಿತ್ತು. ನನ್ನ ನಿಶ್ಚಿತಾರ್ಥದ ಸುದ್ದಿ ವದಂತಿ. ಕೊರೊನಾದಿಂದ ಎಚ್ಚರಿಕೆಯಿಂದಿರಿ'' ಎಂದು ವಿನಂತಿಸಿದರು.

  ಲಕ್ಷ್ಮೀ ರೈ 'ಝಾನ್ಸಿ' ಚಿತ್ರದ ಡಬ್ಬಿಂಗ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್ಲಕ್ಷ್ಮೀ ರೈ 'ಝಾನ್ಸಿ' ಚಿತ್ರದ ಡಬ್ಬಿಂಗ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್

  Yuvarathnaa Breaks Yuvarathna KGF Record, KGF ದಾಖಲೆ ಮುರಿದ ಯುವರತ್ನ | Filmibeat Kannada
  'ಝಾನ್ಸಿ' ಬಿಡುಗಡೆಯಾಗಬೇಕಿದೆ

  'ಝಾನ್ಸಿ' ಬಿಡುಗಡೆಯಾಗಬೇಕಿದೆ

  ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ರಾಯ್ ಲಕ್ಷ್ಮಿ ನಟಿಸಿದ್ದಾರೆ. ವಾಲ್ಮಿಕಿ, ಸ್ನೇಹನಾ ಪ್ರೀತಿನಾ, ಕಲ್ಪನಾ, ಮಿಂಚಿನ ಓಟ, ಅಟ್ಟಹಾಸ ಅಂತಹ ಸ್ಯಾಂಡಲ್‌ವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ 'ಝಾನ್ಸಿ' ಎಂಬ ಕನ್ನಡ ಸಿನಿಮಾ ಮಾಡಿದ್ದು, ಬಿಡುಗಡೆಯಾಗಬೇಕಿದೆ. ಅದರ ಜೊತೆಗೆ ತಮಿಳಿನಲ್ಲಿ 'ಸಿಂಡ್ರೆಲಾ', 'ಗ್ಯಾಂಗ್‌ಸ್ಟರ್ 21', ತೆಲುಗಿನಲ್ಲಿ 'ಆನಂದ್ ಭೈರವಿ' ಹಾಗೂ ಮಲಯಾಳಂನಲ್ಲಿ 'ಒಟ್ಟಕ್ಕೊಂಬನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Actress Raai Lakshmi clarifies about her engagement News. she is not engaged, its only rumors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X