ಚಿತ್ರರಂಗದಲ್ಲಿ 7 ವರ್ಷ ಪೂರೈಸಿದ ರಚಿತಾ: ನಡೆದು ಬಂದ ಹಾದಿ ನೆನೆದು ಡಿಂಪಲ್ ಕ್ವೀನ್ ಭಾವುಕ ಸಂದೇಶ

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಅಂತಾನೆ ಖ್ಯಾತಿ ಗಳಿಸಿರುವ ನಟಿ ರಚಿತಾ ರಾಮ್ ಸಿನಿಮಾರಂಗಕ್ಕೆ ಕಾಲಿಟ್ಟು 7 ವರ್ಷ ಪೂರೈಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಮುಂದೆ ರಚಿತಾ ಈಗ ಚಂದನವನದ ಟಾಪ್ ನಟಿಯಾಗಿದ್ದಾರೆ.

Recommended Video

ಇವರೆಲ್ಲಾ ಕನ್ನಡ ಸಿನಿಮಾಗಳ ಮೂಲಕವೇ ಸೂಪರ್ ಸ್ಟಾರ್ ಆದವರು | Super Star Hailed From Sandalwood

ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿರುವ ರಚ್ಚು ಈ 7 ವರ್ಷಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಚಿತಾ ಅಭಿನಯದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಕನ್ನಡಿಗರ ನೆಚ್ಚಿನ ಡಿಂಪಲ್ ಕ್ವೀನ್ 7 ವರ್ಷದ ಪಯಣವನ್ನು ನೆನೆದು ಭಾವುಕ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..

ಕಿರುತೆರೆಯಿಂದ ಬಣ್ಣದ ಲೋಕದ ಪಯಣ ಪ್ರಾರಂಭ

ಕಿರುತೆರೆಯಿಂದ ಬಣ್ಣದ ಲೋಕದ ಪಯಣ ಪ್ರಾರಂಭ

ರಚಿತಾ ರಾಮ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಸಹೋದರಿ ನಿತ್ಯಾ ರಾಮ್ ಜೊತೆ ಬೆಂಕಿಯಲ್ಲಿ ಅರಳಿದ ಹೂ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ನಂತರ ಅರಸಿ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗುತ್ತಾರೆ. ಅರಸಿ ಮೂಲಕ ಸುಮಾರು 3 ವರ್ಷಗಳ ಕಾಲ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಆ ನಂತರ 2013ರಲ್ಲಿ ಬುಲ್ ಬುಲ್ ಮೂಲಕ ಬೆಳ್ಳಿ ಪರದೆಮೇಲೆ ಮಿಂಚಲು ಪ್ರಾರಂಭಿಸಿದ್ದಾರೆ.

ಆಡಿಷನ್ ಮೂಲಕ ಬುಲ್ ಬುಲ್ ಗೆ ಆಯ್ಕೆ

ಆಡಿಷನ್ ಮೂಲಕ ಬುಲ್ ಬುಲ್ ಗೆ ಆಯ್ಕೆ

ಧಾರಾವಾಹಿಯಲ್ಲಿ ಮಿಂಚುತ್ತಿದ್ದ ರಚಿತಾಗೆ ಸಿನಿಮಾರಂಗದಲ್ಲಿ ಮಿಂಚುವ ಕನಸಿತ್ತು. ಬುಲ್ ಬುಲ್ ಸಿನಿಮಾ ಆಡಿಷನ್ ಗೆ ಹೋಗುತ್ತಾರೆ. ರಚಿತಾ ಆಡಿಷನ್ ನೀಡುವ ಮೊದಲೆ 200 ಹುಡುಗಿಯರು ಆಡಿಷನ್ ನೀಡಿದ್ದರು. ಕೊನೆಗೆ ಮುದ್ದು ಮುಖದ, ಡಿಂಪಲ್ ಸುಂದರಿ ದರ್ಶನ್ ಜೊತೆ ನಾಯಕಿಯಾಗಿ ಬಣ್ಣಹಚ್ಚಲು ಆಯ್ಕೆಯಾಗುತ್ತಾರೆ. ಮೊದಲ ಸಿನಿಮಾವೇ ರಚಿತಾಗೆ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಾರೆ.

ರಚಿತಾ ಸಿನಿಮಾ ಪಯಣ

ರಚಿತಾ ಸಿನಿಮಾ ಪಯಣ

ನಟಿ ರಚಿತಾ ರಾಮ್ ಬುಲ್ ಬುಲ್ ಸಿನಿಮಾ ನಂತರ ಮತ್ತೆ ದರ್ಶನ್ ಜೊತೆ ಅಂಬರೀಶ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ನಂತರ ರನ್ನ, ರಥಾವರ, ಚಕ್ರವ್ಯೂಹ, ಭರ್ಜರಿ, ಅಯೋಗ್ಯ, ನಟಸಾರ್ವಭೌಮ ಸಿನಿಮಾಗಳು ಸೇರಿದಂತೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಎರಡು ಭಾರಿ ಸೈಮಾ ಅವಾರ್ಡ್, ಒಂದು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ತೂಗುದೀಪ ಪ್ರೊಡಕ್ಷನ್ಸ್'ಗೆ ಸದಾ ಚಿರಋಣಿ

ತೂಗುದೀಪ ಪ್ರೊಡಕ್ಷನ್ಸ್'ಗೆ ಸದಾ ಚಿರಋಣಿ

ತೂಗುದೀಪ ನಿರ್ಮಾಣದಲ್ಲಿ ಮೂಡಿಬಂದ ಬುಲ್ ಬುಲ್ ಸಿನಿಮಾ ಮೂಲಕ ಕನ್ನಡ ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟ ರಚಿತಾ ರಾಮ್ ಮೊದಲ ಸಂಸ್ಥೆಗೆ ಸದಾ ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಚಿತಾ "ನನ್ನ ಈ ಕಲಾ ಬದುಕಿಗೆ 7 ವರ್ಷಗಳು ತುಂಬಿದೆ ಅಂದ್ರೇ ನಂಬಕ್ಕೇ ಆಗ್ತಿಲ್ಲ. ನನ್ನನ್ನ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದ ತೂಗುದೀಪ ಪ್ರೊಡಕ್ಷನ್ಸ್'ಗೆ ಸದಾ ಚಿರಋಣಿಯಾಗಿರ್ತೀನಿ" ಎಂದಿದ್ದಾರೆ.

ಈ ಪಯಣದ ನೆನಪುಗಳೀಗ ಕಣ್ತುಂಬಿ ಬರುತ್ತೆ..

ಈ ಪಯಣದ ನೆನಪುಗಳೀಗ ಕಣ್ತುಂಬಿ ಬರುತ್ತೆ..

"ಬುಲ್ ಬುಲ್'ನಿಂದ ಬೆಳ್ಳಿತೆರೆಗೆ ಇಟ್ಟ ಹೆಜ್ಜೆ ಇಂದಿಗೂ ಮಾಸಿಲ್ಲ ಇದಕ್ಕೆ ಕಾರಣ ನನ್ನ ತಂದೆ ತಾಯಿಯ ನಂಬಿಕೆ, ದೇವರ ಅನುಗ್ರಹ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳ ಆಶೀರ್ವಾದ. ಈ ಪಯಣದಲ್ಲಿ ಕಲಿತ ಪಾಠಗಳು, ಅರಿತ ಮನಸುಗಳು, ಪ್ರತಿಯೊಂದು ಸಿನಿಮಾದ ನೆನಪುಗಳು ನೆನೆಸಿಕೊಂಡ್ರೆ ಕಣ್ತುಂಬಿ ಬರುತ್ತೆ." ಎಂದು ಭಾವುಕ ಟ್ವೀಟ್ ಮಾಡಿದ್ದಾರೆ.

ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳು

ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳು

"ನನ್ನ ಸಿನಿ ಬದುಕಿನಲ್ಲಿ ನನಗೆ ಮಾರ್ಗದರ್ಶಿಗಳಾಗಿ ನಿಂತ ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳನ್ನ ಸಲ್ಲಿಸ್ತೀನಿ. ನಿಮ್ಮೆಲ್ಲರ ಪ್ರೀತಿ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ನಿಮ್ಮ, ರಚಿತರಾಮ್" ಎಂದು ಹೇಳಿದ್ದಾರೆ.

ರಚಿತಾ ಬಳಿ ಇರುವ ಸಿನಿಮಾಗಳು

ರಚಿತಾ ಬಳಿ ಇರುವ ಸಿನಿಮಾಗಳು

ರಚಿತಾ ರಾಮ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಏಕ್ ಲವ್ ಯಾ, 100, ಡಾಲಿ, ಏಪ್ರಿಲ್, ವೀರಂ, ಸೀರೆ, ಸಂಜಯ್ ಅಲಿಯಾಸ್ ಸಂಜು ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ. ವಿಶೇಷ ಅಂದರೆ ರಚಿತಾ ಒಂದು ತೆಲುಗು ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.

More from Filmibeat

English summary
Actress Rachita Ram Completed 7 years in film Industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X