For Quick Alerts
  ALLOW NOTIFICATIONS  
  For Daily Alerts

  ಬುಮ್ರಾ ಜೊತೆ ಲವ್ವು-ಮದುವೆ ಬಗ್ಗೆ ಮೌನ ಮುರಿದ ನಟಿ ರಾಶಿ ಖನ್ನಾ

  By Bharath Kumar
  |

  ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಜೊತೆ ಸೌತ್ ಸುಂದರಿ ರಾಶಿ ಖನ್ನಾ ಲವ್ವಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದ್ರೆ, ಈ ಬಗ್ಗೆ ಇಬ್ಬರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

  ಹೀಗಾಗಿ, ಬಹುಶಃ ಇವರಿಬ್ಬರ ಮಧ್ಯೆ ಸಂಥಿಂಗ್ ಇರಬಹುದು ಎಂಬ ಲೆಕ್ಕಾಚಾರಕ್ಕೆ ಅಭಿಮಾನಿಗಳು ಬಂದು ಬಿಟ್ಟಿದ್ದರು. ಇದೀಗ, ನಟಿ ರಾಶಿ ಬುಮ್ರಾ ಬಗ್ಗೆ ಮಾತನಾಡಿದ್ದಾರೆ. ಜೊತೆ ಬುಮ್ರಾ ಜೊತೆ ಲವ್ವು ಮತ್ತು ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ.

  ಇತ್ತೀಚಿಗಷ್ಟೆ ಟಿವಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಾಶಿ ಖನ್ನಾ, ತನ್ನ ಮದುವೆ ಬಗ್ಗೆ ಮತ್ತು ಲವ್ ಬಗ್ಗೆ ಹಬ್ಬಿರುವ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಅಭಿಮಾನಿಗಳನ್ನ ಕಾಡುತ್ತಿದ್ದ ಎಲ್ಲ ಕುತೂಹಲಕ್ಕೆ ಉತ್ತರ ನೀಡಿದ್ದಾರೆ. ಹಾಗಿದ್ರೆ, ರಾಶಿ ಖನ್ನಾ ಮತ್ತು ಬುಮ್ರಾ ಅವರ ಲವ್ ನಿಜಾನ.? ಮುಂದೆ ಓದಿ....

  ಆತನೊಬ್ಬ ಕ್ರಿಕೆಟರ್ ಅಂತ ಗೊತ್ತು

  ಆತನೊಬ್ಬ ಕ್ರಿಕೆಟರ್ ಅಂತ ಗೊತ್ತು

  ಟಿವಿ ನಿರೂಪಕ ಆಲಿ ರಾಶಿ ಖನ್ನಾ ಅವರನ್ನ ನೀವು ಬುಮ್ರಾ ಅವರನ್ನ ಲವ್ ಮಾಡ್ತಿರೋದು ನಿಜಾನ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ರಾಶಿ ''ನೀವು ಈ ಪ್ರಶ್ನೆ ಕೇಳಿದ್ದಕ್ಕೆ ಥ್ಯಾಂಕ್ಸ್. ಆತನೊಬ್ಬ ಕ್ರಿಕೆಟರ್ ಎಂದು ಗೊತ್ತು. ಅದನ್ನ ಬಿಟ್ಟರೇ ಬೇರೆ ಏನೂ ಗೊತ್ತಿಲ್ಲ. ನಾನು ಮ್ಯಾಚ್ ನಲ್ಲಿ ಆತನನ್ನ ನೋಡಿಲ್ಲ'' ಎಂದು ಕಡ್ಡಿ ಮುರಿದಾಗೆ ಹೇಳಿ ಬಿಟ್ಟಿದ್ದಾರೆ.

  ಈ ಸುದ್ದಿ ಹರಡಿದ್ದು ಹೇಗೆ.?

  ಈ ಸುದ್ದಿ ಹರಡಿದ್ದು ಹೇಗೆ.?

  ಹಾಗಿದ್ರೆ, ರಾಶಿ ಖನ್ನಾ ಅವರ ಹೆಸರು ಬುಮ್ರಾ ಅವರ ಜೊತೆ ಹೇಗೆ ಅಂಟಿಕೊಂಡಿತು ಎಂಬ ಕುತೂಹಲಕ್ಕೆ ಉತ್ತರ ಕೊಟ್ಟ ರಾಶಿ ''ಬಾಲಿವುಡ್ ನ ಕೆಲ ವೆಬ್ ಸೈಟ್ ಗಳು ಈ ಬಗ್ಗೆ ಸುದ್ದಿ ಮಾಡಿರೋದು ನನ್ನ ಗಮನಕ್ಕೆ ಬಂದಿದೆ. ಇದೊಂದು ರೀತಿಯಲ್ಲಿ ಮುಜುಗರ ಉಂಟು ಮಾಡಿದೆ'' ಎಂದಿದ್ದಾರೆ.

  ಸ್ಟಾರ್ ನಟನ ಜೊತೆ ಅಫೇರ್.!

  ಸ್ಟಾರ್ ನಟನ ಜೊತೆ ಅಫೇರ್.!

  ಇನ್ನು ಖ್ಯಾತ ನಟರೊಬ್ಬರ ಜೊತೆ ನೀವು ಲವ್ವಲ್ಲಿ ಇದ್ದೀರಾ ಎಂಬ ಪ್ರಶ್ನೆಯನ್ನ ರಾಶಿ ಮುಂದೆ ಇಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಟಿ ''ಎಲ್ಲಿಂದ ಹುಟ್ಟುತ್ತೆ ಈ ಪ್ರಶ್ನೆಗಳು, ಯಾರು ಆ ನಟ, ನೀವೇ ಹೇಳಿ'' ಎಂದು ಮರು ಪ್ರಶ್ನಿಸಿದ್ದಾರೆ.

  ಹೆಚ್ಚು ಬಾಯ್ ಫ್ರೆಂಡ್ಸ್ ಇದ್ದಾರಂತೆ.!

  ಹೆಚ್ಚು ಬಾಯ್ ಫ್ರೆಂಡ್ಸ್ ಇದ್ದಾರಂತೆ.!

  ಸಾಮಾನ್ಯವಾಗಿ ನಟಿಯರಿಗೆ ಇನ್ನೊಬ್ಬ ನಟಿಯ ಜೊತೆ ಹೆಚ್ಚು ಸ್ನೇಹ ಇರುತ್ತೆ. ಆದ್ರೆ, ರಾಶಿಗೆ ನಟರ ಜೊತೆ ಹೆಚ್ಚು ಫ್ರೆಂಡ್ ಷಿಪ್ ಇದೆ ಅಂತೆ ನಿಜಾನ ಎಂದಿದ್ದಕ್ಕೆ ''ಹೌದು, ಇದು ನಿಜಾ. ನನಗೆ ದೆಹಲಿಯಲ್ಲೂ ಕೂಡ ಹೆಚ್ಚು ಜನ ಬಾಯ್ ಫ್ರೆಂಡ್ಸ್ ಇದ್ದಾರೆ. ರಕುಲ್ ಪ್ರೀತ್ ಸಿಂಗ್ ನನಗೆ ಹೆಚ್ಚು ಕ್ಲೋಸ್. ನನ್ನ ಸಹ ನಟರ ಜೊತೆ ಉತ್ತಮ ಸ್ನೇಹ ಹೊಂದಿರುತ್ತೇನೆ'' ಎಂದರು.

  ಆ ಒಂದು ಸಿನಿಮಾ ನನಗೆ ಬೇಡವಾಗಿತ್ತು

  ಆ ಒಂದು ಸಿನಿಮಾ ನನಗೆ ಬೇಡವಾಗಿತ್ತು

  ಇಲ್ಲಿಯವರೆಗೂ ಸುಮಾರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಅವುಗಳಲ್ಲಿ ಒಂದು ಸಿನಿಮಾ ಮಾಡಿದ್ದೇ. ಆಮೇಲೆ ಆ ಸಿನಿಮಾ ನೋಡಿದ ಮೇಲೆ ಆ ಚಿತ್ರದಲ್ಲಿ ಯಾಕಾದ್ರೂ ಆಕ್ಟ್ ಮಾಡಿದ್ದನೋ ಅನಿಸಿದೆ. ಕಥೆ ಕೇಳುವಾಗ ಚೆನ್ನಾಗಿಯೇ ಇತ್ತು. ಆದ್ರೆ, ನೋಡುವಾಗ ಬೇಜಾರಾಯ್ತು ಎಂದು ಹೇಳಿಕೊಂಡಿದ್ದಾರೆ.

  English summary
  I know that Bumrah is an Indian cricketer, that's it. There is nothing beyond that. I don't know him personally, and I have even never met him yet. These rumors have been created by some Bollywood websites says Raashi Khanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X