»   » 'ರಾಜಕುಮಾರ'ನನ್ನ ಕದ್ದುಮುಚ್ಚಿ ವಿಡಿಯೋ ಮಾಡ್ತಿದ್ದಾರೆ! ಕೇಳೋರು ಇಲ್ವಾ?

'ರಾಜಕುಮಾರ'ನನ್ನ ಕದ್ದುಮುಚ್ಚಿ ವಿಡಿಯೋ ಮಾಡ್ತಿದ್ದಾರೆ! ಕೇಳೋರು ಇಲ್ವಾ?

Posted By:
Subscribe to Filmibeat Kannada

''ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರಲ್ಲ'' ಎಂಬ ಕೆಟ್ಟ ಅಪವಾದವನ್ನ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಮೇಲೆ ಕೆಲವು ಬುದ್ಧಿ ಜೀವಿಗಳು ವರ್ಷಗಳಿಂದ ಹೊರಿಸುತ್ತಾ ಬಂದಿದ್ದಾರೆ. ಆದ್ರೆ, ಒಂದೊಳ್ಳೆ ಸಿನಿಮಾ ಬಂದಾಗ ಮಾತ್ರ, ಅದನ್ನ ಪ್ರೋತ್ಸಾಹಿಸುವುದಕ್ಕಿಂತ ಆ ಚಿತ್ರವನ್ನ ತುಳಿಯುವುದೇ ಹೆಚ್ಚು.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

ಹೊಸಬರು ಸಿನಿಮಾಗಳನ್ನ ಮಾಡುವುದೇ ಕಷ್ಟ. ಇನ್ನು ಸಿನಿಮಾ ಮಾಡಿದ್ಮೇಲೆ ಥಿಯೇಟರ್ ನಲ್ಲಿ ಉಳಿಸಿಕೊಳ್ಳುವುದು ಅದಕ್ಕಿಂತ ಕಷ್ಟ. ಆದ್ರೆ, ಇಂದು ಹೊಸಬರ ಸಿನಿಮಾಗೆ ಅಲ್ಲ, ದೊಡ್ಡ ಸ್ಟಾರ್ ನಟರ ಸಿನಿಮಾಗೆ ಅನ್ಯಾಯವಾಗ್ತಿದೆ. ಅದನ್ನ ಮಾತ್ರ ಯಾರು ಪ್ರಶ್ನಿಸುವುದಿಲ್ಲ. ಇದಕ್ಕೆ ಲೇಟೆಸ್ಟ್ ಉದಾಹರಣೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ'.

'ರಾಜಕುಮಾರ' ಚಿತ್ರಕ್ಕೆ ಪೈರಸಿ ಕಾಟ!

'ರಾಜಕುಮಾರ' ಚಿತ್ರ ದೇಶಾದ್ಯಂತ ತೆರೆಕಂಡು ಅದ್ಭುತ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅಮೋಘ ಪ್ರತಿಕ್ರಿಯೆ ಸಿಕ್ಕಿದೆ. ಆದ್ರೆ, ಕೆಲವು ಜನರು 'ರಾಜಕುಮಾರ' ಚಿತ್ರಕ್ಕೆ ಶತ್ರುಗಳಾಗಿ ಕಾಡುತ್ತಿದ್ದಾರೆ ಅಂದ್ರೆ ನಂಬಲೇಬೇಕು. ಹೌದು, 'ರಾಜಕುಮಾರ' ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ.['ರಾಜಕುಮಾರ' ನೋಡಿ 100% ಗುಣಗಾನ ಮಾಡಿದ ಪ್ರೇಕ್ಷಕರು]

ಕದ್ದುಮುಚ್ಚಿ ವಿಡಿಯೋ ಮಾಡ್ತಿದ್ದಾರೆ

'ರಾಜಕುಮಾರ' ಚಿತ್ರದ ವಿಡಿಯೋ ಸಾಂಗ್ಸ್ ಗಳನ್ನ ಯ್ಯೂಬ್ಯೂಬ್ ನಲ್ಲಿ ಅಧಿಕೃತವಾಗಿ ಇನ್ನು ಬಿಡುಗಡೆ ಮಾಡಿಲ್ಲ. ಆದ್ರೆ, ಚಿತ್ರಮಂದಿರದಲ್ಲಿ ಪ್ರದರ್ಶನವಾದ ಹಾಡಗಳನ್ನ ಕೆಲವರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು, ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೌಡ್ ಮಾಡುತ್ತಿದ್ದಾರೆ.['ರಾಜಕುಮಾರ'ನಿಗೆ ರಾಜ್ಯಾದ್ಯಂತ ಭರ್ಜರಿ ಓಪನಿಂಗ್]

ಹೀಗೆ ಮಾಡಿದ್ರೆ ಹೇಗೆ ಸ್ವಾಮಿ?

ಕಷ್ಟ ಪಟ್ಟು ಕೋಟಿ ಕೋಟಿ ಕೊಟ್ಟು ಸುರಿದು ಸಿನಿಮಾ ಮಾಡ್ತಾರೆ. ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಕೆಂಡಾಮಂಡಲವಾಗುತ್ತಾರೆ. ಅದೇ ತರ ಒಳ್ಳೆ ಸಿನಿಮಾ ಬಂದಾಗ ಪ್ರೋತ್ಸಾಹ ಕೊಡಬೇಕು. ಆದನ್ನ ಬಿಟ್ಟು ಪೈರಸಿ ಮಾಡಿ, ಅಪ್ ಲೌಡ್ ಮಾಡೋದ್ರಿಂದ ಕನ್ನಡ ಸಿನಿಮಾಗಳಿಗೆ ತೊಂದರೆಯಾಗುವುದು ಎಂಬುದು ಗೊತ್ತಿರಲಿ.['ರಾಜಕುಮಾರ'ನಲ್ಲಿ ಕಸ್ತೂರಿ ಸುವಾಸನೆ ಸವಿದು ಖುಷಿಯಾದ ವಿಮರ್ಶಕರು]

ಆಂಧ್ರದಲ್ಲಿ ಬಿಡುಗಡೆಯಾಗಿಲ್ಲ 'ರಾಜಕುಮಾರ'

ತೆಲುಗು ನಟ ಪವನ್ ಕಲ್ಯಾಣ್ ಅಭಿನಯದ 'ಕಾಟಮರಾಯುಡು' ಚಿತ್ರ ಕರ್ನಾಟಕದಲ್ಲಿ ಸುಮಾರು 100 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಆದ್ರೆ, ಮುಂಬೈ, ಚೆನ್ನೈ, ಕೊಚ್ಚಿನ್, ಕೊಲ್ಕತ್ತಾ ಎಲ್ಲ ಕಡೆ ರಿಲೀಸ್ ಆಗಿರುವ 'ರಾಜಕುಮಾರ' ಆಂದ್ರಪ್ರದೇಶದಲ್ಲಿ ಒಂದೇ ಒಂದು ಸ್ಕ್ರೀನ್ ನಲ್ಲೂ ರಿಲೀಸ್ ಆಗಿಲ್ಲ. ಇದರ ಬಗ್ಗೆಯೂ ಯಾರು ಮಾತನಾಡುವುದಿಲ್ಲ.['ರಾಜಕುಮಾರ' ನೋಡಿ ಮೆಚ್ಚಿದ ಅಭಿಮಾನಿ ದೇವ್ರುಗಳಿಗೆ 'ದೊಡ್ಮನೆ ಹುಡ್ಗ'ನ ಧನ್ಯವಾದ]

ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು?

ಕೇವಲ ಹಾಡಿನ ತುಣಕುಗಳು ಮಾತ್ರವಲ್ಲ, ಹೀಗೆ ಅದೇಷ್ಟೋ ಕನ್ನಡ ಸಿನಿಮಾಗಳನ್ನ ಕೂಡ ರೀತಿ ಪೈರಸಿ ಮಾಡಿರುವ ಉದಾಹರಣೆಗಳು ಇತ್ತೀಚೆಗೆ ಕಂಡುಬಂದಿದೆ. ಇನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದ್ದರೂ, ಕದ್ದುಮುಚ್ಚಿ ವಿಡಿಯೋ ಮಾಡುವುದು ತಪ್ಪು. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಚಿತ್ರರಂಗ ಮುಂದಾಗಬೇಕಿದೆ.

English summary
Puneeth Rajkumar Starrer Raajakumara Movie Video Songs Piracy in Youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada