For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಜೊತೆ ಶತದಿನೋತ್ಸವ ಸಂಭ್ರಮಿಸಲಿರುವ 'ರಾಜಕುಮಾರ'

  By Bharath Kumar
  |

  ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಶತದಿನದ ಸನಿಹದಲ್ಲಿದ್ದು, ಜೂನ್ 30 ರಂದು ನೂರುದಿನಗಳನ್ನ ಪೂರೈಸಲಿದೆ. ಈ ಸಂಭ್ರಮವನ್ನ ದೊಡ್ಡ ಮಟ್ಟದಲ್ಲಿ ಆಚರಿಸಬೇಕು ಎಂದು 'ರಾಜಕುಮಾರ' ತಂಡ ಯೋಚನೆ ಮಾಡಿದೆ.

  ಆದ್ರೆ, ಅದಕ್ಕೂ ಮುಂಚೆ 'ರಾಜಕುಮಾರ' ಚಿತ್ರತಂಡ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಲಿದೆ. ಹೌದು, ಜುಲೈ 1 ರಂದು 'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಚಿತ್ರತಂಡ, ನರ್ತಕಿ ಚಿತ್ರಮಂದಿರದಲ್ಲಿ ಮಧ್ಯಾಹ್ನ 1 ಗಂಟೆಗೆ ಸಿನಿಮಾ ನೋಡಲಿದ್ದಾರೆ. ಈ ಮೂಲಕ 'ರಾಜಕುಮಾರ' ಚಿತ್ರತಂಡದ ಜೊತೆ ಸಿನಿಮಾ ನೋಡುವ ಅವಕಾಶ ನಿಮಗೆ ಸಿಗಲಿದೆ.

  75 ದಿನಗಳನ್ನು ಪೂರೈಸಿದ 'ರಾಜಕುಮಾರ' ಕನ್ನಡದಲ್ಲಿ ಹಿಸ್ಟರಿ ಸೃಷ್ಟಿಸಿದ!

  ಈ ವಿಷ್ಯ ಖುದ್ದು ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಜುಲೈ 1 ರಂದು ನಟ ಪುನೀತ್ ರಾಜ್ ಕುಮಾರ್ ಭಾಗವಹಿಸುವುದರ ಬಗ್ಗೆ ನಿರ್ದೇಶಕರು ಉಲ್ಲೇಖಿಸಿಲ್ಲ. ವಿಶೇಷ ಅಂದ್ರೆ, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ ಎರಡು ಚಿತ್ರಗಳು ಸೆಂಚುರಿ ಕ್ಲಬ್ ಸೇರಿದ ದಾಖಲೆಯಾಗಲಿದೆ. ಮೊದಲು ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' 100 ದಿನ ಪೂರೈಸಿತ್ತು. ಈಗ ಪುನೀತ್ ಅಭಿನಯದ 'ರಾಜಕುಮಾರ'.

  'ರಾಜಕುಮಾರ'ನ 100ನೇ ದಿನದ ಸಂಭ್ರಮಕ್ಕೆ ಭರ್ಜರಿ ತಯಾರಿ

  ಅಂದ್ಹಾಗೆ, 'ರಾಜಕುಮಾರ' ಚಿತ್ರದ ನೂರು ದಿನಗಳ ಕಾರ್ಯಕ್ರಮವನ್ನ ಬೆಂಗಳೂರಿನಲ್ಲೇ ಅದ್ದೂರಿಯಾಗಿ ನಡೆಸಲು ಚಿಂತಿಸಲಾಗಿದೆ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ಪ್ರಿಯಾ ಆನಂದ್ ನಾಯಕಿ ಆಗಿ ಕಾಣಿಸಿಕೊಂಡಿದ್ದರು. ಶರತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ದತ್ತಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಅಭಿನಯಿಸಿದ್ದರು.

  English summary
  Kannada Movie Raajakumara Team Will be Visit Narthaki Theater on July 1st For 100 Days celebration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X