For Quick Alerts
  ALLOW NOTIFICATIONS  
  For Daily Alerts

  ಫಸ್ಟ್‌ನೈಟ್‌ನಲ್ಲಿ ಏನ್ಮಾಡ್ತಾರೆ?: ರಚಿತಾ ವಿರುದ್ಧ ಕೆರಳಿದ ಕ್ರಾಂತಿದಳ

  |

  ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಲವ್ ಯು ರಚ್ಚು ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ವೇಳೆ ನೀಡಿದ ಒಂದು ಹೇಳಿಕೆ ರಚಿತಾ ರಾಮ್‌ರನ್ನು ಪೇಚಿಗೆ ಸಿಲುಕಿಸಿದೆ. ಕರ್ನಾಟಕದ ಹಲವು ಸಂಘಟನೆಗಳು ಡಿಂಪಲ್ ಕ್ವೀನ್ ವಿರುದ್ಧ ಕಿಡಿಕಾರಿದ್ದಾರೆ. ರಚಿತಾ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಟಿಯ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

  ಕೃಷ್ಣ ಅಜೇಯ್ ರಾವ್ ಹಾಗೂ ರಚಿತಾ ರಾಮ್ ನಟಿಸುತ್ತಿರುವ ಲವ್ ಯು ರಚ್ಚು ಸಿನಿಮಾ ರೊಮ್ಯಾಂಟಿಕ್ ಸಾಂಗ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಚಿತ್ರತಂಡ ಒಂದು ಪ್ರೆಸ್‌ಮೀಟ್ ಅನ್ನು ಕರೆದಿತ್ತು. ಆಗ ರಚಿತಾ ಹಾಡಿನ ರೊಮ್ಯಾಂಟಿಕ್ ಸೀನ್ ಬಗ್ಗೆ ವಿವರಿಸುವಾಗ ಫಸ್ಟ್‌ನೈಟ್ ಬಗ್ಗೆ ಪಾಠ ಮಾಡಿದ್ದರು. ಅದೇ ಹೇಳಿಕೆ ಈಗ ಡಿಂಪಲ್ ಕ್ವೀನ್‌ಗೆ ಕಂಟಕವಾಗಿ ಪರಿಣಮಿಸಿದೆ. ಚಾಮರಾಜ ನಗರದ ಕ್ರಾಂತಿದಳ ಸಂಘಟನೆ ರಚಿತಾ ರಾಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

  ರಚಿತಾ ರಾಮ್ ವಿರುದ್ಧ ಕೆರಳಿದ ಕ್ರಾಂತಿದಳ

  ಚಾಮರಾಜನಗರದ ಕನ್ನಡ ಕ್ರಾಂತಿದಳ ಸಂಘಟನೆ ರಚಿತಾ ರಾಮ್ ನೀಡಿದ ಫಸ್ಟ್‌ನೈಟ್ ಹೇಳಿಕೆ ವಿರುದ್ದ ಸಿಡಿದೆದ್ದಿದೆ. ರಚಿತಾ ರಾಮ್ ನೀಡಿರುವ ಫಸ್ಟ್ ನೈಟ್ ಹೇಳಿಕೆಯನ್ನು ಖಂಡಿಸುತ್ತೇವೆ. ಸ್ಯಾಂಡಲ್‌ವುಡ್ ನಟಿ ರಚಿತಾ ಈ ಹೇಳಿಕೆ ವಿರುದ್ಧ ಸಾರ್ವಜನಿಕರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕನ್ನಡ ಕ್ರಾಂತಿ ಸಂಘಟನೆ ಆಗ್ರಹಿಸಿದೆ. " ರಚಿತಾ ರಾಮ್ ನೀಡಿದ ಹೇಳಿಕೆ ಕನ್ನಡ ನಾಡಿನ ಸಂಸ್ಕೃತಿಗೆ ವಿರುದ್ಧವಾಗಿದೆ. ರಾಜ್ಯದ ಪ್ರತಿಷ್ಠೆಗೆ ಧಕ್ಕೆ ತಂದಿದೆ." ಎಂದು ಸಂಘಟನೆಯ ಅಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.

  ರಚಿತಾ ರಾಮ್ ಬ್ಯಾನ್ ಮಾಡಿ: ವಾಣಿಜ್ಯ ಮಂಡಳಿಗೆ ದೂರು

  ಲವ್ ಯು ರಚ್ಚು ಚಿತ್ರದ ಮುದ್ದು ನೀನು ರೊಮ್ಯಾಂಟಿಕ್ ಸಾಂಗ್ ಬಿಡುಗಡೆ ವೇಳೆ ರಚಿತಾ ರಾಮ್ ನೀಡಿದ ಹೇಳಿಕೆ ರಾಜ್ಯದ ಬೇರೆ ಬೇರೆ ಕಡೆ ವಿರೋಧ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಕನ್ನಡ ಕ್ರಾಂತಿದಳ ಕೂಡ ವಿರೋಧ ವ್ಯಕ್ತಪಡಿಸಿತ್ತು. ಈ ವೇಳೆ ಬೇಜವಾಬ್ದಾರಿ ಹೇಳಿಕೆ ನೀಡಿದ ರಚಿತಾ ರಾಮ್‌ರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು. ಹೀಗಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಸಂಘಟನೆ ಮನವಿ ಮಾಡಿಕೊಂಡಿದೆ.

  Rachita Ram First Night Statement Chamarajanagar Kranti Dal Demands ban on Actress

  ರಚಿತಾ ಫಸ್ಟ್‌ನೈಟ್ ಪಾಠ ಮಾಡಿದ್ದೇಕೆ?

  ಗುರುದೇಶ್ ಪಾಂಡೆ ನಿರ್ಮಿಸುತ್ತಿರುವ ಲವ್ ಯು ರಚ್ಚು ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಅಜೇಯ್ ರಾವ್ ಜೊತೆ ರಚಿತಾ ರಾಮ್ ನಟಿಸುತ್ತಿದ್ದಾರೆ. ಇನ್ನೂ ಬಿಡುಗಡೆಯಾಗಬೇಕಿರುವ ಈ ಸಿನಿಮಾ ಒಂದು ರೊಮ್ಯಾಂಟಿಕ್ ಸಾಂಗ್‌ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಈ ಹಿಂದೆ ಹಾಟ್ ದೃಶ್ಯಗಳಲ್ಲಿ ಕಾಣಿಸುವುದಿಲ್ಲವೆಂದು ಹೇಳಿದ್ದ ರಚಿತಾಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದರು. ಇದರಿಂದ ಕೆರಳಿದ ಡಿಂಪಲ್ ಕ್ವೀನ್ ಫಸ್ಟ್‌ನೈಟ್‌ನಲ್ಲಿ ಮದುವೆಯಾದ ಜೋಡಿ ಏನು ಮಾಡುತ್ತೆ? ಎಂದು ಪ್ರಶ್ನೆ ಮಾಡಿದ್ದರು. ಅದೇ ಹೇಳಿಕೆ ಈಗ ಟ್ರೋಲಿಗರ ಕೈಗೆ ಸಿಕ್ಕು ಟ್ರೋಲ್ ಆಗುತ್ತಿದೆ. ಕೆಲ ಸಂಘಟನೆಗಳು ಈ ಹೇಳಿಕೆಯನ್ನು ಖಂಡಿಸಿವೆ.

  ಏಕ್ ಲವ್ ಯಾ ಚಿತ್ರದಲ್ಲೂ ಎಣ್ಣೆ ಬಾಟಲಿ ಹಿಡಿದ ರಚಿತಾ

  ಫಸ್ಟ್‌ನೈಟ್ ಹೇಳಿಕೆ ವಿವಾದಕ್ಕೆ ಸಿಲುಕಿದರೂ ರೊಮ್ಯಾಂಟಿಕ್ ಹಾಡಿಗೆ ಯುಟ್ಯೂಬ್‌ನಲ್ಲಿ ಹೆಚ್ಚು ಮಂದಿ ವೀಕ್ಷಿಸುತ್ತಿದ್ದಾರೆ. ಈ ಮಧ್ಯೆನೇ ಏಕ್ ಲವ್ ಯಾ ಸಿನಿಮಾದ ಮೂರನೇ ಹಾಡು ಸದ್ದು ಮಾಡುತ್ತಿದೆ. ವಿಶೇಷ ಅಂದ್ರೆ, ಈ ಹಾಡಿನಲ್ಲಿ ರಚಿತಾ ರಾಮ್ ಎಣ್ಣೆ ಬಾಟಲಿ ಹಿಡಿದು ಲವ್ ಬ್ರೇಕಪ್ ಪಾಠ ಮಾಡಿದ್ದಾರೆ. ಜೋಗಿ ನಿರ್ದೇಶಿಸಿ, ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡು ಪ್ರೇಮಿಗಳಿಗೆ ಕಿಕ್ ಕೊಡುತ್ತಿದೆ. ರಾಬರ್ಟ್ ಚಿತ್ರದ ಕಣ್ಣು ಹೊಡೆಯಾಕಾ ಅಂತ ಹಾಡಿದ್ದ ಮಂಗ್ಲಿ ಹಾಡಿದ್ದು, ಸದ್ಯ ಈ ಹಾಡು ಕೂಡ ವೈರಲ್ ಆಗುತ್ತಿದೆ.

  English summary
  Kannada Actress Rachita Ram's statement on firstnight in the pressmeet of love u rachchu movie, chamarajanagara kranti dala demands bans on actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X