ರಚ್ಚು ಮೇಲೆ ಫ್ಯಾನ್ಸ್ ಬೇಸರ: ಅಭಿಮಾನಿಗಳಿಗಾಗಿ 'ಖಡಕ್' ನಿರ್ಧಾರ ಘೋಷಿಸಿದ ಬುಲ್ ಬುಲ್

Recommended Video

I Love You Kannada Movie: ರಚಿತಾ ಮಾಡಿದ್ದು ಸರಿಯಲ್ಲ ಅಂದ್ರು ಫ್ಯಾನ್ಸ್

ಡಿಂಪಲ್ ಕ್ವೀನ್ ರಚಿತಾ ರಾಮ್ ಅಂದ್ರೆ ಪಕ್ಕದ ಮನೆ ಹುಡುಗಿ. ಸಂಪ್ರದಾಯಸ್ಥ ಹೆಣ್ಣು ಮಗಳು ಅಂತಹ ಪಾತ್ರಗಳಿಗೆ ಸೂಕ್ತ ಆಯ್ಕೆ ಎಂಬ ಮಾತು ಇಂಡಸ್ಟ್ರಿಯಲ್ಲಿದೆ. ಬುಲ್ ಬುಲ್, ರನ್ನ, ರಥಾವರ್, ಚಕ್ರವ್ಯೂಹ, ಭರ್ಜರಿ, ಅಯೋಗ್ಯ, ಸೀತಾರಾಮ ಕಲ್ಯಾಣ ಹೀಗೆ ಪ್ರತಿಯೊಂದು ಸಿನಿಮಾದಲ್ಲೂ ರಚಿತಾ ಕಾಣಿಸಿಕೊಂಡಿದ್ದು ಅದೇ ಸ್ಟೈಲ್ ನಲ್ಲೇ.

ಆದ್ರೀಗ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾದಲ್ಲಿ ರಚ್ಚು ಸಖತ್ ಬೋಲ್ಡ್ ಆಗಿದ್ದಾರೆ. ಇದುವರೆಗೂ ಇಷ್ಟೊಂದು ಬೋಲ್ಡ್ ಆಗಿ ಬುಲ್ ಬುಲ್ ಹುಡುಗಿ ಕಾಣಿಸಿಕೊಂಡೇ ಇಲ್ಲ. ಇದರಿಂದ ಎಷ್ಟು ಜನ ಖುಷಿಯಾಗಿದ್ದಾರೋ ಅಷ್ಟೇ ಜನ ಬೇಸರವಾಗಿರುವುದು ಸತ್ಯ.

ಹೌದು, ರಚಿತಾ ರಾಮ್ ಅಂದ್ರೆ ಹೀಗೆ ಇರಬೇಕು ಎಂಬ ಕಲ್ಪನೆ ಅಭಿಮಾನಿಗಳಲ್ಲಿದೆ. ಅದನ್ನ ಮೀರಿ ಇಂತಹ ಪಾತ್ರ ನಿರ್ವಹಿಸಿರುವ ರಚಿತಾಗೆ ಅಭಿಮಾನಿಗಳು 'ಲಕ್ಷ್ಮಣ ರೇಖೆ' ಹಾಕಿದ್ದಾರೆ. ಈ ಎಲ್ಲ ಪ್ರತಿಕ್ರಿಯೆಗಳನ್ನ ಪರಿಗಣಿಸಿದ ರಚ್ಚು ಇನ್ಮುಂದೆ ಇಂತಹ ಪಾತ್ರ ಮಾಡೋದೆ ಇಲ್ಲ ಎಂದು ನಿರ್ಧರಿಸಿಬಿಟ್ಟಿದ್ದಾರೆ. ಅಷ್ಟಕ್ಕೂ, ಐ ಲವ್ ಯೂ ಸಿನಿಮಾದಲ್ಲಿ ರಚಿತಾ ಪಾತ್ರ ಹೇಗಿದೆ? ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದೇಕೆ?

ಅಭಿಮಾನಿಗಳು ಬೇಸರ

ಅಭಿಮಾನಿಗಳು ಬೇಸರ

'ಐ ಲವ್ ಯೂ' ಸಿನಿಮಾದಲ್ಲಿ ರಚಿತಾ ರಾಮ್ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ಹಾಡು ಮತ್ತು ಕೆಲವು ದೃಶ್ಯಗಳಲ್ಲಿ ಹಾಟ್ ಆಗಿ ರಚ್ಚು ಅಭಿನಯಿಸಿದ್ದಾರಂತೆ. ಇದು ಅಭಿಮಾನಿಗಳಿಗೆ ನೋವು ಉಂಟು ಮಾಡಿದೆ. ರಚಿತಾ ರಾಮ್ ಇಷ್ಟು ಬೋಲ್ಡ್ ಮಾತ್ರ ಮಾಡಬಾರದು. ಇಂತಹ ಪಾತ್ರದಲ್ಲಿ ನೋಡಲು ಕಷ್ಟವಾಗುತ್ತೆ ಎಂದು ರಚ್ಚುಗೆ ತಿಳಿಸಿದ್ದಾರೆ.

ಮೊದಲ ಸಿನಿಮಾನೂ ಇದೆ

ಮೊದಲ ಸಿನಿಮಾನೂ ಇದೆ

ಅಭಿಮಾನಿಗಳ ಪ್ರತಿಕ್ರಿಯೆ ಬಳಿ ನಟಿ ರಚಿತಾ ರಾಮ್ ಒಂದು ದೃಢವಾದ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ. ಐ ಲವ್ ಯೂ ಸಿನಿಮಾದಲ್ಲಿ ಮಾಡಿರುವಂತಹ ಪಾತ್ರಗಳನ್ನ ಮುಂದಿನ ದಿನದಲ್ಲಿ ಮಾಡಲ್ಲ. ಇದೇ ಮೊದಲ ಸಿನಿಮಾ ಮತ್ತು ಇದೇ ಕೊನೆಯ ಸಿನಿಮಾ ಎಂದು ರಚಿತಾ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಈ ಸಿನಿಮಾ ಒಪ್ಪಿದ್ದು ಕಥೆ ಕೇಳಿ

ಈ ಸಿನಿಮಾ ಒಪ್ಪಿದ್ದು ಕಥೆ ಕೇಳಿ

ಕೇವಲ ಒಂದು ಹಾಡು ಮತ್ತು ಕೆಲವು ದೃಶ್ಯಗಳನ್ನ ಕೇಳಿ ಈ ಸಿನಿಮಾ ಮಾಡಿಲ್ಲ. ಐ ಲವ್ ಯೂ ಚಿತ್ರದ ಕಥೆ ಕೇಳಿ ಇಷ್ಟಪಟ್ಟು ಮಾಡಿದ್ದು. ಆದ್ರೆ, ಆ ಪಾತ್ರ ಮಾಡಿದ್ಮೇಲೆ ಇಂತಹ ದೃಶ್ಯಗಳಲ್ಲಿ ನಟಿಸುವ ಅವಶ್ಯಕತೆ ಇತ್ತು. ಹಾಗಾಗಿ, ಅನಿವಾರ್ಯವಾಗಿ ಮಾಡಬೇಕಾಯಿತು ಎಂದು ರಚ್ಚು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಅಭಿಮಾನಿಗಳ ಮಾತಿಗೆ ಮಣಿದ ರಚ್ಚು

ಅಭಿಮಾನಿಗಳ ಮಾತಿಗೆ ಮಣಿದ ರಚ್ಚು

ಹಾಗ್ನೋಡಿದ್ರೆ, ಅಭಿಮಾನಿಗಳ ಮಾತಿಗೆ ರಚಿತಾ ರಾಮ್ ತುಂಬಾ ಬೆಲೆ ಕೊಡ್ತಾರೆ. ಎಲ್ಲಿಯವರೆಗೂ ನನ್ನನ್ನು ಬೇಕು ಎಂದು ಅವಕಾಶ ಕೊಡ್ತಾರೋ ಅಲ್ಲಿಯವರೆಗೂ ನಾನು ಸಿನಿಮಾದಲ್ಲಿ ನಟಿಸುತ್ತೇನೆ. ಯಾವಾಗ ಬೇಡ ಅಂತಾರೋ ಹಾಹ ನಟನೆ ನಿಲ್ಲಿಸುತ್ತೇನೆ ಎಂದು ರಚಿತಾ ಈ ಹಿಂದೆಯೂ ಹೇಳಿಕೊಂಡಿದ್ದರು. ಈಗಲೂ ಅಭಿಮಾನಿಗಳಿಗೆ ಇಷ್ಟ ಆಗ್ತಿಲ್ಲ ಎಂಬ ಕಾರಣಕ್ಕೆ ನಾನು ಇಂತಹ ಪಾತ್ರ ಮಾಡಲ್ಲ ಎಂದು ತಿಳಿಸಿದ್ದಾರೆ.

More from Filmibeat

English summary
Kannada actress Rachita ram fans express displeasure against Bulbul actress. because, she acted very bold and hot in i love you movie. so, fans dont want to seen in this kind of characters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X