»   » ಗಲ್ಫ್ ನಾಡಿನಲ್ಲಿ 'ರಾಜಕುಮಾರ'ನ ರಾಜ್ಯಭಾರ

ಗಲ್ಫ್ ನಾಡಿನಲ್ಲಿ 'ರಾಜಕುಮಾರ'ನ ರಾಜ್ಯಭಾರ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ 25 ದಿನಗಳನ್ನ ಪೂರೈಸಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಹೊರ ದೇಶಗಳಲ್ಲಿ ಮಿಂಚಲು 'ರಾಜಕುಮಾರ' ಸಿದ್ದವಾಗಿದ್ದು, ಮೊದಲ ಹೆಜ್ಜೆಯಾಗಿ ಗಲ್ಫ್ ದೇಶಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.['ರಾಜಕುಮಾರ' ನೋಡಿ ಮೆಚ್ಚಿದ ಅಭಿಮಾನಿ ದೇವ್ರುಗಳಿಗೆ 'ದೊಡ್ಮನೆ ಹುಡ್ಗ'ನ ಧನ್ಯವಾದ]

ದುಬೈನಲ್ಲಿ 5 ಸ್ಕ್ರೀನ್, ಅಬುಧಾಬಿಯಲ್ಲಿ 4 ಸ್ಕ್ರೀನ್, ಕುವೈತ್ ಮತ್ತು ಒಮನ್ ದೇಶಗಳಲ್ಲಿ ತಲಾ 1 ಸ್ಕ್ರೀನ್ ಹಾಗೂ ಶಾರ್ಜಾದಲ್ಲಿ 1 ಸ್ಕ್ರೀನ್ ಸೇರಿದಂತೆ ಏಪ್ರಿಲ್ 20 ರಂದು 'ರಾಜಕುಮಾರ' ತೆರೆಕಾಣುತ್ತಿದೆ. ಈ ಮೂಲಕ ಅಲ್ಲಿನ ಕನ್ನಡಿಗರು ಈ ವಾರದಲ್ಲಿ 'ರಾಜಕುಮಾರ' ಚಿತ್ರವನ್ನ ನೋಡಿ ಕಣ್ತುಂಬಿಕೊಳ್ಳಬಹುದು.['ರಾಜಕುಮಾರ' ನೋಡಿ ಮಗುವಿನಂತೆ ಕಣ್ಣೀರಿಟ್ಟ ಶಿವಣ್ಣ]

Raajakumara Releasing in Gulf Country on April 20th

ಮಾರ್ಚ್ 24 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಿದ್ದ 'ರಾಜಕುಮಾರ'ನಿಗೆ ಪ್ರೇಕ್ಷಕನಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಭಾವನಾತ್ಮಕ ಸಂಬಂಧಗಳ ಮೌಲ್ಯ ಹೊಂದಿರುವ ಚಿತ್ರಕಥೆಗೆ ಕನ್ನಡ ಕಲಾಭಿಮಾನಿಗಳು ಜೈಕಾರ ಹಾಕಿದ್ದರು. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿರುವ 'ರಾಜಕುಮಾರ' ಸ್ಯಾಂಡಲ್ ವುಡ್ ನ ಆಲ್ ಟೈಮ್ ರೆಕಾರ್ಡ್ ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

Raajakumara Releasing in Gulf Country on April 20th

ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಾಣವಾಗಿತ್ತು. ಪ್ರಿಯಾ ಆನಂದ್, ಶರತ್ ಕುಮಾರ್, ಪ್ರಕಾಶ್ ರೈ, ಚಿಕ್ಕಣ್ಣ, ರಂಗಾಯಣ ರಘು, ಸಾಧುಕೋಕಿಲಾ, ದತ್ತಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.['ರಾಜಕುಮಾರ' ನೋಡುವುದಕ್ಕೂ ಮುಂಚೆ ಈ ಸಂಗತಿಗಳನ್ನ ತಿಳಿದುಕೊಳ್ಳಿ!]

English summary
Kannada Actor Puneeth Rajkumar Starrer RAAJAKUMARA Movie Releasing in Gulf Country (Oman and UAE & Kuwait) On April 20th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada