ತೆಲುಗಿನ ನಂತರ ತಮಿಳು ಸಿನಿಮಾರಂಗಕ್ಕೆ ಕಾಲಿಡಲಿದ್ದಾರೆ ರಚಿತಾ ರಾಮ್

ಕನ್ನಡದ ಬ್ಯುಸಿ ನಟಿ ರಚಿತಾ ರಾಮ್ ತೆಲುಗು ಸಿನಿಮಾ ಒಂದರಲ್ಲಿ ನಟಿಸುತ್ತಿರುವುದು ಹೊಸ ಸುದ್ದದಿಯೇನಲ್ಲ. ಆದರೆ ರಚಿತಾ, ತಮಿಳು ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದಾರೆ.

ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಚಿತಾ ರಾಮ್, ಅವಕಾಶಗಳ ಮೇಲೆ ಅವಕಾಶಗಳು ಅವರನ್ನರಸಿ ಬರುತ್ತಲೇ ಇವೆ. ಇಷ್ಟು ಬ್ಯುಸಿಯಾಗಿರುವ ನಟಿಗೆ ಈಗ ತೆಲುಗು-ತಮಿಳು ಅವಕಾಶಗಳು ಸಹ ಹುಡುಕಿ ಬರುತ್ತಿವೆ.

ತೆಲುಗಿನ 'ಸೂಪರ್ ಮಚ್ಚಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಚಿತಾ ರಾಮ್, ಇದು ಅವರ ನಟನೆಯ ಮೊದಲ ತೆಲುಗು ಸಿನಿಮಾ. ತೆಲುಗು ಸಿನಿಮಾ ಬಿಡುಗಡೆ ಆಗುವ ಮುನ್ನವೇ ರಚಿತಾ ಗೆ ತಮಿಳಿನಿಂದ ಆಫರ್‌ಗಳು ಬರಲಾರಂಭಿಸಿವೆ.

ತಮಿಳು ಸಿನಿಮಾದ ಬಗ್ಗೆ ಶೀಘ್ರದಲ್ಲೇ ಘೋಷಣೆ: ರಚಿತಾ

ತಮಿಳು ಸಿನಿಮಾದ ಬಗ್ಗೆ ಶೀಘ್ರದಲ್ಲೇ ಘೋಷಣೆ: ರಚಿತಾ

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಚಿತಾ ರಾಮ್, ತಮಿಳು ಸಿನಿಮಾರಂಗದಲ್ಲಿ ಆಫರ್‌ಗಳು ಬರುತ್ತಿವೆ. ಒಂದು ಸಿನಿಮಾ ಪಕ್ಕಾ ಆಗುವುದರಲ್ಲಿದೆ. ಆ ಸಿನಿಮಾ ಬಗ್ಗೆ ನಾನೇ ಸದ್ಯದಲ್ಲೇ ಅನೌನ್ಸ್ ಮಾಡುವೆ' ಎಂದಿದ್ದಾರೆ ರಚಿತಾ ರಾಮ್.

ನಮಗೂ ತೆಲುಗು ಸಿನಿಮಾರಂಗಕ್ಕು ಹೆಚ್ಚು ವ್ಯತ್ಯಾಸವಿಲ್ಲ: ರಚಿತಾ

ನಮಗೂ ತೆಲುಗು ಸಿನಿಮಾರಂಗಕ್ಕು ಹೆಚ್ಚು ವ್ಯತ್ಯಾಸವಿಲ್ಲ: ರಚಿತಾ

ತೆಲುಗು ಸಿನಿಮಾದಲ್ಲಿ ಕೆಲಸ ಮಾಡಿರುವ ಅನುಭವದ ಬಗ್ಗೆ ಮಾತನಾಡಿರುವ ರಚಿತಾ ರಾಮ್, 'ಕನ್ನಡ ಸಿನಿಮಾರಂಗದಲ್ಲಿ ಕೆಲಸ ಮಾಡಿದಂತೆಯೇ ಅಲ್ಲಿಯೂ ಸಹ. ನಮ್ಮ ಭಾಷೆ, ಅವರ ಭಾಷೆಯಲ್ಲಿ ಸಾಕಷ್ಟು ಸಾಮ್ಯತೆ ಇದೆ. ನಾನು ಕನ್ನಡದಲ್ಲಿ ಮಾತನಾಡಿದ್ದು ಅವರಿಗೆ ಅರ್ಥವಾಗುತ್ತದೆ' ಎಂದಿದ್ದಾರೆ

ಕಲ್ಯಾಣ್ ದೇವ್ ಜೊತೆಗೆ 'ಸೂಪರ್ ಮಚ್ಚಿ'

ಕಲ್ಯಾಣ್ ದೇವ್ ಜೊತೆಗೆ 'ಸೂಪರ್ ಮಚ್ಚಿ'

ತೆಲುಗಿನ 'ಸೂಪರ್ ಮಚ್ಚಿ' ಸಿನಿಮಾದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಇದರ ನಾಯಕ ಕಲ್ಯಾಣ್ ದೇವ್. ಕೊರೊನಾ ಅನ್‌ಲಾಕ್ ಪ್ರಾರಂಭದಲ್ಲಿಯೇ ರಚಿತಾ, ಸೂಪರ್ ಮಚ್ಚಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಸಿನಿಮಾದ ಮೇಲೆ ರಚಿತಾ ಗೆ ನಿರೀಕ್ಷೆಗಳಿವೆ.

Recommended Video

ಪಾರ್ಟ್ನರ್ ಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ KL Rahul | Filmibeat Kannada
ಹಲವು ಸಿನಿಮಾಗಳಲ್ಲಿ ರಚಿತಾ ರಾಮ್ ಬ್ಯುಸಿ

ಹಲವು ಸಿನಿಮಾಗಳಲ್ಲಿ ರಚಿತಾ ರಾಮ್ ಬ್ಯುಸಿ

ಇನ್ನು ಕನ್ನಡದಲ್ಲಿ, ಪ್ರೇಮ್ ನಿರ್ದೇಶನದ 'ಏಕ್‌ಲವ್ ಯಾ', ರಮೇಶ್ ಅರವಿಂದ್ ಜೊತೆಗೆ '100', ವಿಜಯ್ ಗೌಡ ನಿರ್ದೇಶನದ 'ಲಿಲ್ಲಿ', ಪ್ರಜ್ವಲ್ ದೇವರಾಜ್ ಜೊತೆ 'ವೀರಂ', ಧನಂಜಯ್ ಜೊತೆಗೆ 'ಡಾಲಿ', ಚಿರಂಜೀವಿ ಸರ್ಜಾ ಜೊತೆ ನಟಿಸಿದ್ದ 'ಏಪ್ರಿಲ್', ನೀನಾಸಂ ಸತೀಶ್ ಜೊತೆಗೆ 'ಮ್ಯಾಟ್ನಿ', ದಿಗಂತ್ ಜೊತೆಗೆ ಒಂದೂರಲ್ಲಿ ಒಬ್ಬ ರಾಜ, ತಮಿಳಿನ ಕೊಲಮಾವು ಕೋಕಿಲ ರೀಮೇಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಚಿತಾ.

More from Filmibeat

English summary
Rachita Ram who is busy in Sandalwood movies now acting in her first Telugu movie. She said she is getting offers from Tamil movie industry too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X