For Quick Alerts
  ALLOW NOTIFICATIONS  
  For Daily Alerts

  ರಾಯನ್ ರಾಜ್ ಸರ್ಜಾ ಹೊಸ ವಿಡಿಯೋ ಹಂಚಿಕೊಂಡ ಮೇಘನಾ

  |

  ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಜೂನಿಯರ್ ಚಿರು ಹುಟ್ಟಿದ ಸಂದರ್ಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಈಗ ಚಿರು ಪುತ್ರನಿಗೆ 11 ತಿಂಗಳು ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ಮೇಘನಾ ರಾಜ್ ಮಗನ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.

  ಗೊಂಬೆಯ ಜೊತೆ ಆಟ ಆಡ್ತಿರುವ ರಾಯನ್ ರಾಜ್ ಸರ್ಜಾರ ಈ ವಿಡಿಯೋ ಬಹಳ ಮುದ್ದಾಗಿದೆ. ಚಿರು ಪುತ್ರನ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದ ಪ್ರಮುಖ ಅಕರ್ಷಣೆಯೂ ಆಗಿದೆ.

  ಮಗನಿಗೆ ರಾಯನ್ ಎಂದು ಹೆಸರಿಟ್ಟ ಮೇಘನಾ ರಾಜ್: ಹೆಸರಿನ ಅರ್ಥವೇನು?ಮಗನಿಗೆ ರಾಯನ್ ಎಂದು ಹೆಸರಿಟ್ಟ ಮೇಘನಾ ರಾಜ್: ಹೆಸರಿನ ಅರ್ಥವೇನು?

  ಹೆಸರಿನ ಬಗ್ಗೆ ಟೀಕೆಯೂ ವ್ಯಕ್ತವಾಯಿತು

  ಮೊದಲೇ ತಿಳಿದಿರುವಂತೆ ಮೇಘನಾ ಕ್ರಿಶ್ಚಿಯನ್ ಹಾಗೂ ಚಿರಂಜೀವಿ ಸರ್ಜಾ ಹಿಂದೂ. ಇವರಿಬ್ಬರ ಪ್ರೀತಿ ಧರ್ಮ ಅಡ್ಡಿಯಾಗಿಲ್ಲ. ಹಿಂದೂ-ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದರು. ಈಗ ಮಗನಿಗೆ ನಾಮಕರಣವನ್ನು ಎರಡು ಸಂಪ್ರದಾಯದಂತೆ ಮಾಡಿದರು. ಹಿಂದೂ ಸಂಪ್ರದಾಯದಂತೆ ತೊಟ್ಟಿಲು ಶಾಸ್ತ್ರ ಮಾಡಿದರು. ತದನಂತರ ಕ್ರಿಶ್ಚಿಯನ್ ಸಂಪ್ರದಾಯದಂತೆ ಚರ್ಚ್‌ನಲ್ಲಿಯೂ ಕಾರ್ಯಕ್ರಮ ಮಾಡಿದರು. ಆದರೆ ರಾಯನ್ ಎನ್ನುವುದು ಕ್ರಿಶ್ಚಿಯನ್ ಹೆಸರು ಎಂದು ಅನೇಕರು ಟೀಕಿಸಿದರು.

  ರಾಯನ್ ರಾಜ್ ಸರ್ಜಾ ಹೆಸರಿನ ಅರ್ಥವೇನು?

  ''ರಾಯನ್‌ ಹೆಸರಿನ ಅರ್ಥ ಸ್ವರ್ಗದ ಬಾಗಿಲು ತೆಗೆದ ಯುವರಾಜ ಎಂದು. ನಮ್ಮೆಲ್ಲರ ಬಾಳಿನಲ್ಲಿ ಕತ್ತಲೆ ತುಂಬಿದ ಸಂದರ್ಭದಲ್ಲಿ ರಾಯನ್ ಹುಟ್ಟಿದ ನಮಗೆ ಸ್ವರ್ಗದ ಬಾಗಿಲು ತೆರೆದ ಹಾಗಾಗಿ ಅವನಿಗೆ ಇದೇ ಹೆಸರು ಸೂಕ್ತ ಎಂದು ಕೊಂಡೆವು. ಕುಟುಂಬದವರಿಗೂ ಹೆಸರು ಬಹಳ ಇಷ್ಟವಾಯಿತು'' ಎಂದು ಮೇಘನಾ ರಾಜ್ ಸ್ಪಷ್ಟನೆ ನೀಡಿದರು.

  ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಮೊದಲಿನಿಂದಲೇ ಆತ್ಮೀಯರು ಮತ್ತು ಸ್ನೇಹಿತರಾಗಿದ್ದರು. ಎರಡು ಕುಟುಂಬದ ನಡುವೆ ಆತ್ಮೀಯ ಬಾಂಧವ್ಯವೂ ಇತ್ತು. ಈ ಸ್ನೇಹ ಪ್ರೀತಿಯಾಗಿ ನಂತರ ಮದುವೆವರೆಗೂ ಬಂತು. 2018ರ ಮೇ 2 ರಂದು ಮೇಘನಾ ಹಾಗೂ ಚಿರು ಸರ್ಜಾ ವಿವಾಹ ಬೆಂಗಳೂರಿನಲ್ಲಿ ಜರುಗಿತ್ತು.

  ನಿನ್ನ ಬಿಟ್ಟು ಇರಲಾರೆ: ಅಣ್ಣ ಚಿರಂಜೀವಿ ಸರ್ಜಾನ ನೆನೆದ ಧ್ರುವ ಸರ್ಜಾನಿನ್ನ ಬಿಟ್ಟು ಇರಲಾರೆ: ಅಣ್ಣ ಚಿರಂಜೀವಿ ಸರ್ಜಾನ ನೆನೆದ ಧ್ರುವ ಸರ್ಜಾ

  ದುರಾದೃಷ್ಟವಶಾತ್ ಚಿರು ಸರ್ಜಾ 2020ರ ಜೂನ್ 7 ರಂದು ಹೃದಯಾಘಾತ ಸಂಭವಿಸಿ ಮೃತಪಟ್ಟರು. ಚಿರು ನಿಧನವಾದ ಸಮಯದಲ್ಲಿ ಮೇಘನಾ ರಾಜ್ ನಾಲ್ಕು ತಿಂಗಳು ಗರ್ಭಿಣಿಯಾಗಿದ್ದರು. ನಂತರ ಅಕ್ಟೋಬರ್ 22 ರಂದು ಚೊಚ್ಚಲ ಮಗುವಿಗೆ ಜನ್ಮ ಕೊಟ್ಟರು. ಜೂನಿಯರ್ ಚಿರುಗೆ ಈಗ 11 ತಿಂಗಳು ತುಂಬಿದೆ.

  Raayan Raj Sarja Completes 11 Months; Meghana Raj Sarja shares her son new video

  ಯೂಟ್ಯೂಬ್ ಚಾನಲ್‌ಗಳು ಅಪಪ್ರಚಾರ

  ಇತ್ತೀಚಿಗೆ ಕೆಲವು ಯೂಟ್ಯೂಬ್ ಚಾನಲ್‌ಗಳು ಮೇಘನಾ ರಾಜ್ ಅವರ ಬಗ್ಗೆ ಅಪಪ್ರಚಾರ ಮಾಡಿವೆ. ಮೇಘನಾ ಶೀಘ್ರದಲ್ಲೇ ಎರಡನೇ ಮದುವೆ ಆಗ್ತಾರೆ ಎಂದು ಸುದ್ದಿ ಹಾಕಿವೆ. ಇದು ಸಹಜವಾಗಿ ಅಭಿಮಾನಿಗಳಿಗೆ ಹಾಗೂ ಮೇಘನಾ ಆಪ್ತರಿಗೆ ಬೇಸರ ಮೂಡಿಸಿದೆ. ಇದೇ ವಿಚಾರವಾಗಿ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಯೂಟ್ಯಬರ್ಸ್ ವಿರುದ್ಧ ಕೆಂಡಕಾರಿದ್ದರು. ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯಿಸಿದ್ದರು.

  ''ನಾನ್ ನೋಡಿದ್ರೂ ignore ಮಾಡೋಣ ಅಂತಿದ್ದೆ!! ಬಟ್ ಒಂದು ದಿನದಲ್ಲಿ 2.70 ಲಕ್ಷ ವೀಕ್ಷಣೆ ಕಂಡಿದೆ !! ವೀವ್ಸ್ ಆಗ್ಲಿ, ದುಡ್ಡಾಗ್ಲಿ ಅಂತ ಈ ಮಟ್ಟಕ್ಕೆ ಈ ಯೂಟ್ಯೂಬ್ ಚಾನಲ್ ಇಳಿದಾಗ ಸ್ವಲ್ಪ ಕಾನೂನಾತ್ಮಕವಗಿ ನೋಡಬೇಕಗುತ್ತದೆ! ಮೇಘನಾ ರಾಜ್ ಇಂತಹ ಒಂದು ಚಾನಲ್‌ನ ನೀವು ಕಾನೂನಾತ್ಮಕವಗಿ ಡಿಲೀಟ್ ಮಾಡ್ಸಿದ್ರೆ ಇನ್ನಷ್ಟು ಜನ ಎಚ್ಚೆತ್ತುಕೊಳ್ತರೆ'' ಎಂದು ಪ್ರಥಮ್ ಸಲಹೆ ಕೊಟ್ಟಿದ್ದಾರೆ.

  2019ರಲ್ಲಿ ಬಿಡುಗಡೆಯಾದ 'ಕುರುಕ್ಷೇತ್ರ' ಚಿತ್ರದಲ್ಲಿ ಕೊನೆಯದಾಗಿ ಮೇಘನಾ ರಾಜ್ ಕಾಣಿಸಿಕೊಂಡಿದ್ದರು. ಅದಾದ ನಂತರ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಹಾಗೂ ಬುದ್ದಿವಂತ 2 ಚಿತ್ರಗಳನ್ನು ಕೈಗೆತ್ತಿಕೊಂಡರು. ಆಮೇಲೆ ಕೊರೊನಾ, ಲಾಕ್‌ಡೌನ್ ಹಾಗು ವೈಯಕ್ತಿಕ ಬದುಕಿನ ಕೆಲವು ಕೆಟ್ಟ ಘಳಿಗೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.

  English summary
  Raayan Raj Sarja Completes 11 Months: actress Meghana Raj Sarja shares her son new video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X