ನಿಖಿಲ್ ಜೊತೆಗಿನ ಮದುವೆ ವದಂತಿ ಬಗ್ಗೆ ರಚಿತಾ ರಾಮ್ ಕೊಟ್ಟ ಸ್ಪಷ್ಟನೆ ಇದು.!

Recommended Video

ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ಕೊಟ್ಟ ರಚಿತಾ ರಾಮ್ | FILMIBEAT KANNADA

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ಮದುವೆ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನಡೆದಿತ್ತು. ಅಲ್ಲಿಗೆ, ಅಕ್ಕನ ಮದುವೆ ಮುಗಿಯಿತು.. ರಚಿತಾ ಲೈನ್ ಕ್ಲಿಯರ್ ಆಯ್ತು.. ಸದ್ಯದಲ್ಲೇ ರಚಿತಾ ರಾಮ್ ವಿವಾಹ ಕೂಡ ನಡೆಯಲಿದೆ ಎಂಬ ವದಂತಿ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ.

ಅದಕ್ಕೆ ಸರಿಯಾಗಿ, ಮೊನ್ನೆಯಷ್ಟೇ ನಟಿ ರಚಿತಾ ರಾಮ್ ಶೃಂಗೇರಿಗೆ ತೆರಳಿದ್ದರು. ಶಾರದಾಂಬೆಯ ದರ್ಶನ ಪಡೆಯಲು ರಚಿತಾ ರಾಮ್ ಹೋಗಿದ್ದರೆ, ಅಲ್ಲಿ ಅದಾಗಲೇ ನಿಖಿಲ್ ಕುಮಾರ್ ಸೇರಿದಂತೆ ಮಾಜಿ ಪ್ರಧಾನಿ ಎಚ್.ದೇವೇಗೌಡರ ಕುಟುಂಬ ಚಂಡಿಕಾ ಯಾಗ ನಡೆಸುತ್ತಿದ್ದರು.

ಹೀಗಾಗಿ, ''ನಿಖಿಲ್ ಜೊತೆಗೆ ಚಂಡಿಕಾ ಯಾಗದಲ್ಲಿ ಪಾಲ್ಗೊಳ್ಳಲು ರಚಿತಾ ಆಗಮಿಸಿದ್ದಾರೆ. ಇಬ್ಬರ ಮಧ್ಯೆ ಪ್ರೀತಿ ಮೂಡಿರುವ ಹಾಗಿದೆ. ಇಬ್ಬರು ಮದುವೆ ಆಗ್ತಾರಂತೆ'' ಎಂಬ ಅಂತೆ-ಕಂತೆ ಎಲ್ಲೆಡೆ ಕೇಳಿಬರುತ್ತಿದೆ.

ಇನ್ನೂ, ನಿನ್ನೆಯಷ್ಟೇ ನಿಖಿಲ್ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇನ್ಸ್ಟಾಗ್ರಾಮ್ ನಲ್ಲಿ ನಿಖಿಲ್ ಗೆ ರಚಿತಾ ರಾಮ್ ಜನ್ಮದಿನದ ಶುಭಾಶಯಗಳನ್ನು ಕೋರಿದರು. ಪರಿಣಾಮ, ನಿಖಿಲ್ ಮತ್ತು ರಚಿತಾ ಮಧ್ಯೆ ಪ್ರೀತಿ ಮೊಳಕೆಯೊಡೆದಿರುವುದು ಪಕ್ಕಾ ಅಂತಲೇ ಹಲವರು ಭಾವಿಸಿದರು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಮೇಲೆ ನಟಿ ರಚಿತಾ ರಾಮ್ ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲಾ ಗಾಸಿಪ್ ಗಳಿಗೂ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ರಚಿತಾ ರಾಮ್ ಕ್ಲಾರಿಟಿ ಕೊಟ್ಟಿದ್ದಾರೆ.

ರಚಿತಾ ರಾಮ್ ಕೊಟ್ಟಿರುವ ಸ್ಪಷ್ಟನೆ ಏನು.?

ರಚಿತಾ ರಾಮ್ ಕೊಟ್ಟಿರುವ ಸ್ಪಷ್ಟನೆ ಏನು.?

''ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಒಂದು ಸ್ಪಷ್ಟತೆ ಕೊಡಲು ಬಯಸುತ್ತೇನೆ. ನನ್ನ ಸಿನಿಮಾಗಳ ಕುರಿತಾದ ವಿಷಯಗಳಲ್ಲಿ ಅಥವಾ ವೈಯುಕ್ತಿಕ ವಿಷಯಗಳಾಗಲಿ ನನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಅದು ಸತ್ಯವೆಂದು ಪರಿಗಣಿಸಿ'' - ರಚಿತಾ ರಾಮ್, ನಟಿ

ಬೇಸರ ಆಗುತ್ತದೆ.!

ಬೇಸರ ಆಗುತ್ತದೆ.!

''ಮನರಂಜನೆಗಾಗಿ ಸುಳ್ಳು ವದಂತಿಗಳನ್ನು ಸೃಷ್ಟಿ ಮಾಡಿದರೆ ಖುಷಿಯುಂಟಾಗಬಹುದು. ಆದರೆ ಅದರಿಂದ ನನಗೆ ಹಾಗೂ ವದಂತಿಗಳಲ್ಲಿ ಸಿಲುಕಿದ ಸಂಬಂಧಪಟ್ಟ ವ್ಯಕ್ತಿಗಳಿಗೆ ಬೇಸರ ಉಂಟಾಗುತ್ತದೆ ಎಂಬ ವಿಷಯ ಅರ್ಥ ಮಾಡಿಕೊಂಡರೆ ಉತ್ತಮ'' - ರಚಿತಾ ರಾಮ್, ನಟಿ

ಮದುವೆ ಫಿಕ್ಸ್ ಆಗಿಲ್ಲ.!

ಮದುವೆ ಫಿಕ್ಸ್ ಆಗಿಲ್ಲ.!

''ಅತಿ ಮುಖ್ಯವಾದ ಸಂಗತಿ ಏನಂದರೆ ಸದ್ಯಕ್ಕೆ ನನ್ನ ಮದುವೆ ನಿಶ್ಚಯವಾಗಿಲ್ಲ'' ಎಂದು ಹೇಳುವ ಮೂಲಕ ಮದುವೆ ಕುರಿತಾದ ಎಲ್ಲಾ ಗಾಸಿಪ್ ಗಳಿಗೆ ನಟಿ ರಚಿತಾ ರಾಮ್ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಎಲ್ಲರಿಗೂ ತಿಳಿಸಿ ಮದುವೆ ಆಗುವೆ

ಎಲ್ಲರಿಗೂ ತಿಳಿಸಿ ಮದುವೆ ಆಗುವೆ

''ನಾನು ಮದುವೆ ಆಗುವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತಿಳಿಸಿ, ಎಲ್ಲರ ಸಮ್ಮುಖದಲ್ಲಿ ಗುರು ಹಿರಿಯರ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವದಂತಿಗಳನ್ನು ನಂಬಿ ವೈಯುಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ'' - ರಚಿತಾ ರಾಮ್, ನಟಿ

More from Filmibeat

English summary
Rachita Ram gives clarification about Marriage Gossip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X