For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ ಈ ಬಹುಭಾಷಾ ನಟಿ.!

  By Bharath Kumar
  |
  ಕುರುಕ್ಷೇತ್ರ ಸಿನಿಮಾ ಒಲ್ಲೆ ಅಂದ ನಟಿ ಯಾರು..? | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟೋತ್ತಿಗಾಲೇ ಈ ಸಿನಿಮಾ ತೆರೆಕಾಣಬೇಕಿತ್ತು. ಆದ್ರೆ, ಗ್ರಾಫಿಕ್ಸ್ ಕೆಲಸ ಹೆಚ್ಚಿದ್ದು, ಇನ್ನು ಸಮಯ ಹಿಡಿಯುತ್ತಿದೆ ಎನ್ನಲಾಗಿದೆ.

  ದುರ್ಯೋಧನನ ಪಾತ್ರದಲ್ಲಿ ದರ್ಶನ್ ಮಿಂಚಿದ್ದು, ನಟಿ ಮೇಘನಾ ರಾಜ್, ಹರಿಪ್ರಿಯಾ, ಸ್ನೇಹಾ ಅಂತಹ ನಟಿಯರು ಕಾಣಿಸಿಕೊಂಡಿದ್ದಾರೆ. ಆದ್ರೀಗ, ಬಹಿರಂಗವಾಗಿರುವ ಮಾಹಿತಿ ಏನಪ್ಪಾ ಅಂದ್ರೆ, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಬಹುಭಾಷಾ ನಟಿಯೊಬ್ಬರು ಅಭಿನಯಿಸಬೇಕಿತ್ತಂತೆ.

  ಕುರುಕ್ಷೇತ್ರದ 'ಬಿಗ್' ನ್ಯೂಸ್: ದರ್ಶನ್ ಗೆ ಕನ್ನಡದ ಸ್ಟಾರ್ ನಟಿ ನಾಯಕಿ.!ಕುರುಕ್ಷೇತ್ರದ 'ಬಿಗ್' ನ್ಯೂಸ್: ದರ್ಶನ್ ಗೆ ಕನ್ನಡದ ಸ್ಟಾರ್ ನಟಿ ನಾಯಕಿ.!

  ಆದ್ರೆ, ಆ ನಟಿ ಕುರುಕ್ಷೇತ್ರ ಚಿತ್ರವನ್ನ ಕೈಬಿಟ್ಟರಂತೆ. ಈ ವಿಷ್ಯವನ್ನ ಖುದ್ದು ಆ ನಟಿಯೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಕುರುಕ್ಷೇತ್ರ ಚಿತ್ರಕ್ಕೆ ಆಫರ್ ಮಾಡಿದ್ದ ಆ ಬಹುಭಾಷಾ ನಟಿ ಯಾರು.? ಯಾವ ಪಾತ್ರಕ್ಕೆ ಅವಕಾಶ ನೀಡಿದ್ರು, ಈ ಪಾತ್ರವನ್ನ ರಿಜೆಕ್ಟ್ ಮಾಡಿದ್ದೇಕೆ.? ಮುಂದೆ ಓದಿ.....

  ಲಕ್ಷ್ಮಿ ರೈಗೆ ಆಫರ್ ಮಾಡಲಾಗಿತ್ತು.!

  ಲಕ್ಷ್ಮಿ ರೈಗೆ ಆಫರ್ ಮಾಡಲಾಗಿತ್ತು.!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ ಎಂದು ಖ್ಯಾತಿ ಗಳಿಸಿಕೊಂಡಿರುವ 'ಕುರುಕ್ಷೇತ್ರ' ಚಿತ್ರದಲ್ಲಿ ನಟಿಸಲು ಬಹುಭಾಷಾ ನಟಿ ಲಕ್ಷ್ಮಿ ರೈ ಅವರಿಗೆ ಮೊದಲು ಆಫರ್ ನೀಡಲಾಗಿತ್ತು. ಆದ್ರೆ, ಲಕ್ಷ್ಮಿ ರೈ ಈ ಅವಕಾಶವನ್ನ ಕೈಬಿಟ್ಟಿದ್ದರಂತೆ.

  ದುರ್ಯೋಧನ ದರ್ಶನ್ ಮಡದಿ ಭಾನುಮತಿ ಲುಕ್ ಬಹಿರಂಗದುರ್ಯೋಧನ ದರ್ಶನ್ ಮಡದಿ ಭಾನುಮತಿ ಲುಕ್ ಬಹಿರಂಗ

  ಹಾಡಿಗಾಗಿ ಸಂಪರ್ಕಿಸಲಾಗಿತ್ತು

  ಹಾಡಿಗಾಗಿ ಸಂಪರ್ಕಿಸಲಾಗಿತ್ತು

  ಕುರುಕ್ಷೇತ್ರ ಚಿತ್ರದಲ್ಲಿ ವಿಶೇಷ ಹಾಡೊಂದಿದೆ. ಈ ಹಾಡಿನಲ್ಲಿ ಹೆಜ್ಜೆ ಹಾಕಲು ಲಕ್ಷ್ನಿ ರೈ ಕೇಳಲಾಗಿತ್ತು. ಆದ್ರೆ, ಬ್ಯುಸಿ ಶೆಡ್ಯೂಲ್ ನಿಂದ ಈ ಸಿನಿಮಾ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ನಂತರ ಈ ಪಾತ್ರದಲ್ಲಿ ನಟಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ.

  'ಭಾನುಮತಿ' ಮೇಘನಾ ರಾಜ್

  'ಭಾನುಮತಿ' ಮೇಘನಾ ರಾಜ್

  ಇನ್ನು ದುರ್ಯೋಧನನ ಪತ್ನಿ ಭಾನುಮತಿ ಪಾತ್ರಕ್ಕಾಗಿ ಮೊದಲ ರೆಜಿನಾ ಮತ್ತು ರಮ್ಯಾ ನಂಬಿಸೇನ್ ಅವರನ್ನ ಆಯ್ಕೆ ಮಾಡಲಾಗಿತ್ತು. ನಂತರ ಅವರನ್ನ ಬಿಟ್ಟು ಕನ್ನಡತಿ ಮೇಘನಾ ರಾಜ್ ಅವರಿಗೆ ಅವಕಾಶ ಒದಗಿಸಲಾಯಿತು. ಈ ಮೂಲಕ ಮೊದಲ ಸಲ ದರ್ಶನ್ ಜೊತೆಯಲ್ಲಿ ತೆರೆಹಂಚಿಕೊಳ್ಳುವ ಅವಕಾಶ ಮೇಘನಾಗೆ ಸಿಕ್ತು.

  ಮುನಿರತ್ನ 'ಕುರುಕ್ಷೇತ್ರ'ದಲ್ಲಿ ಏನು ನಡೆಯುತ್ತಿದೆ ಅನ್ನೋದೇ ದರ್ಶನ್ ಗೆ ಗೊತ್ತಿಲ್ಲ ಸ್ವಾಮಿ.!ಮುನಿರತ್ನ 'ಕುರುಕ್ಷೇತ್ರ'ದಲ್ಲಿ ಏನು ನಡೆಯುತ್ತಿದೆ ಅನ್ನೋದೇ ದರ್ಶನ್ ಗೆ ಗೊತ್ತಿಲ್ಲ ಸ್ವಾಮಿ.!

  ಬಿಡುಗಡೆ ಬಗ್ಗೆ ಮಾಹಿತಿ ಇಲ್ಲ

  ಬಿಡುಗಡೆ ಬಗ್ಗೆ ಮಾಹಿತಿ ಇಲ್ಲ

  ನಾಗಣ್ಣ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಮುನಿರತ್ನ ನಿರ್ದೇಶನ ಮಾಡಿದ್ದಾರೆ. ದುರ್ಯೂಧನ ಪಾತ್ರದಲ್ಲಿ ದರ್ಶನ್ ಮಿಂಚುತ್ತಿದ್ದರೇ, ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ

  English summary
  Kannada actress Raai lakshmi has rejects Kurukshetra movie offer from past days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X