ಎಕ್ಸ್ ಕ್ಲೂಸಿವ್: 'ರಾಜಕುಮಾರ' ಚಿತ್ರದ 'ರಾಜರ ರಾಜ' ಹಾಡು ರಿಲೀಸ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ರಾಜಕುಮಾರ' ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಚಿತ್ರತಂಡ ಮೊದಲೇ ಹೇಳಿದಂತೆ ಫೆಬ್ರವರಿ 17 ರಂದು 'ರಾಜಕುಮಾರ' ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದೆ.['ರಾಜಕುಮಾರ' ಚಿತ್ರದ ಚಿತ್ರೀಕರಣ ಮುಕ್ತಾಯ!]
ಈ ಹಾಡಿಗಾಗಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಕೊನೆಗೂ ಸಾಂಗ್ ರಿಲೀಸ್ ಆಗಿದ್ದು, ಅಪ್ಪು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಈ ಹಾಡು ಬಿಡುಗಡೆಯಾದ 2 ಘಂಟೆಯಲ್ಲಿ 65 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.[ಪುನೀತ್ 'ರಾಜಕುಮಾರ' ಹೈ ವೋಲ್ಟೇಜ್ ಟೀಸರ್ ಔಟ್]

'ಯಾರಿವನು ಕನ್ನಡದವನು.......' ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿಗೆ ಚಿತ್ರದ ನಿರ್ದೇಶಕರೇ ಆಗಿರುವ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದು, ತೆಲುಗು ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀ ಪ್ರಸಾದ್ ಹಾಡಿದ್ದಾರೆ. ಇನ್ನೂ ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]
ಪುನೀತ್ ರಾಜ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ತಮಿಳು ನಟ ಶರತ್ ಕುಮಾರ್,, ಪ್ರಕಾಶ್ ರೈ, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು ಸೇರಿದಂತೆ ಹಲವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











