ಗುಳಿಕೆನ್ನೆ ಚೆಲುವೆಗೆ ಹುಟ್ಟುಹಬ್ಬದ ಸಂಭ್ರಮ: ಮಧ್ಯರಾತ್ರಿಯೇ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಣೆ
ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿ ಸೂಪರ್ ಸಕ್ಸಸ್ ಕಂಡ ನಟಿ ರಚಿತಾ ರಾಮ್. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಬಣ್ಣಹಚ್ಚಿ ಸಿನಿರಸಿಕರ ಮನಗೆದ್ದ ಚೆಲುವೆ ಇಂದು(ಅಕ್ಟೋಬರ್ 3) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 'ಬುಲ್ ಬುಲ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚೆಲುವೆ ಇವತ್ತಿಗೂ ಬಹುಬೇಡಿಕೆಯ ನಟಿಯಾಗಿ ಕಮಾಲ್ ಮಾಡ್ತಿದ್ದಾರೆ.
ಮಧ್ಯರಾತ್ರಿ ಅಭಿಮಾನಿಗಳು ರಾಜರಾಜೇಶ್ವರಿ ನಗರದ ರಚಿತಾರಾಮ್ ನಿವಾಸದ ಮುಂದೆ ಜಮಾಯಿಸಿ, ನೆಚ್ಚಿನ ನಟಿಯ ಹುಟ್ಟುಹಬ್ಬ ಆಚರಿಸಿದ್ದಾರೆ. ಅಭಿಮಾನಿಗಳ ಜೊತೆ ರಚಿತಾ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮೊದಲ ಬಾರಿಗೆ ಈ ರೀತಿ ಮಧ್ಯರಾತ್ರಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಡಿಂಪಲ್ ಕ್ವೀನ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಗಣೇಶ್, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಸ್ಯಾಂಡಲ್‌ವುಡ್‌ನ ಇವತ್ತಿನ ಬಹುತೇಕ ಎಲ್ಲಾ ಸ್ಟಾರ್‌ಗಳ ಜೊತೆಗೂ ತೆರೆ ಹಂಚಿಕೊಂಡು ರಚಿತಾ ರಾಮ್ ಸಕ್ಸಸ್ ಕಂಡಿದ್ದಾರೆ.

ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾದಲ್ಲೂ ರಚ್ಚು ಬಣ್ಣ ಹಚ್ಚಿದ್ದಾರೆ. ಕಮರ್ಷಿಯಲ್ ಸಿನಿಮಾಗಳು ಮಾತ್ರವಲ್ಲ, ಹಾಫ್‌ಬೀಟ್ ಸಿನಿಮಾಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇತ್ತೀಚೆಗೆ ರಚಿತಾ ನಟನೆಯ 'ಮಾನ್ಸೂನ್ ರಾಗ' ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಆಕೆಯ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 'ಮ್ಯಾಟ್ನಿ', 'ವೀರಂ', 'ಬ್ಯಾಡ್‌ಮ್ಯಾನರ್ಸ್', 'ಶಬರಿ', 'ಕ್ರಾಂತಿ' ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ರಚ್ಚು ನಟಿಸ್ತಿದ್ದಾರೆ.

'ಬುಲ್‌ಬುಲ್', 'ದಿಲ್ ರಂಗೀಲಾ', 'ರನ್ನ', 'ಅಯೋಗ್ಯ', 'ನಟಸಾರ್ವಭೌಮ', 'ಐ ಲವ್ ಯು' ರಚಿತಾ ರಾಮ್ ನಟನೆಯ ಕೆಲ ಹಿಟ್ ಸಿನಿಮಾಗಳು. ಬಹುಭಾಷಾ ನಟಿ ಸುಹಾಸಿನಿ ಕೂಡ ರಚ್ಚು ನಟನೆಯನ್ನು ಮೆಚ್ಚಿ ಕೊಂಡಾಡಿದ್ದರು. ಕಳೆದ 10 ವರ್ಷಗಳಿಂದ ರಚ್ಚು ಬಹುಬೇಡಿಕೆಯ ನಟಿಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್‌ಗಳ ಜೊತೆ ಮಾತ್ರವಲ್ಲ ಯುವನಟರ ಸಿನಿಮಾಗಳಲ್ಲೂ ಮಿಂಚಿದ್ದಾರೆ.


Click it and Unblock the Notifications











