For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವೈರಸ್ ಎಫೆಕ್ಟ್: ರಾಬರ್ಟ್ ಸಿನಿಮಾ ಬಿಡುಗಡೆ ಮುಂದಕ್ಕೆ?

  |

  ಡಿ-ಬಾಸ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್‌ ಮೇಲೆ ಕೊರೊನಾ ವೈರಸ್ ನ ಕರಿನೆರಳು ಬಿದ್ದಿದೆ. ಹಾಡಿನ ಚಿತ್ರೀಕರಣಕ್ಕಾಗಿ ಸ್ಪೇನ್‌ ಗೆ ಹೋಗಬೇಕಿದ್ದ ತಂಡ ಅಂತಿಮಗಳಿಗೆಯಲ್ಲಿ ಯೋಜನೆ ಬದಲಾಯಿಸಿದೆ. ಇದು ರಾಬರ್ಟ್ ಚಿತ್ರ ಬಿಡುಗಡೆ ಮೇಲೆಯೂ ಪರಿಣಾಮ ಬೀರಿದೆ.

  ಮೊದಲಿಗೆ ರಾಬರ್ಟ್ ಚಿತ್ರ ಮಾರ್ಚ್ 18 ರಂದು ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ನಂತರ ಕಾರಣಾಂತರದಿಂದ ಚಿತ್ರ ತಡವಾದ ಕಾರಣ ದಿನಾಂಕವನ್ನು ಬದಲಾಯಿಸಿ ಏಪ್ರಿಲ್ 9 ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು.

  ಡಿ ಡಿ ಡಿ... 'ಡಿ ಬಾಸ್' ಅಭಿಮಾನಿಗಳು ಫಿದಾ: 'ರಾಬರ್ಟ್' ಹಾಡು ಹೇಗಿದೆ?ಡಿ ಡಿ ಡಿ... 'ಡಿ ಬಾಸ್' ಅಭಿಮಾನಿಗಳು ಫಿದಾ: 'ರಾಬರ್ಟ್' ಹಾಡು ಹೇಗಿದೆ?

  ಆದರೆ ಚಿತ್ರತಂಡದ ಪೂರ್ವನಿರ್ಧಾರಿತ ಯೋಜನೆಗಳು ಕೊರೊನಾ ವೈರಸ್ ಭೀತಿಯಿಂದ ಬದಲಾವಣೆಗಳಾದ ಕಾರಣ ಬಿಡುಗಡೆ ದಿನಾಂಕವೂ ಮುಂದೆ ಹೋಗುವ ಆತಂಕ ಎದುರಾಗಿದೆ.

  ಸತತವಾಗಿ ಶ್ರಮಿಸುತ್ತಿರುವ ಚಿತ್ರತಂಡ

  ಸತತವಾಗಿ ಶ್ರಮಿಸುತ್ತಿರುವ ಚಿತ್ರತಂಡ

  ಆದರೆ ಹೇಳಿದ ದಿನಾಂಕಕ್ಕೆ ಬದ್ಧವಾಗಿ ಏಪ್ರಿಲ್ 9 ರಂದೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂದ ಸತತವಾಗಿ ಶ್ರಮಿಸುತ್ತಿದೆ. ವಿದೇಶದಲ್ಲಿ ಚಿತ್ರೀಕರಣ ಆಗಲಿದ್ದ ಹಾಡನ್ನು ನಮ್ಮದೇ ದೇಶದ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜಿಸಿದೆ.

  ಹಾಡಿನ ಚಿತ್ರೀಕರಣ ತಡ

  ಹಾಡಿನ ಚಿತ್ರೀಕರಣ ತಡ

  ಹಾಡಿನ ಚಿತ್ರೀಕರಣ ತಡವಾಗಿರುವ ಕಾರಣ ಚಿತ್ರ ಬಿಡುಗಡೆ ತಡವಾಗಲಿದೆ ಎನ್ನಲಾಗುತ್ತಿದ್ದು, ಅಧಿಕೃತ ಮಾಹಿತಿಯನ್ನು ಚಿತ್ರತಂಡ ಇನ್ನಷ್ಟೆ ಹೊರಗೆಡವಬೇಕಿದೆ. ಚಿತ್ರ ಆದಷ್ಟು ಶೀಘ್ರವಾಗಿ ಬಿಡುಗಡೆ ಆಗಲಿ ಎಂಬುದೇ ಅಭಿಮಾನಿಗಳ ಬಯಕೆ.

  BREAKING: ವಿದೇಶದಲ್ಲಿ ನಡೆಯಬೇಕಿದ್ದ ಸ್ಟಾರ್ ನಟರ ಶೂಟಿಂಗ್ ರದ್ದುBREAKING: ವಿದೇಶದಲ್ಲಿ ನಡೆಯಬೇಕಿದ್ದ ಸ್ಟಾರ್ ನಟರ ಶೂಟಿಂಗ್ ರದ್ದು

  ಯುವರತ್ನ ಬಿಡುಗಡೆ ಮೇಲೂ ಕೊರೊನಾ ಎಫೆಕ್ಟ್?

  ಯುವರತ್ನ ಬಿಡುಗಡೆ ಮೇಲೂ ಕೊರೊನಾ ಎಫೆಕ್ಟ್?

  ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಚಿತ್ರತಂಡದ ಚಿತ್ರೀಕರಣದ ಯೋಜನೆಗಳು ಸಹ ಕೊರೊನಾ ವೈರಸ್ ಭೀತಿಯಿಂದ ತಲೆಕೆಳಗಾಗಿವೆ. ಯುವರತ್ನ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಹೋಗಲಾಗಿಲ್ಲ, ಇದು ಯುವರತ್ನ ಬಿಡುಗಡೆ ದಿನಾಂಕದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

  ನಿರೀಕ್ಷೆ ಹೆಚ್ಚಿಸಿದ ಡಿ..ಡಿ.. ಬಾಸ್ ಹಾಡು

  ನಿರೀಕ್ಷೆ ಹೆಚ್ಚಿಸಿದ ಡಿ..ಡಿ.. ಬಾಸ್ ಹಾಡು

  ಇನ್ನು ನಿನ್ನೆಯಷ್ಟೆ ರಾಬರ್ಟ್ ಚಿತ್ರದ ಹಾಡು ಬಿಡುಗಡೆ ಆಗಿದೆ. ಡಿ..ಡಿ...ಡಿ.. ಬಾಸ್ ಹಾಡು ಅಭಿಮಾನಿಗಳ ಮನ ಗೆದ್ದಿದೆ. ನಿನ್ನೆ ಬಿಡುಗಡೆ ಆಗಿರುವ ಈ ಹಾಡು ಸಿನಿಮಾ ಬಗ್ಗೆ ಇದ್ದ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ.

  English summary
  Darshan's Robert movie release date may postpone. Team reschedules its shooting due to coronavirus panic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X