For Quick Alerts
  ALLOW NOTIFICATIONS  
  For Daily Alerts

  'ರಾಜಕುಮಾರ' 100 ಡೇಸ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿ

  By Naveen
  |

  'ರಾಜಕುಮಾರ' ಸಿನಿಮಾದ ನೂರರ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಎರಡೇ ದಿನ ಬಾಕಿ ಇದೆ. ಸದ್ಯ ಕಾರ್ಯಕ್ರಮ ಆಹ್ವಾನ ಪತ್ರಿಕೆಯನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಾಕಿ ಅಭಿಮಾನಿಗಳಿಗೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

  ಜುಲೈ 1 ರಂದು 'ರಾಜಕುಮಾರ' ಚಿತ್ರ ಹಂಡ್ರೆಡ್ ಡೇಸ್ ಪೂರೈಸಿತ್ತು. ಈ ಸಂಭ್ರಮವನ್ನು ಜುಲೈ 7 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಚರಿಸಲು ಚಿತ್ರತಂಡ ನಿರ್ಧರಿಸಿತ್ತು. ಈಗಾಗಲೇ ಅದಕ್ಕೆ ಎಲ್ಲಾ ತಯಾರಿಗಳು ನಡೆಯುತ್ತಿದ್ದು, 'ರಾಜಕುಮಾರ' ಸಂಭ್ರಮಕ್ಕೆ ಅದ್ದೂರಿ ವೇದಿಕೆ ಸಜ್ಜಾಗಿದೆ.

  'ರಾಜಕುಮಾರ' ಚಿತ್ರದ ಸೆಂಚುರಿ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿಲು ಚಿತ್ರತಂಡ ನಿರ್ಧರಿಸಿದ್ದು, ಈ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಪಾಲ್ಗೊಳ್ಳಲಿದ್ದಾರಂತೆ. ಜೊತೆಗೆ ಚಿತ್ರದ ಲಾಭಾಂಶವನ್ನೂ ಸಿನಿಮಾಗಾಗಿ ದುಡಿದ ಚಿತ್ರತಂಡಕ್ಕೂ ಹಂಚಲು ನಿರ್ಮಾಪಕರು ನಿರ್ಧರಿಸಿದ್ದಾರೆ.

  English summary
  Check out Puneeth Rajkumar Starrer 'Raajakumara' movie 100 days celebration invitation card.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X