'ಅಮರ್' ಚಿತ್ರಕ್ಕೆ ತಾರಾ ಮೆರುಗು: ವಿಶೇಷ ಪಾತ್ರದಲ್ಲಿ ಇಬ್ಬರು ತಾರೆಯರು.! ಯಾರವರು.?

By Harshitha

Recommended Video

Amar Kannada movie : ಅಮರ್ ಅಡ್ಡದಿಂದ ಬಂತು ಇಂಟ್ರೆಸ್ಟಿಂಗ್ ಸುದ್ದಿ..! | Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾಗಿದೆ. ಅಪ್ಪ-ಅಮ್ಮನಂತೆ ಅಭಿಶೇಕ್ ಕೂಡ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಬಂದಿದ್ದಾರೆ. 'ಅಮರ್' ಚಿತ್ರದ ಮೂಲಕ ಅಭಿಶೇಕ್ ಚಂದನವನಕ್ಕೆ ಕಾಲಿಟ್ಟಿದ್ದಾರೆ.

'ಅಮರ್' ಚಿತ್ರದ ಚಿತ್ರೀಕರಣ ಸದ್ಯ ಬಿರುಸಿನಿಂದ ಸಾಗುತ್ತಿದೆ. ಹೇಳಿ ಕೇಳಿ ಇದು ರೇಸಿಂಗ್ ಕಮ್ ರೋಮ್ಯಾಂಟಿಕ್ ಸಿನಿಮಾ. ಹೀಗಾಗಿ ಪಾಂಡಿಚೇರಿಯಿಂದ ಊಟಿವರೆಗೂ ಸವಾರಿ ಮಾಡುತ್ತಲೇ ಚಿತ್ರತಂಡ ಶೂಟಿಂಗ್ ಮಾಡುತ್ತಿದೆ.

ನಾಗಶೇಖರ್ ನಿರ್ದೇಶನ ಮಾಡುತ್ತಿರುವ 'ಅಮರ್' ಸಿನಿಮಾದಲ್ಲಿ ಹಲವು ಸ್ಪೆಷಾಲಿಟಿಗಳಿವೆ. 'ಅಮರ್' ಚಿತ್ರದ ಫೋಟೋ ಶೂಟ್ ಹಾಗೂ ಮೇಕಿಂಗ್ ಮೂಲಕವೇ ನಿರ್ದೇಶಕ ನಾಗಶೇಖರ್ ಸೆನ್ಸೇಷನ್ ಹುಟ್ಟುಹಾಕಿದ್ದಾರೆ. ಹೀಗಿರುವಾಗಲೇ, 'ಅಮರ್' ಅಡ್ಡದಿಂದ ಒಂದು ಇಂಟ್ರೆಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ....

'ಅಮರ್' ಚಿತ್ರದಲ್ಲಿ ಡಿಂಪಲ್ ಕ್ವೀನ್.!

'ಅಮರ್' ಚಿತ್ರದಲ್ಲಿ ಡಿಂಪಲ್ ಕ್ವೀನ್.!

ಅಭಿಶೇಕ್ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ಅಮರ್'ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಇರಲಿದ್ದಾರೆ. ಚಿತ್ರದ ಸ್ಪೆಷಲ್ ಸಾಂಗ್ ನಲ್ಲಿ ರಚಿತಾ ರಾಮ್ ಸೊಂಟ ಬಳುಕಿಸಲಿದ್ದಾರೆ.

ನಿರೂಪ್ ಭಂಡಾರಿ ಕೂಡ ಇರ್ತಾರೆ.!

ನಿರೂಪ್ ಭಂಡಾರಿ ಕೂಡ ಇರ್ತಾರೆ.!

ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತ್ರ ಅಲ್ಲ. ನಿರೂಪ್ ಭಂಡಾರಿ ಕೂಡ 'ಅಮರ್' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ರಾಜರಥ' ಆದ್ಮೇಲೆ, ನಿರೂಪ್ ಭಂಡಾರಿ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದಲ್ಲೇ.

ಬೈಕ್ ರೇಸರ್ ಆಗಿ ಅಭಿಶೇಕ್

ಬೈಕ್ ರೇಸರ್ ಆಗಿ ಅಭಿಶೇಕ್

ಅಂದ್ಹಾಗೆ, 'ಅಮರ್' ಚಿತ್ರದಲ್ಲಿ ಅಭಿಶೇಕ್ ಬೈಕ್ ರೇಸರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಬಹುತೇಕ ಪ್ರಯಾಣದಲ್ಲೇ ಚಿತ್ರದ ಕಥೆ ಸಾಗುತ್ತದೆ. ಅಭಿಶೇಕ್ ಗೆ ತಾನ್ಯ ಹೋಪ್ ಜೋಡಿಯಾಗಿದ್ದಾರೆ.

'ಅಮರ್' ಚಿತ್ರತಂಡ...

'ಅಮರ್' ಚಿತ್ರತಂಡ...

ಅಭಿಶೇಕ್, ತಾನ್ಯ ಜೊತೆಗೆ ದೀಪಕ್ ಶೆಟ್ಟಿ, ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಸಿನಿಮಾದಲ್ಲಿ ಚಿಕ್ಕಣ್ಣ ಕಾಮಿಡಿ ಕಲರವ ಇರಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.

More from Filmibeat

English summary
Rachita Ram and Nirup Bhandari to do a cameo in Abhishek Ambareesh's debut film 'Amar'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X