ಸದ್ದಿಲ್ಲದೇ ಎಂಗೇಜ್ ಆದ ರಕ್ಷಿತಾ ಸಹೋದರ ರಾಣಾ, ಸರಳವಾಗಿ ನೆರವೇರಿತು ನಿಶ್ಚಿತಾರ್ಥ ಸಮಾರಂಭ...!

ರಾಣಾ.. ಗೊತ್ತಲ್ಲವಾ ? ರಕ್ಷಿತಾ ಪ್ರೇಮ್ ಅವರ ಸಹೋದರ.ಏಕ್ ಲವ್ ಯಾ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ರಾಣಾ ಮೊದಲ ಚಿತ್ರದಲ್ಲಿಯೇ ತಮ್ಮ ಅಭಿನಯ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಆದರೆ ರಾಣಾಗೆ ಸಿಗಬೇಕಿದ್ದ ಗೆಲುವು ಸಿಗಲಿಲ್ಲ. ಹಾಗಂಥ ರಾಣಾ ಕಂಗೆಟ್ಟಿಲ್ಲ. ಚಿತ್ರರಂಗದಲ್ಲಿ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಎರಡನೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದರ ನಡುವೆ ಸದ್ದಿಲ್ಲದೇ ರಾಣಾ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

ಹೌದು, ರಾಣಾ ಅವರ ಎಂಗೇಜ್ಮೆಂಟ್ ಕಾರ್ಯಕ್ರಮ ಸರಳವಾಗಿ ನೆರವೇರಿದೆ. ಇನ್ನೂ.. ರಾಣಾ ಅವರ ಕೈ ಹಿಡಿದ ಹುಡುಗಿ ಯಾರು ಎನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ ರಾಣಾ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಅನೇಕರು ಶುಭಾಶಯವನ್ನು ಕೋರುತ್ತಿದ್ದಾರೆ. ಲವ್ ಮ್ಯಾರೇಜಾ.. ಅರೆಂಜ್ ಮ್ಯಾರೇಜಾ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

Raana the brother of Kannada actress Rakshitha Prem and debutant in Ek Love Ya is now engaged

ಇನ್ನೂ..ನಿಶ್ಚಿತಾರ್ಥ ಸಮಾರಂಭ ನಡೆದಿದ್ದು ಎಲ್ಲಿ ಎನ್ನುವ ಪ್ರಶ್ನೆಗೆ ಕೂಡ ಸದ್ಯ ಉತ್ತರ ಇಲ್ಲವಾದರೂ ಅನೇಕರು ರಕ್ಷಿತಾ ಅವರ ಮನೆಯಲ್ಲಿಯೇ ಎಂಗೇಜ್‌ಮೆಂಟ್ ಕಾರ್ಯಕ್ರಮ ನಡೆದಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಪ್ರೇಮ್ ತಮ್ಮ ಕೆ.ಡಿ ಚಿತ್ರದ ಚಿತ್ರೀಕರಣಕ್ಕೆ ಶಿವಮೊಗ್ಗದ ಆಸು ಪಾಸು ಬಿಡಾರ ಹೂಡಿದ್ದಾರೆ. ಈ ಹಿನ್ನೆಲೆ ಪ್ರೇಮ್ ಈ ನಿಶ್ಚಿತಾರ್ಥ ಸಮಾರಂಭಕ್ಕೆ ಗೈರಾಗಿರುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ವೈರಲ್ ಆದ ಫೋಟೊದಲ್ಲಿ ಪ್ರೇಮ್ ಅನುಪಸ್ಥಿತಿ ಎದ್ದು ಕಾಣುತ್ತಿದೆ.

ಅಂದ್ಹಾಗೇ ಏಕ್ ಲವ್ ಯಾ ಚಿತ್ರದ ನಂತರ ರಾಣಾ ಪ್ರೇಮ್ ಜೊತೆ ಸಹಾಯಕ ನಿರ್ದೇಶಕನಾಗಿ, ಬರಹಗಾರನಾಗಿ ದುಡಿದ ಅನುಭವ ಇರುವ ವಿಜಯ್ ಈಶ್ವರ್ ಜೊತೆ ಕೈ ಜೋಡಿಸಿದ್ದರು. ವಿಜಯ್ ಈಶ್ವರ್ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ನಾಯಕನಾಗಿದ್ದರು.

ಇನ್ನೂ ಕಳೆದ ಎರಡು ವರ್ಷಗಳಿಂದ ಸದ್ದು ಮಾಡುತ್ತಾನೇ ಬರುತ್ತಿರುವ ಈ ಚಿತ್ರದ ಥೀಮ್ ಫೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಎಲ್ಲರ ಗಮನವನ್ನು ಕೂಡ ಸೆಳೆದಿತ್ತು. ಚಿತ್ರದಲ್ಲಿ ರಾಣಾ ಲುಕ್ ಕಂಪ್ಲೀಟ್ ಡಿಫ್ರೆಂಟ್ ಆಗಿರಲಿದ್ದು, ಬಿಗ್ ಬಜೆಟ್ ನಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟರೊಬ್ಬರು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಸ್ಯಾಂಡಲ್ ವುಡ್ ಸ್ಟಾರ್ ನಟರೊಬ್ಬರ ಗೆಸ್ಟ್ ಅಪಿಯರೆನ್ಸ್ ಕೂಡ ಸಿನಿಮಾದಲ್ಲಿರಲಿದೆ ಎಂದೆಲ್ಲ ಗಾಂಧಿನಗರ ಮಾತನಾಡಿಕೊಂಡಿತ್ತು. ಶಾನ್ವಿ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ ಎಂದು ಕೂಡ ಸುದ್ದಿಯಾಗಿತ್ತು.

ಹೀಗೆ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆಯನ್ನು ಇಡುತ್ತಿರುವ ರಾಣಾ ಈಗ ಸದ್ದಿಲ್ಲದೇ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ತಮ್ಮ ಈ ಹೊಸ ಬದುಕು, ಹೊಸ ಪ್ರಯಾಣದ ಕುರಿತು ರಾಣಾ ಶೀಘ್ರದಲ್ಲಿಯೇ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಮುಂದಿನ ವರ್ಷದ ಆರಂಭದಲ್ಲಿ ರಾಣಾ ಮದುವೆ ಅದ್ಧೂರಿಯಾಗಿ ನಡೆಯುವ ಸಾಧ್ಯತೆ ಕೂಡ ಇದೆ.

More from Filmibeat

Read more about: engagement sandalwood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X