ಕೊರೊನಾ ಆತಂಕದ ನಡುವೆಯೂ ಚಿತ್ರೀಕರಣಕ್ಕೆ ಹಾಜರಾದ ನಟಿ ರಚಿತಾ ರಾಮ್
ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಮತ್ತೊಂದೆಡೆ ಲಾಕ್ ಡೌನ್ ಸಡಿಲಿಕೆಯಾಗಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.
Recommended Video
ಸುಮಾರು ಎರಡೂವರೆ ತಿಂಗಳಿಂದ ಮನೆಯಲ್ಲಿಯೆ ಕುಳಿತಿದ್ದ ಜನ ಈಗ ನಿಧಾನವಾಗಿ ಹೊರಬರುತ್ತಿದ್ದು, ಕೆಲಸಗಳಲ್ಲಿ ನಿರತರಾಗುತ್ತಿದ್ದಾರೆ. ಮನರಂಜನಕ್ಷೇತ್ರಕ್ಕೆ ಸಂಬಂಧಿಸಿದ್ದಂತೆ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ. ಈಗಾಗಲೆ ಸಾಕಷ್ಟು ಮಂದಿ ಚಿತ್ರೀಕರಣಕ್ಕೆ ಮರಳಿದ್ದಾರೆ. ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಸಹ ಲಾಕ್ ಡೌನ್ ನಂತರ ಚಿತ್ರೀಕರಣಕ್ಕೆ ಮರಳಿದ್ದಾರೆ. ಮುಂದೆ ಓದಿ...

'ಸೂಪರ್ ಮಚ್ಚಿ' ಚಿತ್ರೀಕರಣದಲ್ಲಿ ರಚಿತಾ ರಾಮ್
ಕೊರೊನಾ ಆತಂಕದ ನಡುವೆಯೂ ಚಿತ್ರೀಕರಣ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣಕ್ಕಾಗಿ ರಚಿತಾ ರಾಮ್ ಹೈದರಾಬಾದ್ ಗೆ ತೆರಳಿದ್ದಾರೆ. ರಚಿತಾ ರಾಮ್ ತೆಲುಗಿನ 'ಸೂಪರ್ ಮಚ್ಚಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚಿತ್ರೀಕರಣ
ಈ ಬಗ್ಗೆ ನಟಿ ರಚಿತಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. " ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಮತ್ತೆ ಚಿತ್ರೀಕರಣಕ್ಕೆ ಹಿಂತಿರುಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿತ್ರೀಕರಣ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಕಡಿಮೆ ಕ್ರೂ ಜೊತೆಗೆ ಚಿತ್ರೀಕರಣ ಪ್ರಾರಂಭಿಸಿದ್ದಾರೆ.
ನಿರ್ದೇಶಕಿಯಾಗಲಿದ್ದಾರಾ ನಟಿ ರಚಿತಾ ರಾಮ್..?

ರಚಿತಾ ಅಭಿನಯದ ಮೊದಲ ತೆಲುಗು ಸಿನಿಮಾ
ಮೊದಲ ಬಾರಿಗೆ ರಚಿತಾ ರಾಮ್ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜೊತೆ ನಟಿ ರಚಿತಾ ರಾಮ್ ತೆರೆಹಂಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಪುಲಿ ವಾಸು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿದ್ದ ಸಿನಿಮಾತಂಡ, ಲಾಕ್ ಡೌನ್ ಕಾರಣ ಚಿತ್ರೀಕರಣ ಸ್ಥಗಿತವಾಗಿತ್ತು. ಈಗ ಮತ್ತೆ ಶೂಟಿಂಗ್ ಪ್ರಾರಂಭಿಸಿದ್ದು, ಜೋರಾಗಿ ನಡೆಯುತ್ತಿದೆ.

ಡಿಂಪಲ್ ಕ್ವೀನ್ ಬಳಿ ಇರುವ ಸಿನಿಮಾಗಳು
ರಚಿತಾ ರಾಮ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಕನ್ನಡದಲ್ಲಿ ರಚಿತಾ ಏಕ್ ಲವ್ ಯಾ, 100, ಡಾಲಿ, ಏಪ್ರಿಲ್, ಸೀರೆ, ಲಿಲ್ಲಿ, ಸಂಜು ಅಲಿಯಾಸ್ ಸಂಜಯ್ ಸೇರಿದ್ದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ರಚಿತಾ ರಾಮ್ ಆಯುಷ್ಮಾನ್ ಭವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.


Click it and Unblock the Notifications











