For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್‌ ಅಭಿನಯದ ಮೊದಲ ತೆಲುಗು ಚಿತ್ರ 'ಸೂಪರ್ ಮಚ್ಚಿ' ರಿಲೀಸ್!

  |

  ಕನ್ನಡದ ನಟಿ ರಚಿತಾ ರಾಮ್‌ ಸದ್ಯ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಚಿತ್ರಗಳನ್ನು ಮಾಡಿದ ರಚಿತಾ ರಾಮ್ ಈಗ ತೆಲುಗು ಚಿತ್ರ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕನ್ನಡದಲ್ಲೂ ಕೂಡ ಅತ್ಯಂತ ಹೆಚ್ಚು ಚಿತ್ರಗಳನ್ನು ಮಾಡುತ್ತಿರುವ ನಟಿ ಅಂದರೆ ಅದು ರಚಿತಾ ರಾಮ್‌ ಮಾತ್ರ.

  ತೆಲುಗು ನೆಲದಲ್ಲಿ ಮಿಂಚೋಕ್ಕೆ ರೆಡಿಯಾದ ರೌಡಿ ಬೇಬಿ ರಚ್ಚು

  ರಚಿತಾ ರಾಮ್ ಯಾವುದೋ ಒಂದು ರೀತಿಯ ಪಾತ್ರಕ್ಕೆ ಸೀಮಿತ ಆಗಿಲ್ಲ. ಮೊದಲೆಲ್ಲಾ ಸ್ಟಾರ್ ನಟರ ಜೊತೆಗೆ ಅಭಿನಯಿಸುತ್ತಿದ್ದ ರಚಿತಾ ರಾಮ್ ಈಗ ವಿಭಿನ್ನ ಪಾತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ತೆಲುಗಿನ ಸೂಪರ್ ಮಚ್ಚಿ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್‌ ಅವರು ಅಭಿನಯಿಸಿದ್ದಾರೆ. ಈ ಮೂಲಕ ರಚಿತಾ ರಾಮ್ ತೆಲುಗಿಗೆ ಪದಾರ್ಪಣೆ ಮಾಡಿದ್ದಾರೆ.

  ಸದ್ಯ ಈ ಚಿತ್ರ ರಿಲೀಸ್‌ಗೆ ಆಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರ ರಿಲೀಸ್‌ ಆಗಿದೆ. ಚಿತ್ರದಲ್ಲಿ ರಚಿತಾ ರಾಮ್, ಹೋಮ್ಲಿ ಹುಡುಗಿಯಂತೆ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ರಿಲೀಸ್‌ ಆದ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ ಎಂಬುವುದನ್ನು ಮುಂದೆ ಓದಿ....

  ವೀನಾಕ್ಷಿ ಪಾತ್ರದಲ್ಲಿ ರಚಿತಾ ರಾಮ್!

  ವೀನಾಕ್ಷಿ ಪಾತ್ರದಲ್ಲಿ ರಚಿತಾ ರಾಮ್!

  ರಾಜು ಪಾತ್ರದಲ್ಲಿ ನಾಯಕ ಕಲ್ಯಾಣ್ ದೇವ್, ಮೀನಾಕ್ಷಿ ಪಾತ್ರದಲ್ಲಿ ನಟಿ ರಚಿತಾ ರಾಮ್‌ ಅಭಿನಯಿಸಿದ್ದಾರೆ. ರಾಜು ಯಾವುದೇ ಜವಾಬ್ದಾರಿಯಿಲ್ಲದೆ ಸ್ನೇಹಿತರ ಜೊತೆ ಸುತ್ತಾಡುತ್ತಾ ಬಾರ್‌ನಲ್ಲಿ ಟೈಮ್‌ ಪಾಸ್ ಮಾಡುತ್ತಾ ಇರುತ್ತಾನೆ. ಮೀನಾಕ್ಷಿ ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಮೀನಾಕ್ಷಿ ರಾಜುವನ್ನು ಹುಚ್ಚಿಯಂತೆ ಪ್ರೀತಿಸುತ್ತಾಳೆ. ಆದರೆ ರಾಜ ಅವಳನ್ನು ಪ್ರೀತಿಸಲು ನಿರಾಕರಿಸುತ್ತಾನೆ. ಇದು ಚಿತ್ರ ಪ್ರಮುಖ ಅಂಶ.

  ಟ್ರೇಲರ್‌ನಲ್ಲಿ ಇಷ್ಟ ಆಗುವ ರಚಿತಾ ರಾಮ್ ಪಾತ್ರ!

  ಟ್ರೇಲರ್‌ನಲ್ಲಿ ಇಷ್ಟ ಆಗುವ ರಚಿತಾ ರಾಮ್ ಪಾತ್ರ!

  ರಚಿತಾ ರಾಮ್‌ ಪಾತ್ರ ಏನು ಎನ್ನುವುದು ಟ್ರೇಲರ್‌ನಲ್ಲಿ ಅನಾವರಣ ಆಗಿದೆ. ಪ್ರೀತಿಸು ಎಂದು ನಾಯಕನ ಹಿಂದೆ ಬೀಳುವ ಹುಡುಗಿಯಾಗಿ ರಚಿತಾ ರಾಮ್‌ ಕಾಣಿಸಿಕೊಂಡಿದ್ದಾಳೆ. ಇದು ಒಂದು ಲವ್‌ ಸ್ಟೋರಿ ಆಗಿದ್ದು, ಚಿತ್ರದಲ್ಲಿ ರಚಿತಾ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೇವಲ ನಾಯಕನಿಗೆ ನಟಿಯಾಗಿ ಇರುವುದು ಮಾತ್ರವಲ್ಲ. ಕಥೆಯಲ್ಲಿ ರಚಿತಾ ಪಾತ್ರ ಟ್ವಿಸ್ಟ್‌ಗೆ ಕಾರಣ ಆಗಿದೆ.

  ott ಯಲ್ಲಿ ತೆರೆ ಕಾಣಬೇಕಿದ್ದ ಚಿತ್ರ 'ಸೂಪರ್ ಮಚ್ಚಿ'!

  ott ಯಲ್ಲಿ ತೆರೆ ಕಾಣಬೇಕಿದ್ದ ಚಿತ್ರ 'ಸೂಪರ್ ಮಚ್ಚಿ'!

  ಇನ್ನು ಈ ಚಿತ್ರಕ್ಕೆ ಹೆಚ್ಚಿನ ಪ್ರಚಾರವನ್ನು ಮಾಡಿಲ್ಲ ಚಿತ್ರ ತಂಡ. ಏಕಾಏಕಿ ಚಿತ್ರವನ್ನು ಕೆಲವು ಕಡೆ ರಿಲೀಸ್ ಮಾಡಿ ಬಿಟ್ಟಿದೆ. ಇನ್ನು ಇದಕ್ಕೂ ಮೊದಲು ಈ ಚಿತ್ರ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಯಾವುದೇ ಸುಳಿವು ಇಲ್ಲದೆ. ಚಿತ್ರ ರಿಲೀಸ್‌ ಮಾಡಲಾಗಿದೆ. ಚಿತ್ರ ಟ್ರೇಲರ್‌ನಲ್ಲಿ ಮಾತ್ರ ರಿಲೀಸ್ ದಿನಾಂಕವನ್ನು ನಿಗದಿ ಮಾಡಾಗಿದೆ. ಅದನ್ನು ಹೊರತು ಪಡಿಸಿದರೆ ಚಿತ್ರದ ರಿಲೀಸ್ ಬಗ್ಗೆ ಮತ್ಯಾವ ಪ್ರಚಾರ ಮಾಡಿಲ್ಲ.

  ತೆಲುಗಿನತ್ತ ಮುಖ ಮಾಡಿರುವ ರಚಿತಾ, ಆಶಿಕಾ, ರಶ್ಮಿಕಾ, ಶ್ರೀ ಲೀಲಾ!

  ತೆಲುಗಿನತ್ತ ಮುಖ ಮಾಡಿರುವ ರಚಿತಾ, ಆಶಿಕಾ, ರಶ್ಮಿಕಾ, ಶ್ರೀ ಲೀಲಾ!

  ಇನ್ನು ಕನ್ನಡದಲ್ಲಿ ಬೇಡಿಕೆ ಇರುವ ನಟಿಯರಾದ, ರಶ್ಮಿಕಾ ಮಂದಣ್ಣ, ಆಶಿಕಾ ರಂಗನಾಥ್, ಶ್ರೀಲೀಲಾ ಮತ್ತು ರಚಿತಾ ರಾಮ್‌ ಕೂಡ ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಾ ಇದ್ದಾರೆ. ರಶ್ಮಿಕಾ ಪರಭಾಷೆಗಳಲ್ಲಿ ಈಗಾಗಲೇ ಚಿರಪರಿಚಿತ ಆಗಿದ್ದಾರೆ. ರಶ್ಮಿಕಾ ಬಳಿಕ ಶ್ರೀಲೀಲಾ, ಆಶಿಕಾ ರಂಗನಾಥ್, ರಚಿತಾ ರಾಮ್‌ ಕೂಡ ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ರಚಿತಾ ರಾಮ್‌ ಅಭಿನಯದ ಮೊದಲ ತೆಲುಗು ಚಿತ್ರ ರಿಲೀಸ್ ಆಗುತ್ತಿದೆ.

  English summary
  Rachita Ram First Telugu Movie With Kalyan Dev Super Machi Released Today, Know About The Moive,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X