ಭಾರತದ ಟಾಪ್ ರೇಟಿಂಗ್ ಸಿನಿಮಾಗಳಲ್ಲಿ 'ರಾಜಕುಮಾರ'
Recommended Video

ಈ ವರ್ಷ ಬಿಡುಗಡೆಯಾದ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆಲ್ಲೋದರಲ್ಲಿ ಯಶಸ್ವಿ ಆದವು. ಒಂದಷ್ಟು ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಸಕ್ಸಸ್ ಆಗದೇ ಇದ್ದರೂ, ಜನರಿಗೆ ಮೆಚ್ಚುಗೆ ಆಯಿತು.
ಹೊಸ ಕಲಾವಿದರು ಹೊಸ ತಂತ್ರಜ್ಙರು ತಮ್ಮದೇ ಸ್ಟೈಲ್ ನಲ್ಲಿ ಸಿನಿಮಾಗಳನ್ನ ನಿರ್ದೇಶನ ಮಾಡಿ ವಿಭಿನ್ನವಾಗಿರುವ ಚಿತ್ರಗಳನ್ನ ಕನ್ನಡ ಚಿತ್ರರಂಗದಲ್ಲಿಯೂ ಮಾಡುತ್ತಾರೆ ಅನ್ನೋದನ್ನ ನಿರೂಪಿಸಿದರು. ಮತ್ತಷ್ಟು ಹೀರೋಗಳು ಸಿನಿಮಾದಲ್ಲಿ ಅಭಿನಯಿಸದೆ ಸುಮ್ಮನಾದ್ರೂ.
ಪ್ರೇಕ್ಷಕರಿಗೆ ಸಿನಿಮಾಗಳ ಮೇಲೆ ಒಂದೇ ಅಭಿಪ್ರಾಯ ಇರೋದಿಲ್ಲ. ಕೆಲವರಿಗೆ ಆಕ್ಷನ್ ಚಿತ್ರಗಳು ಇಷ್ಟವಾದರೆ, ಮತ್ತಷ್ಟು ಜನರಿಗೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾಗಳು ಮೆಚ್ಚುಗೆ ಆಗುತ್ತೆ. ಮತ್ತಷ್ಟು ಜನರಿಗೆ ನಾರ್ಮಲ್ ಚಿತ್ರಗಳಿಗಿಂತಲೂ ಏನಾದರೂ ವಿಭಿನ್ನ ಪ್ರಯತ್ನ ಮಾಡಿದ್ದರೆ ಚೆನ್ನ ಅನ್ನೋ ಅಭಿಪ್ರಾಯಗಳು ಇರುತ್ತವೆ.
ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾದ ಒಂದು ಚಿತ್ರ ಮಾತ್ರ ಇಡೀ ಕನ್ನಡ ಸಿನಿಮಾ ಪ್ರೇಕ್ಷಕರ ಸಮೂಹದ ಮೆಚ್ಚುಗೆ ಗಳಿಸಿತು. ಥಿಯೇಟರ್ ಗೆ ಬಾರದ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆ ತಂತು. ಯಾವುದು ಆದ ಚಿತ್ರ ?. ಇಡೀ ಭಾರತದಲ್ಲಿ ಕನ್ನಡದ ಖ್ಯಾತಿಗಳಿಸಿದ ಸಿನಿಮಾ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನಮೆಚ್ಚಿದ ಚಿತ್ರ ರಾಜಕುಮಾರ
ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿದೆ. ಆಕ್ಷನ್, ಕಮರ್ಷಿಯಲ್, ಮಾಸ್, ಕ್ಲಾಸ್ ಎಲ್ಲಾ ರೀತಿಯ ಆಡಿಯನ್ಸ್ ಗಳಿಂದ ಮೆಚ್ಚುಗೆ ಪಡೆದಿದೆ.

ಕನ್ನಡದ ರಾಜಕುಮಾರ ಟಾಪ್ ರೇಟಿಂಗ್
ಬುಕ್ ಮೈ ಶೋ ಮೂಲಕ ಸಿನಿಮಾ ನೋಡಿದ ಜನರು ತಮ್ಮ ಅಭಿಪ್ರಾಯ ಮತ್ತು ರೇಟಿಂಗ್ ಅನ್ನು ಕಮೆಂಟ್ ಮೂಲಕ ತಿಳಿಸಿರುತ್ತಾರೆ. ಅಷ್ಟೇ ಅಲ್ಲದೆ ನಿರೀಕ್ಷಿತ ಸಿನಿಮಾಗಳಿಗೂ ಓಟು ಮಾಡಿರುತ್ತಾರೆ. ಜನರ ಆಯ್ಕೆಯ ಪ್ರಕಾರ ಭಾರತದಲ್ಲಿ ಟಾಪ್ ರೇಟಿಂಗ್ ನಲ್ಲಿರೋ ಕನ್ನಡದ ಸಿನಿಮಾ ರಾಜಕುಮಾರ.

ಕನ್ನಡದ ಏಕೈಕ ಸಿನಿಮಾ
ಬುಕ್ ಮೈ ಶೋ ನಲ್ಲಿ ಜನರು ನೀಡಿರುವ ಅಭಿಪ್ರಾಯದ ಪ್ರಕಾರ ಮೊದಲ ಸ್ಥಾನದಲ್ಲಿ ಬಾಹುಬಲಿ , ಎರಡನೇ ಸ್ಥಾನದಲ್ಲಿ ತಮಿಳಿನ ವಿಕ್ರಂ ವೇದ ಮೂರನೇ ಸ್ಥಾನದಲ್ಲಿ ಥಾರ್: ರಾಗ್ನರಾಕ್ ಇದ್ದರೆ ನಾಲ್ಕನೇ ಸ್ಥಾನವನ್ನ ರಾಜಕುಮಾರ ಚಿತ್ರ ಪಡೆದುಕೊಂಡಿದೆ.

ರಾಜಕುಮಾರನದ್ದೇ ದರ್ಬಾರು
ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ. ಆದ್ರೆ, ಅಧಿಕೃತವಾಗಿ ನಿಗದಿತ ಮೊತ್ತವನ್ನ ಚಿತ್ರತಂಡ ಪ್ರಕಟ ಮಾಡಿಲ್ಲ. ಮೂಲಗಳ ಪ್ರಕಾರ ಸುಮಾರು 70 ಕೋಟಿ ದಾಟಿದೆ ಎನ್ನಲಾಗಿದೆ. ಇದು ಕನ್ನಡ ಚಿತ್ರರಂಗದ ಆಲ್ ಟೈಮ್ ರೆಕಾರ್ಡ್ ಕೂಡ ಆಗಿದೆಯಂತೆ.


Click it and Unblock the Notifications











