»   » ಕರ್ನಾಟಕದ ಗಡಿಯಾಚೆ 'ರಾಜಕುಮಾರ'ನ ರಾಜ್ಯಭಾರ

ಕರ್ನಾಟಕದ ಗಡಿಯಾಚೆ 'ರಾಜಕುಮಾರ'ನ ರಾಜ್ಯಭಾರ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಬಿಡುಗಡೆಗೆ ಕೇವಲ ಒಂದೇ ದಿನ ಮಾತ್ರ ಬಾಕಿಯಿದೆ. ಮಾರ್ಚ್ 24 ರಂದು ಅಂದ್ರೆ ಶುಕ್ರವಾರ ಬೆಳ್ಳಂಬೆಳಿಗ್ಗೆನೇ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪುನೀತ್ ರಾಜ್ ಕುಮಾರ್ ಅಬ್ಬರಿಸಲಿದ್ದಾರೆ.

ಅಂದ್ಹಾಗೆ, 'ರಾಜಕುಮಾರ'ನ ಕ್ರೇಜ್, ಅಬ್ಬರ ಬರಿ ಕರ್ನಾಟಕದಲ್ಲಿ ಮಾತ್ರವಲ್ಲ, ಕರ್ನಾಟಕದ ಗಡಿ ಆಚೆಯೂ 'ರಾಜಕುಮಾರ' ಘರ್ಜಿಸುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಪುನೀತ್ ಅವರ ಸಿನಿಮಾ ತೆರೆಕಾಣುತ್ತಿದೆ. ಹಾಗಾದ್ರೆ, ಕರ್ನಾಟಕದಾಚೆ 'ರಾಜಕುಮಾರ'ನ ರಾಜ್ಯಭಾರ ಎಲ್ಲೆಲ್ಲಿದೆ ಎಂಬುದನ್ನ ನೋಡೋಣ ಬನ್ನಿ.....

ಮುಂಬೈ, ಪುಣೆನಲ್ಲಿ 'ರಾಜಕುಮಾರ'

ವಾಣಿಜ್ಯ ನಗರಿ ಮುಂಬೈನ 8 ಥಿಯೇಟರ್ ಗಳಲ್ಲಿ 'ರಾಜಕುಮಾರ' ಬಿಡುಗಡೆಯಾಗುತ್ತಿದೆ. ಮುಂಬೈನ ಪ್ರಮುಖ ನಗರಗಳ ವಿವಿದ ಚಿತ್ರಮಂದಿರದಲ್ಲಿ ಪುನೀತ್ ಸಿನಿಮಾ ತೆರೆಕಾಣುತ್ತಿದೆ. ಹಾಗೆ, ಪುಣೆಯ 3 ಸ್ಕ್ರೀನ್ ನಲ್ಲಿ 'ರಾಜಕುಮಾರ' ರಿಲೀಸ್ ಆಗುತ್ತಿದೆ.

ಕೊಲ್ಕತ್ತಾ, ಸೊಲ್ಲಪುರದಲ್ಲಿ ಪುನೀತ್ ಅಬ್ಬರ

ಕರ್ನಾಟಕದ ಗಡಿಭಾಗ ಸೊಲ್ಲಪುರ ಮತ್ತು ಕೊಲ್ಕತ್ತಾದಲ್ಲೂ 'ರಾಜಕುಮಾರ' ಚಿತ್ರ ಪ್ರದರ್ಶನವಾಗುತ್ತಿದೆ. ಸೊಲ್ಲಪುರದಲ್ಲಿ 3 ಶೋಗಳು ಮತ್ತು ಕೊಲ್ಕತ್ತಾದಲ್ಲಿ 1 ಶೋ ಸ್ಕ್ರೀನಿಂಗ್ ಆಗ್ತಿದೆ.

ಚೆನ್ನೈ, ಕೊಚ್ಚಿಯಲ್ಲಿ ಬಿಡುಗಡೆ

ಇನ್ನೂ ತಮಿಳುನಾಡಿನ ಚೆನ್ನೈ ನಗರದಲ್ಲಿ 4 ಶೋಗಳು 'ರಾಜಕುಮಾರ' ಸಿನಿಮಾ ಪ್ರದರ್ಶನವಾಗುತ್ತಿದ್ರೆ, ಕೇರಳದ ಕೊಚ್ಚಿಯಲ್ಲಿ 2 ಸ್ಕ್ರೀನ್ ನಲ್ಲಿ ಪುನೀತ್ ಸಿನಿಮಾ ಬಿಡುಗಡೆಯಾಗುತ್ತಿದೆ.

ಬೇರೆ ಎಲ್ಲೆಲ್ಲಿ ಬಿಡುಗಡೆಯಾಗುತ್ತಿದೆ!

ಉಳಿದಂತೆ ಗೋವಾದ 2 ಚಿತ್ರಮಂದಿರ, ಅಹಮದಾಬಾದ್, ರಾಜಸ್ಥಾನ್, ಬರ್ನಾರ್ ನಗರಗಳಲ್ಲಿ ತಲಾ ಒಂದೊಂದು ಚಿತ್ರಮಂದಿರಗಳಲ್ಲಿ ಕನ್ನಡದ 'ರಾಜಕುಮಾರ' ಸಿನಿಮಾ ರಿಲೀಸ್ ಆಗುತ್ತಿದೆ.

English summary
Kannada Actor Puneeth Rajkumar Starrer 'Raajakumara' Movie Releasnig Over All India on March 24th. The Movie Directed by Santhosh Anandram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada