»   » 'ಜಿಲ್ಕಾ ಜಿಲ್ಕಾ' ರಿಮಿಕ್ಸ್ ಹಾಡಿಗೆ ರಚಿತಾ ರಾಮ್ ಸೂಪರ್ ಡ್ಯಾನ್ಸ್!

'ಜಿಲ್ಕಾ ಜಿಲ್ಕಾ' ರಿಮಿಕ್ಸ್ ಹಾಡಿಗೆ ರಚಿತಾ ರಾಮ್ ಸೂಪರ್ ಡ್ಯಾನ್ಸ್!

Posted By:
Subscribe to Filmibeat Kannada

'ಪುಷ್ಪಕ ವಿಮಾನ' ಚಿತ್ರದ 'ಜಿಲ್ಕಾ ಜಿಲ್ಕಾ' ಸೂಪರ್ ಹಿಟ್ ಹಾಡಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮಸ್ತ್ ಹೆಜ್ಜೆ ಹಾಕಿದ್ದಾರೆ. 'ಪುಷ್ಪಕ ವಿಮಾನ' ಚಿತ್ರದಲ್ಲಿ ಬಾಲಿವುಡ್ ಸುಂದರಿ ಜೂಹಿ ಚಾವ್ಲಾ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೀಗ, ಈ ಹಾಡನ್ನ ರಿಮಿಕ್ಸ್ ಮಾಡಲಾಗಿದ್ದು, ರಿಮಿಕ್ಸ್ ಹಾಡಿನಲ್ಲಿ ರಚಿತಾ ರಾಮ್ ಸ್ಟೆಪ್ ಹಾಕಿದ್ದಾರೆ.[ಚಿತ್ರಗಳು: 'ಪುಷ್ಪಕ ವಿಮಾನ'ದಲ್ಲಿ ಜೂಹಿ ಅವರ ಗೆಟಪ್ ನೋಡಿದ್ರಾ?]

ಮೂಲ ಹಾಡಿಗೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಇದೀಗ, ಆರ್ ಜೆ ಪ್ರದೀಪ್ ಸಾರಥ್ಯದ ಸಖತ್ ಸ್ಟುಡಿಯೋಸ್ 'ಜಿಲ್ಕಾ ಜಿಲ್ಕಾ' ಹಾಡನ್ನ ರಿಮಿಕ್ಸ್ ಮಾಡಿದೆ. ಈ ಹಿಂದೆ 'ಕಿರಿಕ್ ಪಾರ್ಟಿ' ಚಿತ್ರದ 'ಹಲೋ,,,ಹೂ ಆರ್ ಯು' ಹಾಡನ್ನ ರಿಮಿಕ್ಸ್ ಮಾಡಿದ್ದರು. ಈ ಹಾಡನ್ನ ಯ್ಯೂಟ್ಯೂಬ್ ನಲ್ಲಿ ಸುಮಾರು 1.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು.

Rachita Ram Dance For Jilka Jilka Remix Song

ಅಂದ್ಹಾಗೆ. 'ಪುಷ್ಪಕ ವಿಮಾನ' ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಜೊತೆ ರಚಿತಾ ರಾಮ್ ಕೂಡ ಅಭಿನಯಿಸಿದ್ದರು. ಡಿ-ಗ್ಲಾಮರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ರಚಿತಾ, ಅಡ್ವೋಕೆಟ್ ಆಗಿ ಕಾಣಿಸಿಕೊಂಡಿದ್ದರು. ಈಗ, 'ಜಿಲ್ಕಾ ಜಿಲ್ಕಾ' ರಿಮಿಕ್ಸ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.['ಪುಷ್ಪಕ ವಿಮಾನ'ದಲ್ಲಿ ರಚಿತಾ ರಾಮ್ 'ಲಾಯರ್', ಫಸ್ಟ್ ಲುಕ್ ರಿಲೀಸ್!]

Rachita Ram Dance For Jilka Jilka Remix Song

ಸುಚಿನ್ ಈ ರಿಮಿಕ್ಸ್ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು, ಭುವನ್ ಗೌಡ ಅವರ ಕ್ಯಾಮೆರಾ ವರ್ಕ್ ಇದೆ. ಸದ್ಯ, ಜಿಲ್ಕಾ ಜಿಲ್ಕಾ' ರಿಮಿಕ್ಸ್ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದು, ಪೂರ್ತಿ ವಿಡಿಯೋ ಸಾಂಗ್ ಇಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ.

English summary
Jilka Jilka Song from Pushpaka Vimana, Which Featured Juhi Chawla in a Retro Avatar, Now Gets a Rock Twist with Rachita Ram Shaking a leg to the Remix version. This is the Second song from Sakath Studio, an initiative by RJ Pradeepa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada