ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿದ ನಟಿ ರಚಿತಾ ರಾಮ್
ಬಾಟಲ್ ಕ್ಯಾಪ್ ಚಾಲೆಂಜ್ ಎನ್ನುವ ಹೊಸ ಚಾಲೆಂಜ್ ಈಗ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾರತದಲ್ಲಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರಿಂದ ಪ್ರಾರಂಭವಾದ ಈ ಚಾಲೆಂಜ್ ಈಗ ಸ್ಯಾಂಡಲ್ ವುಡ್ ನಲ್ಲೂ ಸೌಂಡ್ ಮಾಡುತ್ತಿದೆ.
ನಟ-ನಟಿಯರು ಬಾಟಲ್ ಓಪನ್ ಚಾಲೆಂಜ್ ಅನ್ನು ಸ್ವೀಕರಿಸಿ ಯಶಸ್ವಿಯಾಗಿ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ. ನಟರು ಮಾತ್ರವಲ್ಲದೆ ನಟಿಯರು ಕೂಡ ಈ ಚಾಲೆಂಜ್ ಅನ್ನು ಸ್ವೀಕರಿಸಿ ಯಶಸ್ವಿಯಾಗಿ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಈ ಈ ಚಾಲೆಂಜ್ ಸ್ವೀಕರಿಸಿದವರಲ್ಲಿ ರಚಿತಾ ರಾಮ್ ಕೂಡ ಒಬ್ಬರು.
ಕ್ಯಾಪ್ ಹಾಕಿರುವ ಬಾಟಲ್ ಅನ್ನು ಜಂಪ್ ಮಾಡಿ ಕಾಲಿನಲ್ಲಿ ಒದ್ದು ಬಾಟಲ್ ಕ್ಯಾಪ್ ಓಪನ್ ಮಾಡಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್ ರಚಿತಾ ರಾಮ್. ಚಾಲೆಂಜ್ ಗೆದ್ದ ಸಂತಸದಲ್ಲಿ ಎರಡು ಸ್ಟೆಪ್ ಕೂಡ ಹಾಕಿ ಸಂತಸ ಪಟ್ಟಿದ್ದಾರೆ ರಚ್ಚು. ರಚಿತಾ ರಾಮ್ ಇತ್ತೀಚಿಗೆ ಜಿಮ್ ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ.

ಕೊಂಚ ದಪ್ಪ ಆಗಿದ್ದ ಡಿಂಪಲ್ ಕ್ವೀನ್ ಈಗ ಜಿಮ್ ನಲ್ಲಿ ಸಖತ್ ವರ್ಕೌಟ್ ಮಾಡಿ ಬೆವರಿಳಿಸಿ ಸ್ವಲ್ಪ ಸಣ್ಣಗೆ ಆಗಿದ್ದಾರೆ. ಅಂದ್ಹಾಗೆ ರಚಿತಾ ರಾಮ್ ಇತ್ತೀಚಿಗಷ್ಟೆ ಐ ಲವ್ ಯು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅವರ ಕೈಯಲ್ಲೀಗ ಆನಂದ್, ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ, ಸಂಜಯ್ ಅಲಿಯಾಸ್ ಸಂಜು ಮತ್ತು ಏಕ್ ಲವ್ ಯಾ ಸಿನಿಮಾಗಳಿವೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಚಿತಾ.


Click it and Unblock the Notifications











