»   » ಚಿತ್ರಜಗತ್ತು ಮೆಚ್ಚುವ ಕೆಲಸಕ್ಕೆ ಮುಂದಾದ 'ರಾಜಕುಮಾರ' ನಿರ್ಮಾಪಕ

ಚಿತ್ರಜಗತ್ತು ಮೆಚ್ಚುವ ಕೆಲಸಕ್ಕೆ ಮುಂದಾದ 'ರಾಜಕುಮಾರ' ನಿರ್ಮಾಪಕ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಯಶಸ್ವಿ ನೂರು ದಿನಗಳನ್ನ ಪೂರೈಸಿದ ಸಂಭ್ರಮವನ್ನ ಆಚರಿಸಲು ಸಕಲ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದೆ. ಈ ಸಂಭ್ರಮಾಚರಣೆಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಚಿತ್ರತಂಡ ಕಾರ್ಯಕ್ರಮವನ್ನ ಕಲರ್ ಫುಲ್ ಮಾಡಲು ಸಜ್ಜಾಗುತ್ತಿದೆ.

ಮತ್ತೊಂದೆಡೆ 'ರಾಜಕುಮಾರ' ಚಿತ್ರತಂಡದ ಸದಸ್ಯರಿಗೆ ಒಂದು ಸಂತೋಷದ ಸುದ್ದಿಯನ್ನ ನೀಡುವ ತಯಾರಿ ನಡೆಸಿದ್ದಾರೆ ಚಿತ್ರದ ನಿರ್ಮಾಪಕರು. ಹೌದು, 'ರಾಜಕುಮಾರ' ಚಿತ್ರ ಅತಿ ಹೆಚ್ಚು ಗಳಿಸುವ ಮೂಲಕ ಕನ್ನಡದ ಬಾಕ್ಸ್ ಆಫೀಸ್ ನಲ್ಲಿ ಆಲ್ ಟೈಮ್ ನಂಬರ್ ವನ್ ಚಿತ್ರವಾಗಿದೆ. ಈ ಖುಷಿಯನ್ನ ಕೂಡ ಚಿತ್ರತಂಡದ ಜೊತೆ ಹಂಚಿಕೊಳ್ಳಲು ಹೊಂಬಾಳೆ ಫಿಲಂಸ್ ಹೊಸ ಹೆಜ್ಜೆಯಿಟ್ಟಿದೆ. ಏನದು? ಮುಂದೆ ಓದಿ.....


'ರಾಜಕುಮಾರ' ತಂಡದ ಜೊತೆ ಲಾಭ ಹಂಚಿಕೆ

'ರಾಜಕುಮಾರ' ಚಿತ್ರದ ಲಾಭಾಂಶವನ್ನೂ ಚಿತ್ರತಂಡಕ್ಕೂ ಹಂಚಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಚಿತ್ರದಲ್ಲಿ ನಟಿಸಿದ ಕಲಾವಿದರು, ದುಡಿದ ತಂತ್ರಜ್ಞರು, ಕಾರ್ಮಿಕರು..ಹೀಗೆ ಪ್ರತಿಯೊಬ್ಬರಿಗೂ ಚಿತ್ರದ ಲಾಭಾಂಶದಲ್ಲಿ ಪಾಲು ನೀಡಲು ಹೊಂಬಾಳೆ ಫಿಲಂಸ್ ಮುಂದಾಗಿದೆ.


'ರಾಜಕುಮಾರ'ನ 100ನೇ ದಿನದ ಸಂಭ್ರಮಕ್ಕೆ ಭರ್ಜರಿ ತಯಾರಿ


ರಾಜಕುಮಾರ ಗಳಿಕೆ ಎಷ್ಟು?

'ರಾಜಕುಮಾರ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದು, ಸುಮಾರು 50 ಕೋಟಿಗೂ ಹೆಚ್ಚು ಹಣವನ್ನ ಕೆಲಕ್ಷನ್ ಮಾಡಿದೆ. ಗಳಿಕೆ ಬಗ್ಗೆ ನಿಖಿರವಾದ ಮಾಹಿತಿಯನ್ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದ್ರೆ, ಇದುವರೆಗೂ ಸುಮಾರು 75 ಕೋಟಿ ಗಳಿಸಿದೆ ಎನ್ನಲಾಗಿದೆ.


ಅಭಿಮಾನಿಗಳ ಜೊತೆ ಶತದಿನೋತ್ಸವ ಸಂಭ್ರಮಿಸಲಿರುವ 'ರಾಜಕುಮಾರ'


'ಕಿರಿಕ್ ಪಾರ್ಟಿ' ಕೂಡ ಲಾಭಂಶವನ್ನ ಹಂಚಿತ್ತು

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರ ಯಶಸ್ವಿ 150 ದಿನಗಳನ್ನ ಪೂರೈಸಿ, ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿತ್ತು. ಈ ಚಿತ್ರದಿಂದ ಬಂದ ಹಣದಲ್ಲಿ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರಿಗೆ ಒಂದಿಷ್ಟು ಅಂತ ನಿರ್ಮಾಪಕ ರಕ್ಷಿತ್ ಶೆಟ್ಟಿ ಹಂಚಿದ್ದರು. ಈಗ 'ರಾಜಕುಮಾರ' ಕೂಡ ಇದೇ ಮಾರ್ಗ ಅನುಸರಿಸಿದೆ.


ರಕ್ಷಿತ್ ಶೆಟ್ಟಿ ಮಾಡಿದ ಈ ಒಳ್ಳೆ ಕೆಲಸಕ್ಕೆ ಚಪ್ಪಾಳೆ ಹೊಡೆಯಲೇಬೇಕು!


ಜುಲೈ 7 ರಂದು ಶತದಿನ ಸಂಭ್ರಮ

ಜುಲೈ 7 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ 'ರಾಜಕುಮಾರ' ಚಿತ್ರದ ಶತದಿನೋತ್ಸವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಚಿತ್ರದ ಕಲಾವಿದರು, ತಂತ್ರಜ್ಞರು, ಕಾರ್ಮಿಕರನ್ನ ಗೌರವಿಸಲು ಚಿತ್ರತಂಡ ನಿರ್ಧರಿಸಿದೆ.


ಕನ್ನಡ ತಾರೆಯರ ಸಮಾಗಮ

'ರಾಜಕುಮಾರ' ಸೆಂಚುರಿ ಸಂಭ್ರಮಕ್ಕೆ ಕನ್ನಡ ಖ್ಯಾತ ನಟರಾದ ಸುದೀಪ್, ಯಶ್, ಗಣೇಶ್, ಜಗ್ಗೇಶ್, ಉಪೇಂದ್ರ ಸೇರಿದಂತೆ ಹಲವು ನಟ-ನಟಿಯರು ಭಾಗಿಯಾಗಲಿದ್ದಾರೆ.


ಅಪ್ಪು ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಸುದೀಪ್, ಯಶ್, ಉಪೇಂದ್ರ.!


English summary
Kannada Movie Production Hombale Films Shares 'Raajakumara' Film Profit with his Raajakumara Movie Team
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada