For Quick Alerts
  ALLOW NOTIFICATIONS  
  For Daily Alerts

  'ಪಂಕಜ ಕಸ್ತೂರಿ'ಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

  |

  ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಚಿತಾ ಮತ್ತೊಂದು ವಿಭಿನ್ನ ಸಿನಿಮಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದ್ಹಾಗೆ ರಚಿತಾ ರಾಮ್ ಹೊಸ ಸಿನಿಮಾಗೆ ಮಯೂರ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ನಿರ್ದೇಶಕ ಮಯೂರ ರಾಘವೇಂದ್ರ ಮತ್ತು ರಚಿತಾ ರಾಮ್ ಈ ಮೊದಲು ರಿಷಭಪ್ರಿಯ ಎನ್ನುವ ಕಿರುಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಮಯೂರ ನಿರ್ದೇಶನದ ಕಿರುಚಿತ್ರಕ್ಕೆ ರಚಿತಾ ರಾಮ್ ಬಂಡವಾಳ ಹೂಡಿದ್ದರು. ಇದೀಗ ಸಿನಿಮಾ ಮೂಲಕ ಇಬ್ಬರು ಮತ್ತೆ ಒಂದಾಗುತ್ತಿದ್ದಾರೆ.

  ರಚಿತಾ ರಾಮ್ ಕೈಯಲ್ಲಿದೆ 10ಕ್ಕೂ ಹೆಚ್ಚು ಹೊಸ ಚಿತ್ರಗಳು, ಯಾವುವು?

  ವಿಶೇಷ ಎಂದರೆ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಚಿತ್ರಕ್ಕೆ ಪಂಕಜ ಕಸ್ತೂರಿ ಎಂದು ಟೈಟಲ್ ಇಡಲಾಗಿದೆ. ದಸರಾ ಹಬ್ಬದ ವಿಶೇಷ ಸಂದರ್ಶನದಲ್ಲಿ ನಟಿ ರಚಿತಾ ರಾಮ್ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ಅಂದ್ಹಾಗೆ ಮಯೂರ ರಾಘವೇಂದ್ರ ನಿರ್ದೇಶನದ ಕನ್ನಡ್ ಗೊತ್ತಿಲ್ಲ ಸಿನಿಮಾದಲ್ಲಿ ರಚಿತಾ ರಾಮ್ ನಟಿಸಬೇಕಿತ್ತು. ಆದರೆ ಈ ಸಿನಿಮಾದಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದರು.

  ಮತ್ತೆ ಶಾಲೆಗೆ ಸೇರಿದ ರಶ್ಮಿಕಾ ಮಂದಣ್ಣ | Pushpa | Allu Arjun | Filmibeat Kannada

  ಇದೀಗ ಪಂಕಜ ಕಸ್ತೂರಿ ಮೂಲಕ ಮತ್ತೆ ಒಂದಾಗಿದ್ದಾರೆ. ಸದ್ಯ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಉಳಿದಂತೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಚಿತ್ರದಲ್ಲಿ ಯಾರೆಲ್ಲ ನಟಸಲಿದ್ದಾರೆ, ತಾಂತ್ರಿಕ ವರ್ಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುವ ಸಾಧ್ಯತೆ ಇದೆ.

  English summary
  Actress Rachita Ram and Mayuraa Raghavendra's new movie titled Pankaja Kasturi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X