'ಬುಲ್ ಬುಲ್' ಹುಡುಗಿಯ ಇಷ್ಟದ ಸೀರೆ ಮತ್ತು ಇಷ್ಟದ ಫೋಟೋ ಕಥೆ
Recommended Video

''ಸೀರೇಲಿ ಹುಡುಗೀರ ನೋಡಲೇಬಾರದು ನಿಲ್ಲಲ್ಲ ಟೆಂಪ್ರೆಚರ್......ಸ್ಕೂಲಲ್ಲೇ ಹೇಳಿ ಕೊಡಬಹುದಿತ್ತು ಹೇಳಿಲ್ಲ ನಮ್ ಟೀಚರ್....'' ಈ ಸಾಲುಗಳನ್ನ ಬರೆದಿರೋದೆ ಸೀರೇಲಿ ಇರೋ ಹುಡುಗೀರನ್ನ ನೋಡಿಯೇ ಅನಿಸುತ್ತೆ.
ಅಂದ್ಹಾಗೆ, ಈ ಹಾಡಿನಲ್ಲಿ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಬುಲ್ ಬುಲ್ ರಚಿತಾ ರಾಮ್. ಯಾವಾಗಲೂ ಗ್ಲಾಮರ್, ಮಾಡ್ರನ್ ಹುಡುಗಿಯಾಗಿ ಕಾಣಿಸಿಕೊಳ್ಳುವ ರಚಿತಾ ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ಸೀರೆ ತೊಟ್ಟಿರಬಹುದು.
ಸರಿ, ಈಗ ಸೀರೆ ವಿಷ್ಯ ಯಾಕೆ ಅಂತೀರಾ. ಇತ್ತೀಚಿಗಷ್ಟೆ ರಚಿತಾ ರಾಮ್ ಸೀರೆಯೊಂದನ್ನ ತೊಟ್ಟು ಮುದ್ದಾದ ಫೋಟೋ ಕ್ಲಿಕ್ಕಿಸಿಕೊಂಡಿದ್ರು. ಆ ಫೋಟೋವನ್ನ ಶೇರ್ ಮಾಡಿರುವ ರಚಿತಾ ಇದು ನನ್ನ ಫೆವರೇಟ್ ಫೋಟೋ ಎಂದಿದ್ದಾರೆ. ಅಷ್ಟಕ್ಕೂ, ಯಾವುದು ಅದು.? ಮುಂದೆ ಓದಿ.....

ಸೀರೆ ತುಂಬಾ ಇಷ್ಟವಂತೆ
ರಚಿತಾ ರಾಮ್ ಗೆ ಸೀರೆ ಅಂದ್ರೆ ತುಂಬಾ ಇಷ್ಟವಂತೆ. ಇತ್ತೀಚಿಗಷ್ಟೆ 'ರುಸ್ತುಂ' ಚಿತ್ರದಲ್ಲಿ ಸೀರೆ ತೊಟ್ಟು ಅಭಿನಯಿಸಿದ್ದಾರೆ. ತಮ್ಮ ಲುಕ್ ನೋಡಿದ ರಚಿತಾಗೆ ತನ್ನ ಮೇಲೆಯೇ ಲವ್ ಆಗಿದೆ. ಮಹಿಳೆಯೂ ಸೀರೆಯಲ್ಲಿ ಹಾಟ್ ಹಾಗೂ ಬ್ಯೂಟಿಫುಲ್ ಆಗಿ ಕಾಣಿಸ್ತಾರೆ ಎಂದು ಬುಲ್ ಬುಲ್ ಸ್ಟೇಟಸ್ ಹಾಕಿಕೊಂಡಿದ್ದಾರೆ.

ನೆಚ್ಚಿನ ಫೋಟೋ ಇದು
ಇನ್ನು 'ರುಸ್ತುಂ' ಚಿತ್ರದಲ್ಲಿ ರಚಿತಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಒಂದು ದೃಶ್ಯದಲ್ಲಿ ರಚಿತಾ ಕೆನ್ನೆಯ ಮೇಲೆ ನಟರೊಬ್ಬರ ಕೈಯಿಟ್ಟಿದ್ದಾರೆ. ಈ ಫೋಟೋ ಹಂಚಿಕೊಂಡಿರುವ ರಚಿತಾ, ಇದು ನನ್ನ ನೆಚ್ಚಿನ ಫೋಟೋ ಎಂದಿದ್ದಾರೆ. ಈ ಫೋಟೋದಲ್ಲಿರುವ ನಟ ಬಾಲಿವುಡ್ ಸ್ಟಾರ್ ವಿವೇಕ್ ಒಬೇರಾಯ್.

ರುಸ್ತುಂ ಫ್ಯಾಮಿಲಿಯಲ್ಲಿ ರಚಿತಾ
ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ 'ರುಸ್ತುಂ' ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದು, ವಿವೇಕ್ ಒಬೇರಾಯ್, ಮೂಯರಿ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದು, 'ರುಸ್ತುಂ' ಫ್ಯಾಮಯಲಿ ಫೋಟೋದಲ್ಲಿ ಮಿಂಚಿದ್ದಾರೆ.

ರುಸ್ತುಂನಲ್ಲಿ ರಚಿತಾ ಏನು.?
ಸದ್ಯಕ್ಕೆ 'ರುಸ್ತುಂ' ಚಿತ್ರದಲ್ಲಿ ರಚಿತಾ ಪಾತ್ರವೇನು ಎಂಬುದು ಬಹಿರಂಗವಾಗಿಲ್ಲ. ಆದ್ರೆ, ವಿವೇಕ್ ಒಬೇರಾಯ್ ಜೊತೆ ಕಾಣಿಸಿಕೊಂಡಿರುವುದು ಗಮನ ಸೆಳೆಯುತ್ತಿದೆ. ಈ ಕುತೂಹಲಕ್ಕೆ ನಿರ್ದೇಶಕರೇ ಉತ್ತರ ನೀಡಬೇಕಿದೆ.


Click it and Unblock the Notifications











